ಕುಮಟಾ: ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಗ ಮಾತ್ರ ಬಾಳು ಸುಂದರವಾಗುತ್ತದೆ . ಬದುಕು ಭಾವ , ಬೂತಿ ,ಅನುಭೂತಿ ಇವುಗಳ ಸಮನ್ವಯತೆಯ ಸಾರ ವನ್ನು ನಾಕುತಂತಿ ಹೊಂದಿದೆ ಎಂದು ಹಿರಿಯ ಸಾಹಿತಿ ಪುಟ್ಟು ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ ಕುಮಟಾ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಉತ್ತರ ಕನ್ನಡ ಇವರ ಆಶ್ರಯದಲ್ಲಿ ನಡೆದ ಬೇಂದ್ರೆ ಯವರ ನಾಕುತಂತಿ ಕುರಿತು ಪಿ ಎಸ್ ಟಿ ಈ ವಿಭಾಗದ ಶಿಕ್ಷಣಾರ್ಥಿ ಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.
ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ರೋಹಿದಾಸ ನಾಯಕ ಸಾಮಾನ್ಯ ಜನರು ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ನಾಕುತಂತಿಯ ಕುರಿತು ಉಪನ್ಯಾಸ ಏರ್ಪಡಿಸಿರುವುದು ಸಾಹಿತ್ಯ ಪರಿಷತ್ ನ ಸ್ತುತ್ಯಾರ್ಹ ಕಾರ್ಯ ವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಿಕಟಪೂರ್ವ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಶ್ರೀಧರಗೌಡ ಉಪ್ಪಿನಗಣಪತಿ ಮಾತನಾಡಿ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯ, ಬೇಂದ್ರೆಯವರು ತಾವು ಎದುರಿಸಿದ ಸಂಕಷ್ಟದ ದಿನಗಳಿಗೆ ಸಾಹಿತ್ಯದ ಲೇಪನದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದರು ಎಂದರು.
ನಾಕು ತಂತಿ ಉಪನ್ಯಾಸದ ಮೂಲಕ ಸಾಹಿತ್ಯ ಪರಿಷತ್ ಭಾವಿ ಶಿಕ್ಷಕರಲ್ಲಿ ಸಾಹಿತ್ಯದ ಬೀಜ ಬಿತ್ತುವ ಕೆಲಸ ಮಾಡಿದೆ ಎಂಡು ಡಯಟ್ ನ ಹಿರಿಯ ಉಪನ್ಯಾಸಕ ರಾಜೇಂದ್ರ ಎಲ್. ಭಟ್ ಅಭಿಮಾನ ವ್ಯಕ್ತಪಡಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಡಯಟ್ ನ ಹಿರಿಯ ಉಪನ್ಯಾಸಕ ಹಾಗೂ ಪಿ ಎಸ್ ಟಿ ಈ ವಿಭಾಗದ ಮುಖ್ಯಸ್ಥ ಶಾಂತೇಶ ಆರ್ ನಾಯಕ ಪ್ರಾಸ್ತಾವಿಕ ಮಾತನಾಡಿದರು.
ಉಪನ್ಯಾಸಕ ವಿನೋದ್ ನಾಯಕ ಸ್ವಾಗತಿಸಿದರು. ಡಯಟ್ ಉಪನ್ಯಾಸಕಿ ವೀಣಾ ಎಂ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವೀಣಾ ಭಟ್ ವಂದಿಸಿದರು. ಅರವಿಂದ ನಾಯಕ್, ಆರ್. ಎನ್. Patagar,.ಮೋಹನ್ ನಾಯ್ಕ kujalli, ಸಂಧ್ಯಾ ಭಟ್, ಲಕ್ಷ್ಮಿ ನಾಯ್ಕ, ಎಸ್. ಬಿ. ನಾಯಕ್ ಸಹಕರಿಸಿದರು .
ವಿಸ್ಮಯ ನ್ಯೂಸ್, ಕುಮಟಾ