- ಚಿರತೆ ಓಡಾಟದ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ
- ಕೂಡಲೇ ಕಾರ್ಯಾಚರಣೆಗೆ ಆಗ್ರಹ
- ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಸಿದ್ದಾಪುರ: ಚಿರತೆಯೊಂದು ರಾತ್ರಿಯ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಮನೆ ಮಂದಿಯವರೆಲ್ಲ ಆತಂಕಗೊoಡ ಘಟನೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಕುಂಬ್ರಿಗದ್ದೆಯಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ ನಾಯ್ಕ್ ಅವರ ಮನೆಯಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಓಡಾಡಿದ್ದು, ಕುಟುಂಬಸ್ಥರು ಮತ್ತು ಸುತ್ತಮುತ್ತಲಿನ ಜನರು ಆತಂಕಗೊoಡಿದ್ದಾರೆ.
ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿದೆ ಸಂತಾನ ಗಣಪತಿ
ಸoಬoಧಪಟ್ಟ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಜನರಲ್ಲಿ ಉಂಟಾದ ಆತಂಕ ದೂರ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಇಲ್ಲಿನ ಸಮೀಪದ ಭುವನಗಿರಿಯಲ್ಲಿ ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿತ್ತು. ಆತನಿಗೆ ಗಾಯವಾದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೂ ಕೂಡ ಚಿರತೆ ಹಿಡಿಯದೇ ಇರುವುದು ಜನರಲ್ಲಿ ಇಲಾಖೆ ಮೇಲೆ ಆಕ್ರೋಶಕ್ಕೆ ಕಾರಣವಾಗಿದೆ.
ಸಂಬoಧಪಟ್ಟ ಇಲಾಖೆಯವರು ಚಿರತೆಯನ್ನು ಬಂಧಿಸಿ ಮೃಗಾಲಯಕ್ಕೆ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಒಂದು ವೇಳೆ ಚಿರತೆಯು ಜನರಿಗೆ ತೊಂದರೆ ನೀಡಿದರೆ ಪ್ರಾಣಾಪಾಯಗಳಾದರೆ ನೇರವಾಗಿ ಅರಣ್ಯ ಇಲಾಖೆ ಜವಾಬ್ದಾರಿ ಆಗುತ್ತದೆ ಎಂದು ಪ್ರಶಾಂತ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ