ಹೊನ್ನಾವರ: ಪಿ ಜಿ ಭಟ್ ಅಗ್ನಿ ಮೆಮೋರಿಯಲ್ ಟ್ರಸ್ಟ್ ಮುಗ್ವಾದವರಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಹೊನ್ನಾವರ ತಾಲೂಕಿನ ಸುಬ್ರಹ್ಮಣ್ಯ ಕ್ಷೇತ್ರದ ಮಯೂರ ಮಂಟಪದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾ-ಹೊನ್ನಾವರ ಶಾಸಕರಾದ ದಿನಕರ ಶೆಟ್ಟಿ ವಿದ್ಯಾದಾನದ ಮುಂದೆ ಯಾವ ದಾನವು ಇಲ್ಲ, ವಿದ್ಯಾದಾನ ಬಹಳ ಮಹತ್ವವಾದುದು. ಬಹಳಷ್ಟು ಟ್ರಸ್ಟ್ ಗಳಿವೆ ಅವರಲ್ಲಿ ಹೆಚ್ಚಿನವು ಪಟ್ಟಿ, ಪೆನ್ನು ಕೊಟ್ಟು ಕಾರ್ಯಕ್ರಮ ಮುಗಿಸುತ್ತಾರೆ. ಇಂತಹ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಜೆ. ಡಿ. ನಾಯ್ಕ ಮಾತನಾಡಿ, ಪಿ.ಜಿ.ಭಟ್ಟ ಅವರು ನಮ್ಮೊಂದಿಗೆ ಈಗ ಇಲ್ಲ. ಅದರೆ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರ ಮಗ ಮತ್ತು ಕುಟುಂಬ ಅವರ ನೆನಪನ್ನು ಉಳಿಸುವ ಕೆಲಸ ಮಾಡಿದ್ದಾರೆ. ದಾನಿಗಳು ಸಹಾಯ ಮಾಡಿದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಜಿ.ಭಟ್ಟ, ಮಾತನಾಡಿ ಇವತ್ತಿನ ಮಕ್ಕಳು ತಂದೆ-ತಾಯoದಿರನ್ನು, ಗುರುಗಳನ್ನು, ಹಿರಿಯರನ್ನು ಪೂಜಿಸುವ ಸಂಸ್ಕೃತಿಯಿಲ್ಲ. ಆದರೆ ಕಾರ್ತಿಕ ಭಟ್ , ತಂದೆಯವರಿಗೋಸ್ಕರ ಟ್ರಸ್ಟ ನ್ನು ಮಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವುದು ಹೆಮ್ಮೆಯ ವಿಷಯ ಎಂದರು. ವೇದಿಕೆಯಲ್ಲಿ ಧರ್ಮದರ್ಶಿ ಡಾ. ಜಿ.ಜಿ.ಸಭಾಹಿತ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ ಮುಂತಾದವರು ಇದ್ದರು. ಟ್ರಸ್ಟ್ ವತಿಯಿಂದ 36 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಯಿತು. ನಂತರ ಯುವ ಕಲಾವಿದರಿಂದ ‘ಲವ ಕುಶ’ ಯಕ್ಷಗಾನ ಪ್ರದರ್ಶನ ನಡೆಯಿತು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ