ಭಟ್ಕಳ: ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12 ಲಕ್ಷ ಲಾಭ ಗಳಿಸಿದೆ ಎಂದು ಶ್ರೀ ಸೀತಾರಾಮ ಸೌಹಾರ್ಧ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಹಾಗೂ ಉಧ್ಯಮಿ ವಿಠ್ಠಲ್ ನಾಯ್ಕ ತಿಳಿಸಿದರು.
ತಾಲೂಕಿನ ತಲಗೋಡ್ ನಲ್ಲಿರುವ ಸಹಕಾರಿ ಸಂಘದ ಕಛೇರಿಯ ಸಭಾಭವನದಲ್ಲಿ ಸಹಕಾರಿ ಸಂಘದ 4 ನೇ ಸರ್ವಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿಯು 301 ಅ ವರ್ಗದ ಸದಸ್ಯರು ಹಾಗೂ 416 ಡ ವರ್ಗದ ಸದಸ್ಯರನ್ನೊಳಗೊಂಡು ಒಟ್ಟು 717 ಸದಸ್ಯರನ್ನು ಹೊಂದಿದೆ. ವರ್ಷದ ಆರಂಭಕ್ಕೆ ಸದಸ್ಯರಿಂದ 374. 96 ಲಕ್ಷ ಸಾಲ ಬರತಕ್ಕದಿದ್ದು, ವರ್ಷ ರೂ 334.68 ಲಕ್ಷ ಸಾಲ ವಿತರಿಸಲಾಗಿದೆ.

ವರ್ಷದ ಕೊನೆಗೆ 441.53 ಲಕ್ಷದಷ್ಟು ಸಾಲ ಬರತಕ್ಕದಿದ್ದು, ರೂ 66.57 ಲಕ್ಷದಷ್ಟು ಹೆಚ್ಚಾಗಿದೆ. ಸಾಲದ ವ್ಯವಹಾರದಲ್ಲಿ ಶೇಕಡಾ 17.75 ರಷ್ಟು ವೃದ್ಧಿಯಾಗಿದೆ. ಆರ್ಥಿಕ ವರ್ಷದಲ್ಲಿ ಶೇಕಡಾ 88.46 ಪ್ರತಿಶತ ಸಾಲ ವಸೂಲಿಯಾಗಿದ್ದು, ಇದಕ್ಕೆ ಸಹಕರಿಸಿದ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗಗಳಿಗೆ ಧನ್ಯವಾದ ತಿಳುಸುತ್ತೇನೆ ಎಂದರು.
ಸಭೆಯಲ್ಲಿ ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ದುರ್ಗಪ್ಪ ನಾಯ್ಕ, ರಾಜೇಶ ನಾಯ್ಕ, ನಾಗೇಶ ನಾಯ್ಕ, ಮಂಜಪ್ಪ ನಾಯ್ಕ, ಮಹಾಬಲೇಶ್ವರ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಬ್ಯಾಂಕ್ ನ ಸಿಬ್ಬಂಧಿ ವರ್ಗದವರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ