ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ 2024-25 ಸಾಲಿನ 58ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯ ಸಭಾಭವನದಲ್ಲಿ ಜರುಗಿತು.
ಎವಿ : ಸಹಕಾರಿ ಅಭಿವೃದ್ಧಿ ಅಧಿಕಾರಿ,ಆಡಳಿತಾಧಿಕಾರಿ ಸರಿತಾ ಎನ್.ಬೇತಾಳಕರ ಅದ್ಯಕ್ಷತೆಯಲ್ಲಿ, ಚರ್ಚೆಯ ವಿಷಯದ ಕುರಿತು ಸದಸ್ಯರು ಚರ್ಚಿಸಿ ಉತ್ತರ ಪಡೆದುಕೊಂಡು ಅನುಮೋದನೆ ಪಡೆಯಲಾಯಿತು. 2024-25ನೇ ಸಾಲಿನಲ್ಲಿ 170.93 ಲಕ್ಷ ನಿವ್ವಳ ಲಾಭಗಳಿಸಿದೆ. ಶೇರು ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಿದೆ. ಬ್ಯಾಂಕ್ ಅತ್ಯುತ್ತಮ ನಿರ್ವಹಣೆಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದ್ದು ಜಿಲ್ಲೆಗೆ 2ನೇ ಸ್ಥಾನ ಬ್ಯಾಂಕ್ ಪಡೆದುಕೊಂಡಿದೆ. ಇದು ಹೆಮ್ಮೆಯ ಸಂಗತಿ. ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲಿ ಜರುಗಲಿದ್ದು ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಎಂ.ಡಿ.ಮುಕ್ರಿ ಸ್ವೀಕರಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಸರಿತಾ ಬೇತಾಳಕರ ಸಭೆಗಯಲ್ಲಿ ತಿಳಿಸಿದರು.

ಉಪನಿಯಮಗಳಿಗೆ ಅನುಸಾರವಾಗಿ ಅಧ್ಯಕ್ಷರ ಅನುಮತಿ ಮೇರೆಗೆ ಸಭೆಯಲ್ಲಿ ಇತರ ವಿಷಯದ ಮೇಲೆ ಚರ್ಚೆ ವೇಳೆ ಬ್ಯಾಂಕಿನ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ ಬ್ಯಾಂಕನ ನಿಕಟಪೂರ್ವ ಅಧ್ಯಕರಾದ ವಿ.ಎನ್.ಭಟ್ಟ ಅಳ್ಳಂಕಿಯವರು ನಮ್ಮ ಬ್ಯಾಂಕಿನ ಒಂದು ಕೋಟಿ ಹಣ ಬೇರೆ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ಇಲ್ಲದೆ ಬೇರೆ ಬ್ಯಾಂಕಿಗೆ ವರ್ಗಾಯಿಸಿರುವ ಬಗ್ಗೆ ಬ್ಯಾಂಕಿನ ಸಿಬ್ಬಂದಿಗಳೇ ತನಗೆ ತಿಳಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳೀದ್ದಾರೆ, ಇದರಿಂದ ಬ್ಯಾಂಕಿನ ಗ್ರಾಹಕರಿಗೆ,ರೈತ ಬಾಂಧವರಿಗೆ ತಪ್ಪು ಸಂದೇಶ ಹೋಗುತ್ತದೆ. ಇದರ ಕುರಿತು ಸೃಷ್ಟನೆ ಸಭೆಗೆ ನೀಡಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಉತ್ತರಿಸಿದ ಬ್ಯಾಂಕ್ ವ್ಯವಸ್ಥಾಪಕ ಎಂ.ಡಿ.ಮುಕ್ರಿ ಇದು ಸತ್ಯಕ್ಕೆ ದೂರವಾಗಿದೆ. ನಮ್ಮ ಬ್ಯಾಂಕಿನಲ್ಲಿ ಅವರು ಹೇಳಿದ ರೀತಿ ಯಾವುದೇ ವ್ಯವಹಾರ ನಡೆದಿದ್ದು ಇರುವುದಿಲ್ಲ. ಸಿಬ್ಬಂದಿಗಳು ನನ್ನ ಗಮನಕ್ಕೆ ತಾರದೇ ಬ್ಯಾಂಕಿನ ಯಾವುದೇ ವ್ಯವಹಾರ ನಡೆಸುವುದಿಲ್ಲ ಎಂದು ಸೃಷ್ಟನೆ ನೀಡಿದರು. ಈ ಕುರಿತು ಮಾಧ್ಯಮದವರಿಗೆ ಬ್ಯಾಂಕ್ ಪತ್ರಿಕಾ ಪ್ರಕಟಣೆ ನೀಡಬೇಕು ಎಂದು ನಿಕಟಪೂರ್ವ ನಿರ್ದೇಶಕ ರಾದ ಗೋವಿಂದ ನಾಯ್ಕ,ಕೃಷ ಗೌಡ , ವಿಶಾಲ್ ಭಟ್ಟ, ವಂದೂರು, ಗೋವಿಂದ ಗೌಡ, ವಂದೂರು ಹಾಗೂ ಇತರರು ಧ್ವನಿಗೂಡಿ ಮಾಜಿ ಅಧಯಕ್ಷರ ಈ ಬೇಜವ್ದಾರಿ ಹೇಳಿಕೆಯನ್ನು ಖಂಡಿಸಿ ಠರಾವು ಮಾಡಬೇಕು ಮತ್ತು ಕಾಯ್ದೆಯಲ್ಲಿ ಅವಕಾಶ ಇದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಬ್ಯಾಂಕಿನಿoದ ಮಾಧ್ಯಮ ದವರಿಗೆ ಸೃಷ್ಟನೆ ನೀಡಲಾಗುವುದು ಎಂದು ಪ್ರಧಾನ ವ್ಯವಸ್ಥಾಪಕರು ಸಭೆಗೆ ತಿಳಸಿದರು. ಚರ್ಚಿತ ವಿಷಯಗಳ ವಿವರಣೆಯನ್ನು ಹಿರಿಯ ಮೇಲ್ವಿಚಾರಕ ಬಾಲಚಂದ್ರ ಗಣಪಯ್ಯ ಗೌಡ ನೀಡಿದರು. ಶಾಖಾ ವ್ಯವಸ್ಥಾಪಕ ಹನುಮಂತ ನಾಯ್ಕ ವಂದಿಸಿದರು.