ಸಿದ್ದಾಪುರ: ಕಾಡಿಗೆ ಸೊಪ್ಪುತರಲು ಹೋದ ವ್ಯಕ್ತಿ ನಾಪತ್ತೆಯಾದ ಘಟನೆ ನಡೆದಿದೆ. ಸಿದ್ದಾಪುರದ ಕಾನಸೂರ ಬಳಿಯಕರನೆಯ ಯುವಕನೊಬ್ಬ ಬೆಟ್ಟಕ್ಕೆ ಸೊಪ್ಪುತರಲು ಹೋದವನು ವಾಪಸ್ ಬಾರದೇ ನಾಪತ್ತೆಯಾಗಿದ್ದಾನೆಂದು ಆತನ ತಂದೆ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಜಯ ಮರಾಠಿ ಎನ್ನುವ 25 ವರ್ಷದ ವ್ಯಕ್ತಿಯೇ ಕಾಣೆಯಾದ ಯುವಕ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಸಿದ್ದಾಪುರ