ಬೆಳಂಬಾರದ ಸಾಂಪ್ರದಾಯಿಕ ಮೀನುಗಾರರ ಜೀವನಕ್ಕೆ ಭಾರೀ ಧಕ್ಕೆ: 1200 ಕ್ಕೂ ಹೆಚ್ಚು ಮನೆಗಳಿಗೆ ಅಪಾಯ
- 1200 ಕ್ಕೂ ಹೆಚ್ಚು ಮೀನುಗಾರರ ಮನೆಗಳಿಗೆ ಅಪಾಯ
- ಅಲೆಗಳ ಅಬ್ಬರ ಹೆಚ್ಚಿಸುವ ಭೀತಿ
- ಮನೆ, ದೋಣಿ, ಉಪಕರಣಗಳಿಗೆ ನಷ್ಟದ ಸಾಧ್ಯತೆ
- ಮೀನುಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ
ಅಂಕೋಲಾ, ಆಗಸ್ಟ್ 21 : ತಾಲೂಕಿನ ಕೇಣಿಯಲ್ಲಿ ಉದ್ದೇಶಿತವಾಗಿರುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬಿಡುವಂತೆ, ಯುವ ಮೀನುಗಾರ ಮುಖಂಡ ಹಾಗೂ ಬೆಳಂಬಾರದ ನಾಡದೋಣಿ ಸಂಘದ ಕಾರ್ಯದರ್ಶಿ ಸುಂದರ್ ಖಾರ್ವಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ: ಬೃಹತ್ ಜನಾಗ್ರಹ-ಧರ್ಮಸಭೆ
ಬಂದರು ನಿರ್ಮಾಣದಿಂದ ಉಂಟಾಗುವ ಆತಂಕ ಏನು?
ಯೋಜನೆಯ ಪ್ರಕಾರ ಸಮುದ್ರದಲ್ಲಿ ಸುಮಾರು 4000 ಮೀಟರ್ ಉದ್ದದ ತಡೆಗೋಡೆ ನಿರ್ಮಾಣವಾಗಲಿದೆ.
ನೈರುತ್ಯ ದಿಕ್ಕಿನಿಂದ ಬೀಸುವ ಗಾಳಿ ಈ ತಡೆಗೋಡೆಗೆ ಬಡಿದು, ಬೆಳಂಬಾರದ ಕಡೆಗೆ ಅಲೆಗಳ ಅಬ್ಬರವನ್ನು ಹೆಚ್ಚಿಸಲಿದೆ.
ಇದರ ಪರಿಣಾಮವಾಗಿ ಭಾರೀ ಅಲೆಗಳು ಬೆಳಂಬಾರ ಕಡಲ ತೀರಕ್ಕೆ ಅಪ್ಪಳಿಸುವ ಅಪಾಯವಿದೆ.
ಮೀನುಗಾರರ ಮನೆಗಳು ಮತ್ತು ದೋಣಿಗಳಿಗೆ ಅಪಾಯ
ಬೆಳಂಬಾರ ಕಡಲ ತೀರದಲ್ಲಿ ವಾಸಿಸುವ 1200 ಕ್ಕೂ ಹೆಚ್ಚು ಮೀನುಗಾರರ ಮನೆಗಳು ಅಪಾಯಕ್ಕೊಳಗಾಗುವ ಭೀತಿ.ದಡದಲ್ಲಿ ನಿಲ್ಲಿಸಿರುವ ಸಾಂಪ್ರದಾಯಿಕ ನಾಡದೋಣಿಗಳು ಕೊಚ್ಚಿ ಹೋಗುವ ಸಾಧ್ಯತೆ. ಮನೆ, ದೋಣಿ, ಉಪಕರಣಗಳನ್ನು ಕಳೆದುಕೊಂಡು ಮೀನುಗಾರರು ಸಂಕಷ್ಟಕರ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು.
ಸುಂದರ್ ಖಾರ್ವಿ ಅವರ ಆಗ್ರಹ
ಮೀನುಗಾರರು ಮುಗ್ಧರಾಗಿದ್ದು ಅವರಿಗೆ ಅಗತ್ಯ ಜೀವ ರಕ್ಷಣಾ ಸಲಕರಣೆಗಳು ಮತ್ತು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು.ಕೇಣಿಯ ವಾಣಿಜ್ಯ ಬಂದರು ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ಮೀನುಗಾರ ಸಮುದಾಯದ ಪರವಾಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ