Important

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

Share

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77 ವರ್ಷ) ಅವರು ಶುಕ್ರವಾರ ನಿಧನರಾದರು. ಮೃತರ ಪುತ್ರಿ ಚೇತನಾ ನಾಯ್ಕ ಮತ್ತು ಕುಟುಂಬದವರು ನೀಡಿದ ಮಾಹಿತಿ ಮೇರೆಗೆ, ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ತಂಡವು ಕೂಡಲೇ ಮೃತರ ನಿವಾಸಕ್ಕೆ ಭೇಟಿ ನೀಡಿತು.

ಆಸ್ಪತ್ರೆಯ ನೇತ್ರತಜ್ಞ ಡಾ. ರಾಜಶೇಖರ ಅವರು ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ನೇತ್ರಗಳನ್ನು ತೆಗೆದು ಸಂರಕ್ಷಿಸಿದರು. ಈ ಕಾರ್ಯದಲ್ಲಿ ಸಿಸ್ಟರ್ ಜ್ಯೋತಿ ಮತ್ತು ಸಹಾಯಕ ಶಂಕರ ಅರವಂದಕರ ಸಹಕರಿಸಿದರು.

ಸಂರಕ್ಷಿಸಿದ ಕಣ್ಣುಗಳನ್ನು ಟ್ರಸ್ಟ್ ಪರವಾಗಿ ಪಡೆದ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ದಾನಿಯ ಕುಟುಂಬದ ಮಾನವೀಯ ಸೇವಾಭಾವನೆಗೆ ಅಭಿನಂದನೆ ಸಲ್ಲಿಸಿ, ಈ ಅಭಿನಂದನೀಯ ಕಾರ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ದಾನಿಯ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ, ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು. ಈ ಸಂದರ್ಭದಲ್ಲಿ ಪುತ್ರಿ ಚೇತನಾ ನಾಯ್ಕ, ಅಳಿಯ ದಯಾನಂದ ನಾಯ್ಕ, ಸಹೋದರ ವಸಂತ ನಾಯ್ಕ ಹಾಗೂ ಕುಟುಂಬದ ಹಿತೈಷಿಗಳು ಪಾಲ್ಗೊಂಡಿದ್ದರು. ಆಸ್ಪತ್ರೆಯ ದೂರವಾಣಿ ಸಂಖ್ಯೆ : 08386 224480

ವಿಸ್ಮಯ ನ್ಯೂಸ್, ಕುಮಟಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ : ಆರೋಪಿ ಬಂಧನ

ಅಂಕೋಲಾ: ಪಟ್ಟಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿತನನ್ನು ಅಂಕೋಲಾ ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ. ಕಾರವಾರ ಕೋಡಿಭಾಗದ ಅಳ್ವೇವಾಡ ನಿವಾಸಿ ಅಮಿತ ಭಂಡಾರಿ(40) ಬಂಧಿತ ಆರೋಪಿಯಾಗಿದ್ದು, ಸೆ....

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ ,ಮನೆಯ ಹಿರಿಯರು ಗುಮ್ಮ ಬಂತು ಗುಮ್ಮಎಂಬ ಮಾತು ಹೇಳಿ ಸಣ್ಣಹೆದರಿಕೆ ಹಾಕಿ ಮಕ್ಕಳನ್ನು ಸರಿದಾರಿಗೆ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...

ಸುಮಾರು 10 ತಿಂಗಳಿಂದ ಮಗ ಸಂಪರ್ಕಕ್ಕೆ ಸಿಗದೆ ನೊಂದ ತಂದೆ: ಮನೆಯಿಂದ ಮಲ್ಪೆಗೆ ಹೋದ ಮಗನೆಲ್ಲಿ ?

ಅಂಕೋಲಾ: ವ್ಯಕ್ತಿಯೋರ್ವ ಕಾಣೆಯಾಗಿ ಸುಮಾರು ಹತ್ತು ತಿಂಗಳುಗಳ ನಂತರ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕಾ ಘಟಕ ಉದ್ಘಾಟನೆ

ಅಂಕೋಲಾ: ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು,...

ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ

ಹೊನ್ನಾವರ: ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನಾಚರಣೆ ಹೊನ್ನಾವರ ತಾಲೂಕಿನ ಕಾಸರಕೋಡದ ಜನತಾ ವಿದ್ಯಾಲಯದಲ್ಲಿ ಕನ್ನಡ...

ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿ: ಹೆಸ್ಕಾಂ ಅಧಿಕಾರಿಗೆ ಸಚಿವ ಮಂಕಾಳ ವೈದ್ಯ ತಾಕೀತು

ಭಟ್ಕಳ: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಿ.ಸಿ ಓಸಿ ಪ್ರಮಾಣ ಪತ್ರವಿಲ್ಲದಿದ್ದರು, ಜನರಿಗೆ ಪಂಚಾಯತ್...

Uttara Kannada Roundup 2025: ಇಂದಿನ ಪ್ರಮುಖ ಸುದ್ದಿಗಳು

ಅರಣ್ಯಕ್ಕೆ ಓಡಿ ಕಾಣೆಯಾದ ವ್ಯಕ್ತಿ ಬನವಾಸಿ: ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅರಣ್ಯದೊಳಗೆ ಓಡಿಹೋಗಿ ಕಾಣೆಯಾದ...

ಹೊಟೇಲ್ ಮೇಲೆ ದಾಳಿ: ಹೆಗ್ಗಣಗಳ ರಾಶಿ, ಹಾಳಾದ ಎಣ್ಣೆ, ಅಶುಚಿತ್ವ ನೋಡಿ ಅಧಿಕಾರಿಗಳೇ ದಂಗು

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಸಾಮಾನ್ಯ...