ಕುಮಟಾ: ಪಟ್ಟಣದ ಸನ್ಮಾನ ಹೋಟೆಲ್ ಎದುರು ಲಾರಿಯೊಂದು ರಸ್ತೆ ಬದಿಯಲ್ಲಿ ಹೂತಿದ್ದು, ಪಲ್ಟಿಯಾಗಿದ್ದೆ ಆದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಐಆರ್‌ಬಿ ಕಂಪನಿಯ ವಿರುದ್ದ ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ. ಪ್ರತಿ ದಿನ ಸಾರ್ವಜನಿಕರು ಹೆದ್ದಾರಿ ಬದಿಯಲ್ಲಿ ಓಡಾಡುತ್ತಿರುತ್ತಾರೆ. ಇದೇ ಭಾರೀ ವಾಹನ ಹುಗಿದು ಪಲ್ಟಿಯಾಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಹೆದ್ದಾರಿ ಪಕ್ಕದಲ್ಲಿ ಪದೇ ಪದೇ ಗುಂಡಿಗಳನ್ನ ತೋಡಿ, ಕಾಮಗಾರಿ ನಡೆಸಿ ಮೇಲಿನಿಂದ ಮಣ್ಣು ಮುಚ್ಚಿ ಹಾಗೇ ಬಿಡುತ್ತಾರೆ. ಮಳೆಗಾಲದಲ್ಲಿ ಭಾರೀ ವಾಹನಗಳು ಸಂಚರಿಸುವಾಗ ಮಣ್ಣು ಸಡಿಲಗೊಂಡು ಈ ರೀತಿ ಅವಘಡಗಳು ಸಂಭವಿಸುತ್ತದೆ. ಗುಂಡಿ ತೋಡಿ ನಡೆಸುವ ಕಾಮಗಾರಿಗೆ ಸಂಭoದ ಪಟ್ಟ ಇಲಾಖೆ ಕಛೇರಿಯಲ್ಲೇ ಕೂತು ಹಣ ಪಡೆದು ಎನ್.ಓ.ಸಿ ನೀಡುತ್ತಾರೆ.
ಅವರು ಅವೈಜ್ಞಾನಿಕ ಕಾಮಗಾರಿ ಮುಗಿಸಿ ತೆರಳುತ್ತಾರೆ ಇಲ್ಲಿ ಈತರಹದ ಘಟನೆ ನಡೆದರೆ ಐಆರ್‌ಬಿ ಕಂಪನಿಗೆ ಕೇಳಿದಾಗ ಉಡಾಪೆ ಉತ್ತರ ನೀಡುತ್ತಾರೆ.ಸಾರ್ವಜನಿಕರ ಆಸ್ತಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸವಾಗಬೇಕು ವಿನಃ ಈ ತರ ಅವೈಜ್ಞಾನಿಕ ಕಾಮಗಾರಿ ನಡೆಸಬಾರದು.ಸಂಭoದ ಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ