Important

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

Share

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ ಟಿ.ವಿ ಹೆಸರನ್ನು ಕೆಲವರು ದುರ್ಬಳಕೆ ಮಾಡುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ, “ವಿಸ್ಮಯ ಟಿ.ವಿ” ಹೆಸರನ್ನು ಹೇಳಿಕೊಂಡು ಜಾತ್ರೆಗಳಲ್ಲಿ ಎಲ್‌ಇಡಿ ಮೂಲಕ ಜಾಹೀರಾತು ಪ್ರದರ್ಶನ ಮಾಡುತ್ತೇವೆ ಎಂದು ಹೇಳಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಈ ಬಗ್ಗೆ ವಿಸ್ಮಯ ಟಿ.ವಿ ಸ್ಪಷ್ಟಪಡಿಸುವುದು ಏನೆಂದರೆ, ಜಾತ್ರೆಗಳಲ್ಲಿ ವಿಸ್ಮಯ ಟಿ.ವಿ ಯಾವುದೇ ಎಲ್‌ಇಡಿ ವ್ಯವಸ್ಥೆಯನ್ನು ಮಾಡುತ್ತಿಲ್ಲ.
ಹಾಗೆಯೇ, ಜಾತ್ರೆಯ ಎಲ್‌ಇಡಿ ಜಾಹೀರಾತುಗಳನ್ನು ನಾವು ತೆಗೆದುಕೊಳ್ಳುತ್ತಿಲ್ಲ.. ನಮ್ಮ ಯಾವುದೇ ವರದಿಗಾರರು ಅಥವಾ ಮಾರ್ಕೆಟಿಂಗ್ ಪ್ರತಿನಿಧಿಗಳು ಇಂತಹ ಜಾಹೀರಾತು ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮ ಟಿ.ವಿ ಚಾನಲ್‌ಗೆ ಮಾತ್ರ ನಾವು ಜಾಹೀರಾತು ತೆಗೆದುಕೊಳ್ಳುತ್ತಿದ್ದೇವೆ. ಅಲ್ಲದೆ, ಅವುಗಳನ್ನು ನಮ್ಮ ಅಧಿಕೃತ ಸೋಷಿಯಲ್ ಪೇಜ್‌ನಲ್ಲಿ ಪರಿಶೀಲಿಸಬಹುದು.

ಆದ್ದರಿಂದ, ವೀಕ್ಷಕರು ಹಾಗೂ ಜಾಹೀರಾತುದಾರರು ಎಚ್ಚರಿಕೆಯಿಂದ ಇರಬೇಕು. ಜಾತ್ರೆಯ ವೇಳೆ ಎಲ್‌ಇಡಿಗೆಂದು ವಿಸ್ಮಯ ಟಿ.ವಿ ಹೆಸರಿನಲ್ಲಿ ಜಾಹೀರಾತು ಕೇಳಿದರೆ, ದಯವಿಟ್ಟು ಪರಿಶೀಲಿಸಿ, ಮೋಸಕ್ಕೆ ಒಳಗಾಗಬೇಡಿ. ಯಾವುದೇ ಅನುಮಾನ ಅಥವಾ ಗೊಂದಲ ಇದ್ದಲ್ಲಿ, ತಕ್ಷಣ ನಮ್ಮನ್ನು ಸಂಪರ್ಕಿಸಿ: 9591537698 . ವಿಸ್ಮಯ ಟಿ.ವಿ ಹೆಸರನ್ನು ದುರುಪಯೋಗಪಡಿಸಿಕೊಂಡು ಜಾಹೀರಾತು ಕಲೆಕ್ಷನ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಇಂತಹ ದುರ್ಬಳಕೆ ತಪ್ಪಿಸಲು ಜಾಹೀರಾತುದಾರರು ವಿಸ್ಮಯ ಟಿ.ವಿಯ ಅಧಿಕೃತ ಬಿಲ್ ಪಡೆದು ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಅಥವಾ ನಮ್ಮ ಬಿಲ್ ನಲ್ಲಿರುವ QR ಕೋಡ್‌ಗೆ ಹಣವನ್ನು ಸಂದಾಯಮಾಡಬಹುದಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ...

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು. ಉತ್ಸಾಹದಿಂದ ಶಾಲಾ ಅಂಗಳದತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ, ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಸರಸ್ವತಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು....

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...