ಹೊನ್ನಾವರ: ಜಿಲ್ಲಾಡಳಿತ ಜಿಲ್ಲೆಯಲ್ಲಿ ಐದು ಕಡೆ ಗುಡ್ಡ ಕುಸಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಇದಕ್ಕೆ ರಕ್ಷಣಾತ್ಮಕ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಸಾರ್ವಜನಿಕರಿಗೆ ಆತಂಕ ಉಂಟುಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಉದ್ದಗಲಕ್ಕೂ ಐ ಆರ್ ಬಿ ಯವರು ರಸ್ತೆ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ಗುಡ್ಡ ಕೊರೆದಿರುವುದರಿಂದ ಗುಡ್ಡ ಕುಸಿತ ಪ್ರಾರಂಭಗೊoಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿ ಮಳೆಗಾಲ ಪ್ರಾರಂಭ ಆಯಿತು ಅಂದರೆ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರು, ಸ್ಥಳೀಯ ನಿವಾಸಿಗಳು ಆತಂಕದ ದಿನ ಕಳೆಯುವಂತಾಗಿದೆ.
ತಾಲೂಕಿನ ಕೆಳಗಿನೂರು ಗ್ರಾ. ಪಂ. ವ್ಯಾಪ್ತಿಯ ಅಭಿತೋಟ ಹತ್ತಿರ ದೊಡ್ಡ ದೊಡ್ಡ ಬಂಡೆ ಕುಸಿದು ರಾಶಿ ಬಿದ್ದಿದೆ. ಗುಡ್ಡದ ಮೇಲೆ ಬಿರುಕು ಬಿಟ್ಟಿದ್ದು ಇಗೋ ಆಗೋ ಉರುಳಿ ಬೀಳಲು ದಿನ ಎಣಿಸುತ್ತಿದೆ. ಗುಡ್ಡದ ತುದಿಯಲ್ಲಿ ದೊಡ್ಡ ಬಂಡೆ, ಗಿಡ, ಮರ ಎಲ್ಲವು ಇದೆ. ಗುಡ್ಡವು ದೊಡ್ಡದಾಗಿರುವುದರಿಂದ ಒಮ್ಮೆಲೆ ಕುಸಿತ ಕಂಡರೆ ಅಪಾಯ ಕಟ್ಟಿಟ್ಟ ಬುತ್ತಿ.
ಐಆರ್‌ಬಿ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು
ಪ್ರಮುಖ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊoಡಿರುವುದರಿoದ ಪ್ರತಿ ಕ್ಷಣವು ವಾಹನ ಓಡಾಟ ಇದ್ದೆ ಇರುತ್ತದೆ. ಗುಡ್ಡದ ತುದಿಯಿಂದ ಸಣ್ಣದಾಗಿ ನೀರಿನ ಹರಿವು ಕಾಣಿಸುತ್ತಿದೆ. ಗುಡ್ಡ ಕುಸಿತವಾಗಿರುವ ದೊಡ್ಡ ಪ್ರಮಾಣದಲ್ಲಿ ಮಣ್ಣು, ಕಲ್ಲು ಬಂಡೆ ರಾಶಿ ಬಿದ್ದಿದೆ. ಇದರ ನಂತರ ಹೆದ್ದಾರಿಗೆ ಹೊಂದಿಕೊoಡು ಪ್ರಾಥಮಿಕ ಶಾಲೆ ಇದ್ದು ಇಲ್ಲಿಯ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಸಮಸ್ಯೆ ಉಂಟಾಗುತ್ತಿದೆ.
ಗುಡ್ಡ ಕುಸಿತ ಸಾಧ್ಯತೆ ಇರುವ ಬಗ್ಗೆ ಎಚ್ಚರಿಕೆ ಬೋರ್ಡ ಮಾತ್ರ ನೂರಾರು ಕಡೆ ಹಾಕಲಾಗಿದೆ. ಗುಡ್ಡ ಕುಸಿಯದೇ ಇರಲು ಪರ್ಯಾಯ ವ್ಯವಸ್ಥೆ ಮರಿಚಿಕೆಯಾಗಿದೆ. ಸಂಬoಧ ಪಟ್ಟ ಇಲಾಖೆಯವರು ಮಾತ್ರ ಹೆದ್ದಾರಿ ಉದ್ದಗಲಕ್ಕೂ ಗುಡ್ಡ ಕುಸಿತ ಪ್ರದೇಶ ಎಚ್ಚರಿಕೆ ಎನ್ನುವ ಬೋರ್ಡ್ ಹಾಕಿ ವಾಹನ ಸವಾರರಿಗೆ ಎಚ್ಚರಿಕೆಯ ರಕ್ಷಣೆ ನೀಡುವ ಕೆಲಸ ಮಾಡಿದೆ. ಮಳೆಗಾಲದ ಪೂರ್ವ ಗುಡ್ಡ ಕುಸಿತ ಆಗದೆ ಇರಲು ಯಾವುದೇ ಕ್ರಮ ಕೈಗೊಂಡಿಲ್ಲ. ಶಾಶ್ವತವಾಗಿ ಗುಡ್ಡ ಕುಸಿತ ಭಯ ನಿವಾರಣೆ ಆಗಬೇಕಾಗಿದೆ. ಅದು ಬಿಟ್ಟು ಪ್ರತಿ ವರ್ಷ ಮಳೆಗಾಲದಲ್ಲಿ ಎಚ್ಚರಿಕೆ ಬೋರ್ಡ್ ಹಾಕುವುದರಿಂದ ಒಂದಿಷ್ಟು ಹಣ ವ್ಯಯವಾಗುತ್ತಿದೆ.
ಇನ್ನೂ ಗೇರುಸೊಪ್ಪ ಬೆಂಗಳೂರು ರಸ್ತೆಯಲ್ಲಿಯು ಇದೆ ಪರಿಸ್ಥಿತಿ ಇದೆ. ತಾಲೂಕಿನ ಆರೋಳ್ಳಿ, ಸೇಡಿಬಾಳ, ಬಾಸ್ಕೇರಿ, ಗುಡ್ಡೆಬಾಳ, ಖರ್ವಾ ಕ್ರಾಸ್, ಯಲುಗುಪ್ಪ ದಿಂದ ಗೇರುಸೊಪ್ಪ ತನಕ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಅಂಚಿಗೆ ಮಣ್ಣು ರಾಶಿ ಬಿದ್ದಿದೆ. ದೊಡ್ಡಮಟ್ಟದ ಕುಸಿತದ ಸಾಧ್ಯತೆ ಇದೆ. ಈ ಹಿಂದೆ ಶಿರೂರು ಗುಡ್ಡ ಕುಸಿತವಾಗಿ ರಾಷ್ಟ್ರಿಯ ಹೆದ್ದಾರಿ ಬಂದ್ ಆಗಿತ್ತು. ಸ್ಥಳೀಯರು ಪ್ರಾಣತೆತ್ತಿರುವ ಘಟನೆಯಾಗಿತ್ತು. ಇಂತಹ ಘಟನೆ ಮರುಕಳಿಸದೇ ಇರಲಿ ಎನ್ನುವುದೇ ವಿಸ್ಮಯ ಟಿ.ವಿಯ ಆಶಯವಾಗಿದೆ.
ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ