ಅಂಕೋಲಾ: ಮಹಿಳಾ ದಿನಾಚರಣೆಯ ಪ್ರಯುಕ್ತ ಕೆ.ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ ಎರಡು ಕಿರುಚಿತ್ರಗಳನ್ನು ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಅವರು ವೀಕ್ಷಿಸಿ ಕಿರುಚಿತ್ರ ನಿರ್ಮಾಣ ತಂಡಕ್ಕೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿರ್ಮಿಸಿ, ನಿರ್ದೇಶಿಸಿ, ಛಾಯಾಗ್ರಹಣ ಮಾಡಿ ನಟಿಸಿರುವ ಹೆಜ್ಜೆಗುರುತು ಮತ್ತು ಸರ್ವಮಯಿ ಕಿರುಚಿತ್ರಗಳು ಮಹಿಳೆಯರ ಹೋರಾಟದ ಜೀವನವನ್ನು ತೋರಿರುವ ಅರ್ಥಪೂರ್ಣ ಕಥೆಯನ್ನು ಹೊಂದಿದ್ದು ಕಿರುಚಿತ್ರಗಳಿಗೆ ತಾವು ಪ್ರಾಯೋಜಕತ್ವ ವಹಿಸುವುದಾಗಿ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ನಿರ್ಮಿಸಿರುವ ಕಿರುಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ವಿದ್ಯಾರ್ಥಿಗಳ ಪ್ರಯತ್ನ ಯಶಸ್ವಿಯಾಗಿದೆ, ಹನುಮಂತ ಗೌಡ ಅವರು ಒಬ್ಬ ಅಪೂರ್ವ ಸಾಧಕರಾಗಿದ್ದು ಪದ್ಮಶ್ರೀ ಪ್ರಶಸ್ತಿ ಅವರಿಗೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ವೆಂಟು ನಾಯಕ ಮಾತನಾಡಿದರು, ಎನ್.ಎಸ್.ಎಸ್ ಅಧಿಕಾರಿ ರಾಘವೇಂದ್ರ ಅಂಕೋಲೆಕರ್ ಉಪಸ್ಥಿತರಿದ್ದರು.
ಕಲೆ -ಶಿಕ್ಷಣ – ಸಂಸ್ಕೃತಿ – ಧಾರ್ಮಿಕ ಮತ್ತಿತರ ರಂಗಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಂದಿರುವ ಹನುಮಂತ ಗೌಡ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳೇ ನಿರ್ಮಿಸಿದ ಈ ಕಿರು ಚಿತ್ರ ಮಹಿಳೆಯರ ಹೋರಾಟದ ಬದುಕನ್ನು ಅರ್ಥಪೂರ್ಣವಾಗಿ ತೋರಿಸುವ ಪ್ರಯತ್ನ ಮಾಡಿದ್ದು , ಸಾಮಾಜಿಕ ಜಾಲ ತಾಣಗಳಲ್ಲಿಯೂ ಸದ್ದು ಮಾಡುತ್ತಿದ್ದು , ಅವರ ಪ್ರಯತ್ನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ