ಗೋಕರ್ಣ, ಆಗಸ್ಟ್ 30: ಶ್ರೀ ಕ್ಷೇತ್ರ ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿ ಮಹಾಲೆ ಮನೆತನದ ಗಣಪತಿ ಎಂದು ಹೆಸರು ಪಡೆದಿರುವ ಶ್ರೀ ಮಹಾಗಣಪತಿ ಸಾರ್ವಜನಿಕವಾಗಿ ಪೂಜಿಲ್ಪಡುವುದು ವಿಶೇಷ. ಸಂತಾನ ಗಣಪತಿ, ಬೇಡಿದ್ದನ್ನು ಕಲ್ಪಿಸುವ ಗಣಪತಿ ಎಂದು ಖ್ಯಾತಿಯಾಗಿರುವ ಶ್ರೀ ಮಹಾಗಣಪತಿ ದರ್ಶನಕ್ಕೆ ರಾಜ್ಯದಿಂದ ಹೊರರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದಾರೆ.
ಗೋಕರ್ಣ ಮಾದನಗೇರಿ: ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ನಿತ್ಯ ವಿವಿಧ ಭಕ್ತರಿಂದ ಮಹಾಪೂಜೆ ಸೇವೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಬರುವ ಮಂಗಳವಾರ 2 ಸೆಪ್ಟೆಂಬರ್ ರಂದು ಸಮಸ್ತ ಎಲ್ಲಾ ಸಮಾಜ ಬಾಂಧವರಿoದ ಗಣಹೋಮ, ಮಹಾ ಅನ್ನ ಸಂತರ್ಪಣೆ, ಭಜನಾ ಸಂಗೀತ ಕಾರ್ಯಕ್ರಮ ಸೇವೆ ನಡೆಯಲಿದೆ.
ಲಿಂಗನಮಕ್ಕಿ ಭರ್ತಿಗೆ ಒಂದು ಅಡಿ ಮಾತ್ರ ಬಾಕಿ : ಶರಾವತಿ ಕಣಿವೆಯಲ್ಲಿ ಭಾರೀ ಮಳೆ: ಪ್ರವಾಹದ ಅಪಾಯ ಹೆಚ್ಚಳ
5 ನೇ ತಾರೀಖು ಶುಕ್ರವಾರ ಮಹಾಪೂಜೆ, 6 ನೆ ತಾರೀಖು ವಿಸರ್ಜನೆ ನೆರವೇರಲಿದೆ. ನಿತ್ಯ ವಿವಿಧ ಸೇವೆಗಳಾದ ಸತ್ಯ ನಾರಾಯಣ ಪೂಜೆ, ಸತ್ಯ ಗಣಪತಿ ವ್ರತ ಪೂಜೆ, ತುಲಾಭಾರ, ಸೇವೆ, ಹರಕೆ ಆಭರಣ ಸೇವೆ ನಡೆಯುತ್ತಿದೆ. ಮನೆ ಗಣಪತಿ ಆದರೂ ಸರ್ವರೂ ಪೂಜಿಸುವ ಶ್ರೀ ಮಹಾಗಣಪತಿ ರಾಜ್ಯದಲ್ಲಿ ಪ್ರಸಿದ್ಧಿ ಹೊಂದಿದೆ.
ಖ್ಯಾತ ಕಲಾಕಾರ ರಾದ ನಾಗೇಶ್ ದಾಮೋದರ ಮಹಾಲೆ ಮುಂಬೈ ಹಾಗು ಸಹಕಲಾವಿರಾದ ರವಿ ಮಹಲೆ, ನವೀನ ಮಹಾಲೆ ಇತರೆ ಕಲಾವಿದರಿಂದ ಶ್ರೀ ಮೂರ್ತಿ ನಿರ್ಮಾಣ ವಾಗಿದೆ. ಮಹಾಗಣಪತಿ ಮಂದಿರದ ಅಧ್ಯಕ್ಷರಾದ ಶಿವನಾಥ್ ಜಗದೀಶ್ ಆನಂದು ಮಹಾಲೆ, ನಿತ್ಯ ಕಾರ್ಯಕ್ರಮ ವನ್ನು ವ್ಯವಸ್ಥಿತ ವಾಗಿ ನಡೆಸಿಕೊಡುತ್ತಿದ್ದಾರೆ. ಕುಟುಂಬದ ಯಜಮಾನರಾದ ಪ್ರವೀಣ ವಿಠೋಬ್ ಮಹಾಲೆ ಇವರು ಭಕ್ತರ ನಿತ್ಯ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ