ಭಟ್ಕಳ: ಸುಮಾರು 10 – 12 ವರ್ಷಗಳಿಂದಲೂ ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಇತ್ತಿಚೀನ ದಿನಗಳಲ್ಲಿ ಕೇಳುಗರ ಸಂಖ್ಯೆಯೂ ಜಾಸ್ತಿಯಾಗಿದ್ದು ನನ್ನ ಕೈಲಾದ ಸಹಕಾರ ನೀಡುವ ನಿಟ್ಟಿನಲ್ಲಿ ನನ್ನ ಕೆಲಸ ಸಾಗುತ್ತಿದೆ .ಆದರೆ ಕೆಲವರು ಇದನ್ನು ರಾಜಕೀಯವಾಗಿ ತೆಗೆದುಕೊಂಡು ನಾನು ಆರ್ಥಿಕ ಸಹಾಯ ನೀಡಿದ ಕಡೆಗಳಲ್ಲಿ ಅವರು ಕೂಡ ಹೋಗಿ ದುಪ್ಪಟ್ಟ ಹಣವನ್ನು ನೀಡುತ್ತಿದ್ದಾರೆ. ಇದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದು ಉಧ್ಯಮಿ ಹಾಗೂ ಕೊಡುಗೈ ದಾನಿ ಎಂದು ಗುರುತಿಸಿಕೊಂಡಿರುವ ಮಾಸ್ತಪ್ಪ ನಾಯ್ಕ ಹೇಳಿದರು.
ಭಟ್ಕಳ ತಾಲೂಕಿನ ಹರಿಜನಕೇರಿಯಲ್ಲಿ ವಾಸಿಸುವ ದಂಪತಿಯೊಬ್ಬರ 2 ವರ್ಷದ ಮಗುವಿನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದ್ದು ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗಾಗಿ ಪೋಷಕರಿಗೆ ಹಣಕಾಸಿನ ನೆರವು ನೀಡಿ ಮಾತನಾಡಿದ ಅವರು, ಇನ್ನೂ ಮುಂದೆ ನಾನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಸಹಾಯ ನೀಡುತ್ತೇನೆ. ಇದರಿಂದಾಗಿ ರಾಜಕೀಯ ಮಾಡುವವರು ಜಾಗೃತರಾಗಿ ಅವರು ಕೂಡ ನಾನು ನೆರವು ನೀಡಿದ ಜಾಗಕ್ಕೆ ತೆರಳಿ ಸಹಾಯ ಸಹಕಾರ ನೀಡುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ನಾಯ್ಕ, ಅಶೋಕ ನಾಯ್ಕ ಹಾಗೂ ಅವರ ಆಪ್ತವಲಯದ ಸದಸ್ಯರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ