ಹೊನ್ನಾವರ: ತಂದೆ-ತಾಯoದಿರ ದಿನವನ್ನು ಹೊನ್ನಾವರ ತಾಲೂಕಿನ ಮುಗ್ವಾದಲ್ಲಿರುವ ಚರ್ಚ್ ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ದೀಪವನ್ನು ಬೆಳೆಗಿಸಿ ಮಾತನಾಡಿದ ಪೀಟರ್ ಮೆಂಡೋನ್ಸಾ, ಇಂದು ನಾವೆಲ್ಲ ತಂದೆ-ತಾಯAದಿರ ದಿನದ ಸಂಭ್ರಮಾಚರಣೆಯಲ್ಲಿದ್ದೇವೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಇಂದು ಜಗತ್ತಿನಲ್ಲಿ ಬೇರೆ ಬೇರೆ ದಿನಗಳನ್ನು ಆಚರಿಸುತ್ತೇವೆ. ಆದರೆ ತಂದೆ-ತಾಯoದಿರ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿದ್ದೇವೆ. ಕೇವಲ ಮೊಬೈಲ್ ನಲ್ಲಿ ಸ್ಟೇಟಸ್ ನಲ್ಲಿ ಹಾಕಿ ದಿನವನ್ನು ಆಚರಿಸುವುದಲ್ಲ. ನಮಗೆ ಜನ್ಮ ನೀಡಿದ ತಂದೆ-ತಾಯoದಿರ ದಿನವನ್ನು ಆಚರಿಸಿ ಅವರಿಗೆ ಸತ್ಕರಿಸಿ, ಗೌರವಿಸಬೇಕು ಎಂದರು.
ಸoಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿಲ್ಸನ್ ಲೀಮಾ ಅಜ್ಜ-ಅಜ್ಜಿ, ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಕುಟುಂಬದವರೆಲ್ಲ ಇದ್ದರೆ ಮಾತ್ರ ಮನೆಯ ವಾತಾವರಣ ಓಳ್ಳೆಯದಾಗಿರುತ್ತದೆ. ದ್ವೇಷ, ಅಸೂಯೆ, ಜಗಳವನ್ನು ಬಿಟ್ಟು ಸಂಸ್ಕಾರದೊAದಿಗೆ ಕೂಡಿ ಬಾಳಿದರೇ ಮಾತ್ರ ಜೀವನ ಓಳ್ಳೆಯ ರೀತಿಯಿಂದ ನಡೆಯುತ್ತದೆ. ಅಪ್ಪ-ಅಮ್ಮಂದಿರ ದಿನವನ್ನು ಕೇವಲ ಒಂದೇ ದಿನಕ್ಕೆ ಆಚರಸಿದೇ ಜೀವನ ಪರ್ಯಂತವನ್ನು ಆಚರಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಹಿರಿಯರಿಗೆ ಹೂವನ್ನು ನೀಡಿ ಗೌರವಿಸಲಾಯಿತು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ