Important

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

Share

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು. ಶಿರಸಿಯಿಂದ 45 ಕಿ.ಮೀ ದೂರದಲ್ಲಿರುವ ಶಿರಗಣಿ ಗ್ರಾಮದ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಇತ್ತಿಚಿಗೆ ಕಂಬ್ಳಿಯಲ್ಲಿ ಹೊತ್ತೊಯ್ದಿದ್ದ ವಿಷಯ ರಾಜ್ಯಮಟ್ಟದ ಸುದ್ದಿಯಾಗಿತ್ತು.

ಸ್ವಾತಂತ್ರ‍್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊoಡಿದ್ದು, ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರತಿ ಮಳೆಗಾಲದಲ್ಲಿಯೂ ತಮ್ಮ ನರಕಯಾತನೆಯನ್ನು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಮತ್ತೆ ಮತ್ತೆ ಸೌಲಭ್ಯದಿಂದ ವಂಚಿತರಾಗುವ ಶಿರಗಣಿ ಗ್ರಾಮದ ಗ್ರಾಮಸ್ಥರ ಅನಿಸಿಕೆಯನ್ನು ಅವರಿಂದಲೇ ಕೇಳಬೇಕು. ತಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಗ್ರಾಮಸ್ಥರೇ ಎಲ್ಲ ಸೇರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲಿನವರದ್ದು. ಎಲ್ಲ ಸಮುದಾಯದ ಜನ ಜೊತೆಗೂಡಿ ತಮ್ಮ ಕೈಲಾಗುವ ಸಹಕಾರವನ್ನು ಪರಸ್ಪರ ಮಾಡಿಕೊಳ್ಳುವುದು ಇವರಿಗೆ ನಿತ್ಯದ ಕಾಯಕ.

ತಮ್ಮೂರಿನ ರಸ್ತೆಯನ್ನು ಸರಿಪಡಿಸಲು ಕಳೆದ ನಲವತ್ತು, ಐವತ್ತು ವರ್ಷಗಳಿಂದ ಕಲ್ಲು, ಜಲ್ಲಿ ಹೊತ್ತಿದ್ದ ಶಿರಗಣಿ ಗ್ರಾಮದ ವೃದ್ಧರು ಇಂದು 97 ರ ಇಳಿ ವಯಸ್ಸಿನಲ್ಲಿ ಹಾಸಿಗೆಯಲ್ಲಿ ಅಂತಿಮ ದಿನವನ್ನು ಎಣಿಸುತ್ತಿದ್ದಾರೆ. ಆದರೆ ಅವರ ಅನಾರೋಗ್ಯದ ಸಮಯದಲ್ಲಿಯೂ ಅವರನ್ನು ಕಂಬ್ಳಿಯಲ್ಲಿ ಹೊತ್ತೊಯ್ಯುವ ಪರಿಸ್ಥಿತಿ ಇಂದಿಗೂ ಇರುವುದು ದುರದೃಷ್ಟಕರವಾಗಿದೆ.

ಸ್ವಾತಂತ್ರ‍್ಯ ಬಂದು 78 ವರ್ಷ ಕಳೆದರೂ ಸಹ ನಮ್ಮ ಪಕ್ಕಸಲ್ಲಿಯೇ ಇಂತಹ ಪರಿಸ್ಥಿತಿ ಇರುವ ಊರನ್ನು ನೋಡಿದರೆ ಸರಕಾರದ ಆಡಳುತ ವ್ಯವಸ್ಥೆ ಬದುಕಿದೆಯಾ, ಸತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಈ ಕೂಡಲೇ ಶಾಸಕರಾದ ಭೀಮಣ್ಣನವರು ಅಧಿಕಾರಿಗಳ ಜೊತೆಗೆ ಈ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆಯನ್ನು ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಊರಿನ ಗ್ರಾಮಸ್ಥರ ಪರವಾಗಿ, ಅವರ ಜೊತೆಯಾಗಿ ನಿಮ್ಮ ಕಛೇರಿಯೆದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು. ಈ ರಸ್ತೆ ಸಮಸ್ಯೆ ಬಗರಹರಿಯುವವರೆಗೂ ನಾನು ಈ ಊರಿನ ಜೊತೆಗೆ, ಜನರೊಡನೆ ಗಟ್ಟಿಯಾಗಿ ಇರುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ARE YOU A TOP SALES PERFORMER? TARANGA IS HIRING – ONLY 4 VACANCIES

Taranga Electronics & Furniture, one of Uttara Kannada’s most reputed retail chains, is looking for dynamic Sales Executives to join our growing team....

11 ತಾಲೂಕುಗಳಲ್ಲಿ ಉದ್ಯೋಗಾವಕಾಶ; 15,600 ರಿಂದ 21 ಸಾವಿರ ವರೆಗೆ ವೇತನ

ಉತ್ತರ ಕನ್ನಡ: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಸ್ವತಂತ್ರ ಮೈಕ್ರೋಪಿನ್ ಲಿಮಿಟೆಡ್ ಎಂಬ ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ (NBFC-MFI)ಯಲ್ಲಿ ಕ್ಷೇತ್ರ ಅಧಿಕಾರಿ (Field Officer) ಹುದ್ದೆಗೆ ಅರ್ಹ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು....

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...