ಕುಮಟಾ: ದಿನಾಂಕ 20-08-2025 ರಂದು ರೋಟರಿ ಹಾಲ್ ಕುಮಟಾ ದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ವೀಣಾ ಕಾಮತ್ ಪ್ರಾಚಾರ್ಯರು. ಡಾ. ಎ. ವಿ. ಬಾಳಿಗ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಕುಮಟಾರವರು ಉದ್ಘಾಟಿಸಿದರು.
ಕೇಂದ್ರ ಸರ್ಕಾರವು ಕೊಂಕಣಿ ಭಾಷೆಗೆ 1992 ಆಗಸ್ಟ್ 20 ರಂದು ಮಾನ್ಯತೆ ನೀಡಿರುತ್ತದೆ. ಕೊಂಕಣಿ ಮಾತನಾಡುವ ಮಾತೃಭಾಷೆ ಹೊಂದಿರುವ ಕುಮಟಾ ತಾಲೂಕಿನ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಕೊಂಕಣಿ ಭಾಷೆ ಅಭಿವೃದ್ಧಿಪಡಿಸಬಕು. ತಾಯಿ ಭಾಷೆಯನ್ನು ಜೀವನದಲ್ಲಿ ಎಂದು ಮರೆಯಬಾರದು. ಇಂದಿನ ವಿದ್ಯಾರ್ಥಿಗಳು ಕೊಂಕಣಿ ಭಾಷೆ ಕಲಿಯಲು, ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದರು. ಮುಖ್ಯ ಅಥಿತಿಗಳಾಗಿ ಶ್ರೀ ಕೃಷ್ಣ ಕಾಮ್ಕರ್ ತಹಶೀಲ್ದಾರ್ ಕುಮಟಾ ರವರು ಮಾತನಾಡಿ ಕೊಂಕಣಿ ಮಾತನಾಡುವವರು ಪರಸ್ಪರ ಕೊಂಕಣಿ ಭಾಷೆಯಲ್ಲಿಯೇ ಮಾತನಾಡಿಕೊಳ್ಳಬೇಕು. ಮಾತೃಭಾಷೆಯಲ್ಲಿ ಮಾತನಾಡಿಕೊಂಡರೆ ಸಂವಹನವು ಉತ್ತಮವಾಗುತ್ತದೆ, ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದರು.
ಮುಖ್ಯ ಅತಿಥಿ ಮುರುಳಿಧರ ಪ್ರಭುರವರು ಮಾತನಾಡಿ ಕೊಂಕಣಿ ಭಾಷೆ ಮಾತನಾಡುವ ನಾವು ನಮ್ಮ ಭಾಷೆಯ ಬಗ್ಗೆ ಎಂದಿಗೂ ಸ್ವಾಭಿಮಾನದಿಂದ ಇರಬೇಕು. ಇಂಗ್ಲಿಷ್, ಹಿಂದಿ,ಕನ್ನಡ. ಭಾಷೆಯ ಜೊತೆಗೆ ಕೊಂಕಣಿಯನ್ನು ಅಭಿವೃದ್ಧಿ ಪಡಿಸಬೇಕು. ಅನೇಕ ಕೊಂಕಣಿ ಸಾಹಿತಿಗಳು ಕೊಂಕಣಿ ಭಾಷೆಯ ಬಗ್ಗೆ ಹೋರಾಟ ಮಾಡಿದ್ದಾರೆ. ಖ್ಯಾತ ಕವಿ ಗೋವಿಂದ ಪೈರವರು ಕೊಂಕಣಿ ಭಾಷಗೆ ನೀಡಿದ ಕೊಡುಗೆ ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ಜಿ ನಾಯ್ಕ್ , ಕುಮಟಾ ರವರು ಇಂದಿನ ಮಕ್ಕಳಿಗೆ ಕೊಂಕಣಿ ಭಾಷೆಯ ಸಂಖ್ಯೆಗಳನ್ನು ಕಲಿಸಬೇಕೆಂದರು ಕುಮಟಾ ಕೊಂಕಣಿ ಪರಿಷತ್ ನಡೆದು ಬಂದ ಬಗೆ ತಿಳಿಸಿದರು.
ಮಹಾಲಕ್ಷ್ಮಿ ಶಾನ್ಭಾಗ್ ಪ್ರಾರ್ಥಿಸಿದರು. ಶ್ರೀಕಾಂತ್ ರಘುನಾಥ್ ಕಾಮತ್ ಕಾಮತ್ ಬುಕ್ ಸ್ಟಾಲ್. ಕುಮಟಾ ಇವರ ನಿಶ್ವಾರ್ಥ ಸೇವೆಗಾಗಿ ಅವರನ್ನು ಹಾಗು.ಡಾ. ವನಮಾಲಾ ದಯಾನಂದ ಶಾನಭಾಗ್, ನಿವೃತ್ತ ವೈದ್ಯಾಧಿಕಾರಿ. ತಾಲೂಕ ಆಸ್ಪತ್ರೆ ಕುಮಟಾ,ರವರನ್ನು ಸನ್ಮಾನಿಸಲಾಯಿತು. ವನಿತಾ ಸಿರೀಶ್ ನಾಯಕ ರವರ ರಚನೆಯ, “.ಮದುವೆಯ ಲಾಡು “. ನಾಟಕ ಪ್ರದರ್ಶಿಸಲಾಯಿತು. ಕೊಂಕಣಿ ಪರಿಷತ್ ಅಧ್ಯಕ್ಷರಾದ ಅರುಣ ಉಭಯಕರ್ ಉಪಸ್ಥಿತರಿದ್ದರು. ನಯನ ಪ್ರಭು ನೇತ್ರತ್ವದ ನಾಧಶ್ರೀ ಕಲಾ ಕೇಂದ್ರದ,ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ನಿರ್ಮಲ ಪ್ರಭು ಕಾರ್ಯದರ್ಶಿಗಳು ಸ್ವಾಗತಿಸಿದರು. ಅರುಣ ಮಣಕಿಕರ್ ನಿರೂಪಿಸಿದರು. ಆನಂದ್ ನಾಯ್ಕ್ ವಂದಿಸಿದರು, ಎಂ ಕೆ ಶಾನ್ಭಾಗ್, ದೀಪಾ ಕಾಮತ್, ಶ್ರದ್ಧಾ ಭಟ್, ಇತರರು ಇದ್ದರು. ಸ್ಪರ್ಧೆ ಯಲ್ಲಿ ವಿಜೇತ ರದವರಿಗೆ ಬಹುಮಾನ ನೀಡಲಾಯಿತು.