Important

ಅಂಕೋಲಾದಲ್ಲಿ ಬೆಳಂಬಾರ ಹಾಲಕ್ಕಿಗಳ ಸುಗ್ಗಿ ಸಂಭ್ರಮ : ವಿಶೇಷ ವೇಷಭೂಷಣ, ಹಗರಣ ಪ್ರದರ್ಶನಕ್ಕೆ ಸಿದ್ಧತೆ

Share

ಅಂಕೋಲಾ: ನಾಡಿನ ಸಾಂಪ್ರದಾಯಿಕ ಮತ್ತು ಜನಪದ ಕಲಾ ಪ್ರಕಾರಗಳಲ್ಲಿ ಸುಗ್ಗಿಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದು,ಕರಾವಳಿ ಜಿಲ್ಲೆಯ ಹಲವೆಡೆ ಸುಗ್ಗಿ ಮತ್ತು ಹೋಳಿ ಸಂಭ್ರಮ ಜೋರಾಗುತ್ತಿದೆ. ಅಂಕೋಲಾ ತಾಲೂಕಿನ ಮಟ್ಟಿಗೆ ಹೇಳುವುದಾದರೆ ತಾಲೂಕಿನ ವಿವಿಧಡೆ ನೆಲೆಸಿರುವ ಹಾಲಕ್ಕಿಗಳು, ಕೋಮಾರಪಂತರು, ನಾಮಧಾರಿಗಳು, ಹಳ್ಳೇರರು ಮತ್ತಿತರರು,ತಮ್ಮ ಸಂಪ್ರದಾಯದoತೆ ಆಯಾ ಆಯಾ ಭಾಗಗಳಲ್ಲಿ ನಿಗದಿಪಡಿಸಿಕೊಂಡ ವರ್ಷಗಳಂದು, ಆಗಾಗ ಸುಗ್ಗಿ ಕುಣಿತ ಪ್ರದರ್ಶಿಸುತ್ತಲೇ ಇರುತ್ತಾರೆ. ಈ ವರ್ಷ ಹೊನ್ನೆಬೈಲ್ ನ ಹಾಲಕ್ಕಿಗಳು , ಬಬ್ರುವಾಡದ ನಾಮಧಾರಿಗಳ ಸುಗ್ಗಿ ಹಿಗ್ಗು ಕಂಡುಬoದಿದೆ.

ಬ್ರಿಟಿಷ್ ಕಾಲದಲ್ಲೇ ತಾಮ್ರಪಟ ಗೌರವ ಪಡೆದ ನಾಡಿನ ಏಕೈಕ ಸುಗ್ಗಿ ತಂಡ

ಈ ನಡುವೆ ಬೆಳಂಬಾರದ ಹಾಲಕ್ಕಿಗಳ ಸುಗ್ಗಿ ಸಂಭ್ರಮ ಪ್ರತಿ ವರ್ಷ ಮುಂದುವರೆದುಕೊoಡು ಬಂದಿದೆ. . ಅಷ್ಟೇ ಅಲ್ಲದೇ ಈ ಸುಗ್ಗಿ ತಂಡ ಮತ್ತು ದೈವ ಮಹಿಮೆಗೆ ಅಂದಿನ ಬ್ರಿಟಿಷ್ ಆಡಳಿತವೇ ತಲೆ ಬಾಗಿ, ತದನಂತರ ಸರ್ಕಾರದ ಪರವಾಗಿ ತಾಮ್ರ ಪತ್ರ ನೀಡಿ, ಹೋಳಿ ಹುಣ್ಣಿಮೆ ದಿನ ಬ್ರಿಟಿಷ್ ತಹಸೀಲ್ದಾರ್ ಅವರಿಂದ,ಪ್ರತಿ ವರ್ಷ ತಾಲೂಕ ಕಚೇರಿಗೆ ಮೆರವಣಿಗೆ ಮೂಲಕ ಬಂದು ಹೋಗಲು ವಿನಂತಿ ಮಾಡಿರುವುದು ಈ ಸುಗ್ಗಿ ತಂಡದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುವಂತಿದೆ.

ಅoದಿನಿoದ ಇಂದಿನವರೆಗೆ ಈ ಸಂಪ್ರದಾಯ ಮುಂದುವರೆದುಕೊoಡು ಬಂದಿದ್ದು ಸರ್ಕಾರದಿಂದ ಅಧಿಕೃತ ಗೌರವವನ್ನು ಪಡೆಯುತ್ತಿರುವ ನಾಡಿನ ಏಕೈಕ ಸುಗ್ಗಿ ತಂಡ ಎಂಬ ಹಿರಿಮೆಯೂ ಈ ತಂಡಕ್ಕೆ ಇದೆ. ಈ ವರ್ಷ ಮಾರ್ಚ್ 13ರ ಗುರುವಾರ ಸಾಯಂಕಾಲ 4 ಗಂಟೆಯಿoದ ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಬೆಳಂಬಾರ ಸುಗ್ಗಿ ತಂಡದ ಮೆರವಣಿಗೆ ಕಾಣಬಹುದಾಗಿದ್ದು,ಕೊನೆಯಲ್ಲಿ ತಹಶೀಲ್ದಾರ್ ಕಚೇರಿಯ ಗೋಡೆ ಗಣಪತಿ ಪಕ್ಕದ ಆವರಣದಲ್ಲಿ ವಿಶೇಷ ಕುಣಿತ ಪ್ರದರ್ಶಿಸಿ ಅಲ್ಲಿ ತಾಲೂಕ ಆಡಳಿತದಿಂದ ತಸ್ಥಿಕ್ ಗೌರವ ಸ್ವೀಕರಿಸಲಿದೆ. ಬಳಿಕ ಪೊಲೀಸ್ ಠಾಣೆಯಲ್ಲೂ ವಿಶೇಷ ಪ್ರದರ್ಶನ ನೀಡಲಿದೆ.

ಅದಕ್ಕಾಗಿ ಈಗಾಗಲೇ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಪೂರ್ವಭಾವಿ ಸಭೆ ಕರೆದು ಸಿದ್ಧತೆ ಕೈಗೊಂಡಿದೆ. ಸುಗ್ಗಿ ತಂಡದ ಜೊತೆ ವಿವಿಧ ವೇಷ ಭೂಷಣಗಳು ಮೆರವಣಿಗೆಯ ಅಂದ ಹೆಚ್ಚಿಸಲಿದ್ದು,ಸಾಮಾಜಿಕ, ರಾಜಕೀಯ ಹಾಗೂ ಇತರೆ ವಿಭಾಗಗಳ ವಿಡಂಬನೆ,ಜನಜಾಗ್ರತಿ , ಪೌರಾಣಿಕ ಮತ್ತಿತರ ಸನ್ನಿವೇಶಗಳನ್ನು ಪ್ರದರ್ಶಿಸುವ ಸ್ಥಳೀಯರ ಈ ಸಂಪ್ರದಾಯ ಹಗರಣ ಎಂದೇ ಖ್ಯಾತವಾಗಿದೆ. ಇವನ್ನೆಲ್ಲ ನೋಡಲೆಂದೇ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ಜನ ಕುತೂಹಲದಿಂದ ಕಾಯುತ್ತಿರುತ್ತಾರೆ., ಮಾರ್ಚ್ 13ರ ಗುರುವಾರ ಅಂಕೋಲಾ ಪಟ್ಟಣ ಜನಜಂಗುಳಿಯಿoದ ಕೂಡಿರಲಿದ್ದು,ಸುಗ್ಗಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ.

ಜನಪದ ಕಲೆಯ ಮೆರಗಿನೊಂದಿಗೆ,ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ,ಪ್ರಸ್ತುತ ವಿದ್ಯಮಾನಗಳು ಸೇರಿದಂತೆ ವಿವಿಧ ಕಾಲಘಟ್ಟದ ಪ್ರಮುಖ ಸನ್ನಿವೇಶಗಳ ಪ್ರದರ್ಶನಕ್ಕೆ ಬೆಳಂಬರ ಹಾಲಕ್ಕಿಗಳ ಸುಗ್ಗಿ ತಂಡ ಸಿದ್ಧತೆ ನಡೆಸಿದ್ದು,ಊರ ಗೌಡರಾದ ಷಣ್ಣು ಖ ಗೌಡ ಹಾಗೂ ಸುಗ್ಗಿ ತಂಡದ ಪ್ರಮುಖರು ಮತ್ತು ಬೆಳಂಬಾರ ಊರ ನಾಗರಿಕರು ಸರ್ವರ ಸಹಕಾರ ಕೋರಿದ್ದಾರೆ. ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಚುಟುಕಾಗಿ ಮಾತನಾಡಿ, ಹಾಲಕ್ಕಿ ಸುಗ್ಗಿ ಸಂಪ್ರದಾಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಸಮಾಜದ ಪರವಾಗಿ ಸರ್ವರಿಗೂ ಸ್ವಾಗತ ಕೋರಿದ್ದಾರೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...