Important

ಜನಸಾಮಾನ್ಯರ ಆರ್ಥಿಕ ಮಟ್ಟ ಏರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ: ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್

Share

ಭಟ್ಕಳ: ಕಾಂಗ್ರೇಸ್ ಪಕ್ಷ ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಹೊರತರಲಿಲ್ಲ. ಬದಲಾಗಿ ಜನಸಾಮಾನ್ಯರ ಆರ್ಥಿಕ ಮಟ್ಟವನ್ನು ಏರಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಕೊಳ್ಳುವಿಕೆಯ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಚೈತನ್ಯಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಹೊರತರಲಾಗಿದೆ ಎಂದು ಕಾಂಗ್ರೇಸ್ ಪಕ್ಷದ ಜಿಲ್ಲಾಅಧ್ಯಕ್ಷ ಸಾಯಿ ಗಾವಂಕರ ಹೇಳಿದರು.

ಕೆ.ಪಿಸಿ.ಸಿ ನಿರ್ದೇಶನದ ಮೇರೆಗೆ ಕಾಂಗ್ರೇಸ್ ನಡಿಗೆ ಕಾರ್ಯಕರ್ತರ ಕಡೆಗೆ ಘೊಷಣೆಯೊಂದಿಗೆ ಭಟ್ಕಳ ತಾಲೂಕಿನ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷದ ಬಲವರ್ಧನೆಗಾಗಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಗೂಗಲ್ ಫಾರ್ಮ ಮೂಲಕ ಪಕ್ಷದ ಸದಸ್ಯತ್ವವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪಕ್ಷ ಸಂಘಟನೆಯಲ್ಲಿ ನಿಸ್ಕ್ರೀಯರಾಗಿರುವ ಪಧಾಧಿಕಾರಿಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚಿಂತಿಸಿಸಲಾಗುತ್ತಿದೆ.

ನಮ್ಮ ಜಿಲ್ಲೆಯಲ್ಲಿ ಕೈಗೆ ಸಿಗುವ ಹಿಂದುಳಿದ ವರ್ಗದ ಮಂತ್ರಿಗಳು ಇರುವುದು ನಮ್ಮ ಸೌಭಾಗ್ಯವಾಗಿ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೇಸ್ ಪಕ್ಷವಾಗಿದೆ. ಗಾಂಧಿಜಿಯವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದರು ಹಾಗೂ ಕೇವಲ ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಕಾಂಗ್ರೇಸ್ ಪಕ್ಷ ಮಾತ್ರ ಜಾತಿ, ಧರ್ಮವನ್ನು ನೋಡದೆ ಎಲ್ಲರನ್ನು ಸಮಾನವಾಗಿ ನೋಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಜಿಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸಚಿವ ಮಂಕಾಳ ಎಸ್ ವೈದ್ಯ, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಅರಣ್ಯ ಹೋರಾಟಗಾರರ ಸಮಿತಿಯ ತಾಲೂಕಾ ಅಧ್ಯಕ್ಷ ರಾಮ ಮೊಗೇರ, ನಯನಾ ನಾಯ್ಕ ಮತ್ತಿತರರು ಹಾಜರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ ತರಬಹುದು,ಇಂತಹದೊoದು ಪ್ರಕೃತಿ ವಿಸ್ಮಯ ನಡೆದದ್ದು ದೂರದಲ್ಲೆಲ್ಲೋ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ...

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಅಂಕೋಲಾ ಕರಾವಳಿ ಉತ್ಸವ 2025 : ನವೆಂಬರ್ 5 ರಿಂದ 10ರ ವರೆಗೆ ಸಾಂಸ್ಕೃತಿಕ ವೈಭವ

ಅಂಕೋಲಾ: ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಅಂಕೋಲಾ ತಾಲೂಕಿನಲ್ಲಿ ಅಂಕೋಲಾ ಸಾಂಸ್ಕೃತಿಕ ಕಲಾಬಳಗ ಉತ್ತರ ಕನ್ನಡ ಸಂಘಟನೆಯ...

ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶೀ ಮೇಳ: ಅಕ್ಟೋಬರ್ 7, 8,9 ರಂದು ಆಯೋಜನೆ

ಅಂಕೋಲಾ : ರಾಘವೇಂದ್ರ ಇವೆಂಟ್ಸ್ ಅಂಕೋಲಾ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ...

ಸೇವಾಪರ್ವ ವಿಕಸಿತ ಭಾರತ ವಿಷಯಾಧಾರಿತ ಪೇಟಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದರ್ಶನ ನಾಯ್ಕ

ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವಿಕ್ಷಿತ್ ಭಾರತ್...

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ...

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ...

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77...

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...