ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ ಮಯ್ಯರ್ ಮನೆಯಲ್ಲಿ ವಾಸ್ತವ್ಯ ಮಾಡಲಿದೆ. ಏಪ್ರಿಲ್ 10ರ ರಾತ್ರಿ ರಥಬೀದಿಯಲ್ಲಿರುವ ಗೋಕರ್ಣ ಉಪಾಧಿವಂತ ಮಂಡಳದ ಕಾರ್ಯದರ್ಶಿಗಳಾದ ಬಾಲಕೃಷ್ಣ ಗಣಪತಿ ಜಂಬೆ ಅವರ ಮನೆಗೆ ವಾಸ್ತವ್ಯಕ್ಕೆ ಆಗಮಿಸಲಿದ್ದು, ಏಪ್ರಿಲ್ 10ರ ಶುಕ್ರವಾರ ವಿವಿಧ ಸೇವೆಗಳು ನೆರವೇರಲಿವೆ. ಈ ವೇಳೆ ಸದ್ಬಕ್ತರಿಗೆ ದರ್ಶನಕ್ಕೆ ಮತ್ತು ಫಲಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಪವಿತ್ರ ಸಂದರ್ಭವು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ, ಶಾಂತಿ ಹಾಗೂ ಸದ್ಗುರುವಿನ ಆಶೀರ್ವಾದ ಪಡೆಯುವ ಅಪೂರ್ವ ಅವಕಾಶ ಒದಗಿಸಿದೆ. ದರ್ಶನದ ವ್ಯವಸ್ಥೆಯನ್ನು ಸರಿಯಾಗಿ ಮಾಡಲಾಗಿದ್ದು, ಭಕ್ತರು ಶಿಸ್ತಿನಿಂದ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಬಹುದಾಗಿದೆ. ಮೊಬೈಲ್ ನಂಬರ್: 9448722896
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್












