ಅಂಕೋಲಾ: ಪಟ್ಟಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿತನನ್ನು ಅಂಕೋಲಾ ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ. ಕಾರವಾರ ಕೋಡಿಭಾಗದ ಅಳ್ವೇವಾಡ ನಿವಾಸಿ ಅಮಿತ ಭಂಡಾರಿ(40) ಬಂಧಿತ ಆರೋಪಿಯಾಗಿದ್ದು, ಸೆ. 3 ರಂದು ಅಂಕೋಲಾ ಪಟ್ಟಣದ ಪ್ರಭು ಪೆಟ್ರೋಲ್ ಪಂಪ್ ಆವರಣ ಗೋಡೆ ಹತ್ತಿರ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ ಆರೋಪದ ಮೇಲೆ ಪೊಲೀಸರು ಈತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದಾರೆ.
ಅಂಕೋಲಾ ತಾಲೂಕಿನ ಶಿರಕುಳಿ ನಿವಾಸಿ ನಾಗರಾಜ ಸುರೇಶ ನಾಯ್ಕ ಎನ್ನುವವರು ತಮ್ಮ ಹೀರೋ ಹೊಂಡಾ ಸಿಡಿ ಡಾನ್ ಡಿಎಲ್ ಎಕ್ಸ್ ಮೋಟಾರ್ ಸೈಕಲ್ ನ್ನು ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಪೆಟ್ರೋಲ್ ಪಂಪ್ ಆವರಣ ಗೋಡೆಯ ಬಳಿ ನಿಲ್ಲಿಸಿಟ್ಟ ಸಂದರ್ಭದಲ್ಲಿ ಯಾರೋ ಕಳ್ಳತನ ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಶ್ಲಾಘನೆ
ಜಿಲ್ಲಾ ಪೊಲೀಸ್ ವರಿಷ್ಠ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ. ಜಿ, ಜಗದೀಶ. ಎಂ, ಡಿ.ವೈ.ಎಸ್.ಪಿ, ಎಸ್ ವಿ ಗಿರೀಶ್ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ.ಎಸ್.ಐ (ತನಿಖೆ 1 ) ವಿಶ್ವನಾಥ್ ನಿಂಗೊಳ್ಳಿ ಮತ್ತು ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಸತೀಶ ಅಂಬಿಗ, ಆಸೀಪ ಆರ್ ಕುಂಕೂರ, ರವರು ಈ ಪ್ರಕರಣದಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಿ,ಆರೋಪಿ ಹಾಗೂ ಕಳುವಾದ ಮೋಟಾರ್ ಸೈಕಲ್ ಅನ್ನು ಪತ್ತೆ ಮಾಡಿ,ತನಿಖೆ ಕೈಗೊಂಡಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ,ಜಿಲ್ಲೆಯ ಹಿರಿಯ ಅಧಿಕಾರಿಗಳು ಇಲಾಖೆ ಪರವಾಗಿ ಶ್ಲಾಘಿಗಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












