ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಿತು. ಕಾರಣಾಂತರಗಳಿoದ ಎಪ್ರಿಲ್ ಮೇ ಒಳಗಡೆ ನಡೆಸಬೇಕಿದ್ದ ಈ ವರ್ಷದ ಬಂಡಿಹಬ್ಬದ ಆಚರಣೆ ಸ್ವಲ್ಪ ವಿಳಂಬವಾಗಿ ಇದೀಗ ಜೂನ್ 10 ಕ್ಕೆ ನಡೆಸುವಂತಾಗಿತ್ತು.
ಈ ವೇಳೆ ಮಳೆಯ ಸಾಧ್ಯತೆ ಮತ್ತಿತರ ಕಾರಣಗಳಿಂದ ಹಬ್ಬದ ಆಚರಣೆಗೆ ತೊಡಕಾಗದಂತೆ , ಕಳಸ ಮೆರವಣಿಗೆ ಹೊರತಾಗಿ ಇತರೆ ಧಾರ್ಮಿಕ – ಸಾಂಪ್ರದಾಯಿಕ ಅಚರಣೆಯೊಂದಿಗೆ ಪೂಜೆ ಪುನಸ್ಕಾರ ಸಲ್ಲಿಸಲಾಯಿತು. ಸರ್ವಾಭರಣ ಭೂಷಿತ ಶ್ರೀ ದೇವರುಗಳ ಅಲಂಕಾರ,ಪುಷ್ಪಾಲoಕಾರ ಭಕ್ತರ ಮನಸೂರೆಗೊಂಡಿತು. ಗುನಗರು , ಕಟ್ಟಿಗೆದಾರರು ಸೇರಿದಂತೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹಬ್ಬದಾಚರಣೆಗೆ ಸಂಬoಧಿತ ಪ್ರಮುಖರು ಮತ್ತು ಊರ ನಾಗರಿಕರ ಹಾಗೂ ಸರ್ವ ಸದ್ಭಕ್ತರ ಸಹಕಾರದಲ್ಲಿ ನಡೆಸಲು ನಿರ್ಧರಿಸಿದ್ದ, ಈ ವಿಶೇಷ ಹಬ್ಬದಾಚರಣೆ ಯಶಸ್ಸಿಗೆ ಕೈ ಜೋಡಿಸಿದ ಎಲ್ಲರ ಸಹಕಾರ ಸ್ಮರಿಸಿದ ಟೆಂಪಲ್ ಟ್ರಸ್ಟಿ ಹನುಮಂತ ಗೌಡ , ಸರ್ವರಿಗೂ ಶ್ರೀ ದೇವರು ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.
ಸಾವಿರಾರು ಭಕ್ತರು ವಿವಿಧ ದೇವಾಲಯಗಳಲ್ಲಿ ಹಣ್ಣು ಕಾಯಿ, ಆರತಿ ಸೇವೆ ಮತ್ತಿತರ ಹರಕೆ ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ದೇವಸ್ಥಾನದ ಎದುರು ಗಡೆ ಭಕ್ತರ ದಂಡು ಕಂಡು ಬಂತು. ಸ್ಥಳೀಯ ಹಾಗೂ ಇತರೆಡೆಯ ಅಸಂಖ್ಯ ಭಕ್ತರು ಸಡಗರ ಸಂಭ್ರಮದಿAದ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರು. ಜೂನ್ 10 ಆದರೂ ದೇವರುಗಳ ಕೃಪೆಯಿಂದ ಮಳೆ ಮತ್ತಿತರ ತೊಡಕಾಗದೇ ಹಬ್ಬದ ಆಚರಣೆ ವಿಜೃಂಭಣೆಯಿoದ ಸಂಪನ್ನಗೊoಡಿರುವುದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹಬ್ಬದ ಆಚರಣೆಗೆ ಸಂಬAಧಿಸಿದ ಹಿರಿಕಿರಿಯ ಪ್ರಮುಖರು ಹಾಗೂ ಭಕ್ತವೃಂದ ಸಂತಸ ಸೂಚಿಸಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ