ಭಟ್ಕಳ: ವಾರದ ಸಂತೆಯಲ್ಲಿ ವ್ಯಾಪಾರಿಯೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದ ಚೂ-ರಿ ಇರಿತದಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಹಾನಗಲ್ ಮೂಲದ ಹಾಲಿ ಭಟ್ಕಳದ ಜಾಲಿ ತಗ್ಗರಗೋಡಿನಲ್ಲಿ ವಾಸವಾಗಿರುವ ಇಬ್ರಾಹಿಂ ಹಸನ್ ಸಾಬ್ ಚೂ-ರಿ ಇರಿತಕ್ಕೊಳಗಾಗಿ ಗಾಯಗೊಂಡಿದ್ದು, ಹಾವೇರಿ ಮೂಲದ ಸದ್ಯ ಭಟ್ಕಳದ ಇಸ್ಮಾಯಿಲ್ ವೆಲ್ಡಿಂಗ್ ಶಾಪ್ ಹತ್ತಿರ ವಾಸವಿರುವ ಅಕ್ಬರ್ ಅಹ್ಮದ್ ಮೌಲಾಲಿ ಚೂರಿ ಇರಿದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಆಯ ತಪ್ಪಿ ಸಮುದ್ರ ನೀರಿಗೆ ಬಿದ್ದು ಕಣ್ಮರೆಯಾದ ಮೀನುಗಾರ
ಹಣ್ಣಿನ ವ್ಯಾಪಾರಿ ದೂರುದಾರ ಮಹ್ಮದ್ ಹನಿಫ್ ಕೊಟ್ಟ ದೂರಿನಂತೆ ಇಬ್ರಾಹಿಂ ಹಸನ್ ಸಾಬ್ ಹಾಗೂ ಅಕ್ಬರ್ ಅಹ್ಮದ್ ಇಬ್ಬರೂ ದೂರುದಾರನ ಹತ್ತಿರ ಸಂತೆ ಮಾರುಕಟ್ಟೆಯಲ್ಲಿ ಕೆಲಸ ಮಾಡಿಕೊಂಡಿದ್ದು ಆಗಾಗ ವ್ಯಾಪಾರದ ವಿಷಯದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು. ರವಿವಾರ ಮಧ್ಯಾಹ್ನ 1: 30 ರ ವೇಳೆಗೆ ದೂರುದಾರ ವ್ಯಾಪಾರ ಮಾಡುತ್ತಿದ್ದ ಸೇಬು ಹಣ್ಣು ಖಾಲಿಯಾಗಿತ್ತು.
ವ್ಯಾಪಾರ ಮಾಡಲು ಆರೋಪಿಯ ಬಳಿಯಿದ್ದ ಸೇಬು ಹಣ್ಣಿನ ಬಾಕ್ಸನ್ನು ತರಲು ಹೋದಾಗ ವೇಳೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆರೋಪಿಯು ಇಬ್ರಾಹಿಂನನ್ನು ಅವಾಚ್ಯ ಶಬ್ಧದಿಂದ ಬೈದು ಪಕ್ಕದಲ್ಲಿರುವ ಚೂರಿಯನ್ನು ಕೈಗೆತ್ತಿಕೊಂಡು ಇಬ್ರಾಹಿಂನ ಚುಚ್ಚಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಇಬ್ರಾಹಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಚಾಕು ಇಬ್ರಾಹಿಂನ ಸೊಂಟದ ಹಿಂಬಾಗಕ್ಕೆ ತಾಗಿದ್ದು, ಗಾಯವಾಗಿದೆ.
ಕೊಲೆಯತ್ನಕ್ಕೆ ಪ್ರಯತ್ನಿಸಿದ ಆರೋಪಿ ಅಕ್ಬರ ಅಹ್ಮದ್ ನನ್ನು ಶಹರಾ ಪೋಲಿಸ್ ಠಾಣೆಯ ವೃತ್ತ ನೀರಿಕ್ಷಕ ದಿವಾಕರ್ ಪಿ.ಎಂ ಮಾರ್ಗದರ್ಶನದಲ್ಲಿ ಪಿ.ಎಸ್.ಐ ನವೀನ್ ಎಸ್ ನಾಯ್ಕ, ತಿಮ್ಮಪ್ಪ ಎಸ್ ನಾಯ್ಕ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಚರಣೆ ನಡೆಸಿ ತಾಲೂಕಿನ ಇಸ್ಮಾಯಿಲ್ ವೆಲ್ಡಿಂಗ್ ಶಾಪ್ ನ ಹತ್ತಿರ ಬಂಧಿಸಿ, ಆರೊಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ