ಹೊನ್ನಾವರ: ಕಟ್ಟಡ ನಿರ್ಮಿಸಲು ಬಳಸುವ ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳತನ ಮಾಡಿದ ಅಂತರಜಿಲ್ಲಾ ಕಳ್ಳರನ್ನು ಹೊನ್ನಾವರ ಪೊಲೀಸರು ಬಂದಿಸಿದ್ದಾರೆ. ತಾಲೂಕಿನ ಮಂಕಿ, ಉಪ್ಲಿಯ ರಾಮಾ ಲಕ್ಷ್ಮಣ ನಾಯ್ಕ ಇವರು ಕಾಸರಕೋಡ ರೋಷನ್ ಮೊಹಲ್ಲಾದಲ್ಲಿರುವ ಮಸೀದಿ ಹತ್ತಿರ ಹೊಸದಾಗಿ ಕಟ್ಟಡ ನಿರ್ಮಿಸಲು ಇಟ್ಟಿರುವ ಕಬ್ಬಿಣದ ಸೆಂಟ್ರಿಂಗ್ ಸೀಟ್‌ನ್ನು ಜೂಲೈ 15 ರ ಸಾಯಂಕಾಲದಿಂದ ಜೂಲೈ 16 ರ ಬೆಳಗ್ಗೆಯ ಒಳಗೆ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಕರಣದ ಪತ್ತೆಗಾಗಿ ಅನುಭವಿ ಪತ್ತೆ ತಂಡವನ್ನು ನೇಮಿಸಿ, ಈತಾಂತ್ರಿಕ ಮಾಹಿತಿಯ ಸಹಾಯದಿಂದ ಆಗಸ್ಟ್ 4 ರಂದು ಖಚಿತ ಮಾಹಿತಿ ಮೇರೆಗೆ ಆರೋಪಿತರಾದ ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ, ದೊಡ್ಡಪೇಟೆ, ಹಾಲಿ ಗಬ್ಬುರು ನಿವಾಸಿ ತವೀರ ಅಹಮ್ಮದ ಮಹ್ಮದ ಇಸಾಕ ಸಾಬ್, ಶಿಕಾರಿಪುರದ, ಕುಮದ್ವತಿ ನಗರ, ಗಣ್ಣೂರಿನ ಷಹಾದ್-ಉಲ್ಲಾ ನಜೀರ್ ಸಾಬ್, ಶಿಕಾರಿಪುರ, ಕುಂಬಾರಗುಂಡಿ ಕೊಪ್ಪಲು ಮಹ್ಮದ ಮನ್ಸೂರ ತಂದೆ ಇಲಿಯಾಸ್ ಅಹ್ಮದ್, ಶಿಕಾರಿಪುರದ, ಖಾಜಿ ಕೇರಿಯ ಕಲೀಮುಲ್ಲಾ @ ಕಲೀಂ ತಂದೆ ಭಕ್ಷೀ ಸಾಥ್ ಇವರನ್ನು ವಶಕ್ಕೆ ಪಡೆದಿರುತ್ತಾರೆ.
ಆರೋಪಿತರು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಆರೋಪಿತರರಿಂದ 200.000/- ರೂ ಬೆಲೆ ಬಾಳುವ 180 ಕಬ್ಬಿಣದ ಸೆಂಟ್ರಿಂಗ್ ಸೀಟ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ 3 ಲಕ್ಷ ರೂ ಬೆಲೆಯ ಅಶೋಕ ಲೈಲಾಂಡ್ ದೋಸ್ತ್ ವಾಹನ ಒಟ್ಟೂ 5 ಲಕ್ಷ ರೂ ಬೆಲೆ ಬಾಳುವ ಸ್ವತ್ತನ್ನು ಜಪ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಲಯ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಜಿ. ಕೃಷ್ಣಮೂರ್ತಿ, ಪೊಲೀಸ್ ಅಧೀಕ್ಷಕರು-2 ಎಮ್. ಜಗದೀಶ್, ಭಟ್ಕಳ ಉಪವಿಭಾಗ ಮಹೇಶ ಕೆ. ಪೋಲೀಸ್ ನಿರೀಕ್ಷಕರ ಸಿದ್ದರಾಮೇಶ್ವರ, ಎಸ್,
ಇವರ ಮಾರ್ಗದರ್ಶನದಲ್ಲಿ ಕ್ರೈಮ್ ಪಿ.ಎಸ್.ಐ ರಾಜಶೇಖರ ವಂದಲಿ ಇವರ ನೇತೃತ್ವದಲ್ಲಿ, ಅಧಿಕಾರಿ, ಸಿಬ್ಬಂದಿಗಳಾದ ಗಜಾನನ ನಾಯ್ಕ, ವಿಠಲ ಗೌಡ, ಮನೋಜ.ಡಿ., ರವಿ ನಾಯ್ಕ, ಚಂದ್ರಶೇಖರ ನಾಯ್ತ, ಅನಿಲ ಲಮಾಣಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಇವರು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ