ಭಟ್ಕಳ: ನಗರಸಭೆ ರಚನೆಯಲ್ಲಿ ಸಾಮಾಜಿಕ ನ್ಯಾಯವನ್ನು ಬದಿಗೊತ್ತಿ ಒಂದು ನಿರ್ದಿಷ್ಟ ಕೋಮಿನ ಋಣ ಸಂದಾಯವನ್ನು ಮಾಡುವ ಕೆಲಸವನ್ನು ಸಚಿವ ಮಂಕಾಳ ವೈದ್ಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುನಿಲ್ ನಾಯ್ಕ ಆರೋಪಿಸಿದರು. ಭಟ್ಕಳ ನಗರಸಭೆಗೆ ರಾಜ್ಯ ಸಚಿವ ಸಂಪುಟ ಅನುಮೊದನೆ ನೀಡಿದ ಬೆನ್ನಲ್ಲಿ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು., ನಾನು ಶಾಸಕನಿದ್ದಾಗ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಾದ ಪುರಸಭೆ, ಜಾಲಿ ಪಟ್ಟಣ ಪಂಚಾಯತ್, ಹೆಬ್ಳೆ ಗ್ರಾಮಪಂಚಾಯತ್ ಸೇರಿದಂತೆ ಹಿಂದೂಗಳ ಸಂಖ್ಯೆಯೂ ಇರುವ ಮಾವಿನಕುರ್ವೆ, ಮುಂಡಳ್ಳಿ, ಯಲ್ವಡಿಕವೂರ, ಮುಟ್ಟಳ್ಳಿ, ಶಿರಾಲಿ ಪಂಚಾಯತಗಳನ್ನು ಸೇರಿದ ನಗರಸಭೆಗೆ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಸಚಿವ ಮಂಕಾಳ ವೈದ್ಯ ಹಿಂದುಗಳ ಬಾಹುಳ್ಯವಿರುವ ಪುರಸಭೆಗೆ ಬೌಗೋಳಿಕವಾಗಿ ಹತ್ತಿರವಿರುವ ಎಲ್ಲಾ ಪ್ರದೇಶವನ್ನು ಕಡೆಗಣಿಸಿ ಹಿಂದುಗಳನ್ನು ನಗರಸಭೆಯಿಂದ ದೂರವಿರಿಸಿ ಹಿಂದೂಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮಂಡಳ ಅಧ್ಯಕ್ಷ ಲಕ್ಮೀನಾರಾಯಣ ನಾಯ್ಕ ಮಾತನಾಡಿ ಅಭಿವೃದ್ಧಿ ವಿಚಾರವಾಗಿ ಭಟ್ಕಳ ನಗರ ಸಭೆಯಾಗಿ ಮೇಲ್ದರ್ಜೇಗೇರುತ್ತಿರುವ ಕುರಿತು ಯಾವುದೇ ವಿರೋಧವಿಲ್ಲ . ಆದರೆ ಕೇವಲ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶವನ್ನು ಸೇರಿಸಿ ನಗರಸಭೆಯನ್ನು ರೂಪಿಸಿರುವುದು ಹಿಂದುಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ ಭಟ್ಕಳ ರೈಲ್ವೆ ನಿಲ್ದಾಣ ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯನ್ನು ಹೊಂದಿದ್ದು ಪಟ್ಟಣಕ್ಕೆ ಹತ್ತಿರವಿರುವ ಈ ಭಾಗವನ್ನು ನಗರಸಭೆಯಿಂದ ಹೊರಗಿಡಲಾಗಿದೆ. ಪೌರಾಡಳಿತ ನಿರ್ದೇಶನಾಲಯದ ನಿಯಮಾವಳಿಗಳ ಪ್ರಕಾರ ಶೇಕಡಾ 50 ಕ್ಕಿಂತ ಹೆಚ್ಚು ಕೃಷಿಭೂಮಿ ಹೊಂದಿರುವ ಪ್ರದೇಶವನ್ನು ನಗರಸಭೆಗೆ ಸೇರಿಸುವಂತಿಲ್ಲ .ಆದರೂ ಕೃಷಿಕರೆ ಹೆಚ್ಚಾಗಿರುವ ಹೆಬಳೆ ಗ್ರಾಮ ಪಂಚಾಯತನ್ನು ನಗರಸಭೆಗೆ ಸೇರಿಸಲಾಗಿದೆ ಎಂದು ದೂರಿದರು.
ಮಾಜಿ ನಿಗಮ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ವೃತ್ತಿಪರ ಪ್ರಕೋಷ್ಠ ಜಿಲ್ಲಾ ಸಂಚಾಲಕರಾದ ರಾಜೇಶ ನಾಯ್ಕ, ರಾಜ್ಯ ಹಿಂದುಳಿದ ಮೊರ್ಚ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ ಸಚಿವರ ನಡೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಮಂಡಳದ ಪ್ರಧಾನ ಕಾರ್ಯದರ್ಶಿ, ಮೀನುಗಾರಿ ಪ್ರಕೋಷ್ಠ ಜಿಲ್ಲಾ ಸಂಚಾಲಕ ಭಾಸ್ಕರ ದೈಮನೆ, ತಾಲೂಕಾ ಕಾರ್ಯದರ್ಶಿ ಶ್ರೀಧರ ನಾಯ್ಕ, ಹೆಬ್ಳೆ ಪಂಚಾಯತ್ ಅಧ್ಯಕೇ ಪಾರ್ವತಿ ನಾಯ್ಕ ಮತ್ತಿತರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ