ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಅಧ್ಯಕ್ಷರಾದ ಬಿ.ಸಿ. ಚಂದ್ರಶೇಖರ ಮಾತನಾಡಿ, ಇಂದು ಮನುಷ್ಯನ ಅತಿಯಾದ ಸ್ವಾರ್ಥದಿಂದ ನದಿ ಮಲೀನವಾಗುತ್ತಿದೆ. ಸ್ವಚ್ಚ ನೀರು ಸಿಗುತ್ತಿಲ್ಲ. ಮಲೆನಾಡು ಭಾಗವು ಬಯಲುಸೀಮೆಯ ತರಹವೇ ನೀರಿಗಾಗಿ ಹಾಹಾಕಾರ ಆಗುತ್ತಿದೆ. ನೀರಿನ ಸಂರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ, ಸಂಘ-ಸoಸ್ಥೆಗಳು, ನಾಗರೀಕರು ಕೈಜೋಡಿಸಬೇಕು ಎಂದರು.
‘ಜಲ ಸಂರಕ್ಷಣೆಯ ಪ್ರಾಮುಖ್ಯತೆ’ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ಮಾತನಾಡಿ, ಜಲ ಎನ್ನುವುದು ನಮ್ಮ ಜೀವಕ್ಕೆ,ಜೀವನಕ್ಕೆ ಎಷ್ಟು ಮಹತ್ವ ಎನ್ನುವುದು ಎಲ್ಲರು ಅರಿಯಬೇಕು. ನೀರನ್ನು ಕಡೆಗಣಿಸುತ್ತಿದ್ದೇವೆ.ಅದರ ಪ್ರಾಮುಖ್ಯತೆ ಮರೆಯುತ್ತಿದ್ದೆವೆ.ನಮಗೆ ಕೇವಲ ಶೇಕಡಾ 3ರಷ್ಟು ಮಾತ್ರ ಶುದ್ದ ಕುಡಿಯುವ ನೀರು ಸಿಗುತ್ತದೆ ಎಂದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಬಿಯಂತರರಾದ ಶಿವರಾಮ ಎಸ್ ನಾಯ್ಕ ಮಾತನಾಡಿ, 1993 ರಲ್ಲಿ ವಿಶ್ವಸಂಸ್ಥೆ ವಿಶ್ವ ಜಲ ದಿನವನ್ನು ಆಚರಿಸಬೇಕೆಂದು ಹೇಳಿದೆ. ಹಿಮನದಿಗಳ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ನೀರಿಲ್ಲದಂತೆ ಆಗುತ್ತದೆ. ಆದ್ದರಿಂದ ಹಿಮಕರಗುವಿಕೆ ತಡೆಗಟ್ಟುವುದು ಅಗತ್ಯವಿದೆ ಎಂದರು.
ನೀರು ಸರಬರಾಜು ಮಂಡಳಿ ಹಾಗೂ ಒಳಚರಂಡಿ ಯೋಜನೆಯ ಹೊನ್ನಾವರ ವಿಭಾಗದ ಮುಖ್ಯಕಾರ್ಯನಿರ್ವಾಹಕ ಇಂಜಿನಿಯರ್ ಅಜಯ್ ಪ್ರಭು ಅವರು ಶರಾವತಿ ಕುಡಿಯುವ ನೀರಿನ ಯೋಜನೆ ಕುರಿತು ಸ್ಕ್ರಿನ್ ಮೂಲಕ ವಿಡಿಯೋ ಪ್ರದರ್ಶಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜೆಎಮ್ ಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಈರಣ್ಣ ಹುಣಸಿಕಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಉದಯ ಬಿ.ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಮ್.ಎನ್ ಖಾನ್,ವಕೀಲರಾದ ಎಮ್.ಎನ್ ಸುಬ್ರಮಣ್ಯ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ