ಕುಮಟಾ: ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ರಾಜ್ಯದಾದ್ಯಂತ ಸಂಭ್ರಮದಿoದ ಆಚರಿಸಲಾಗುತ್ತದೆ. ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಇಂದು ಕುಮಟಾ ತಾಲೂಕಿನ ಕಡ್ಲೆಯ ಕಾರಹಿತ್ತಲದ ನಾಗಬನ, ಪಟ್ಟಣದ ಕುಂಬೇಶ್ವರ ದೇವಸ್ಥಾನ, ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಮಹಾಸತಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿದ ಭಾಗಗಳಿಂದ ಆಗಮಿಸಿದ ಭಕ್ತಾಧಿಗಳು ಶ್ರೀ ನಾಗದೇವರಿಗೆ ಹಾಲಿನಾಭಿಷೇಕ, ಏಳನೀರಿನಭಿಷೇಕ ಸೇರಿದಂತೆ ವಿವಿದ ಸೇವೆ ಸಲ್ಲಿಸಿ ಕೃತಾರ್ಥರಾದರು.
ಕಡ್ಲೆಯ ಕಾರಹಿತ್ತಲದ ನಾಗಬನದಲ್ಲಿಯೂ ಸಹ ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಮಂಗಳೂರಿನಿoದ ಬಂದ ಕುಟುಂಬದವರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ನಾಗನಿಗೆ ತಮ್ಮ ಸೇವೆಗಳನ್ನು ಸಲ್ಲಿಸಿದರು. ಬಾಳೆಗೊನೆ ಸೇವೆ, ತುಪ್ಪದ ದೀಪ ಸೇವೆ, ಹಣ್ಣುಕಾಯಿ ಸೇವೆ ಸೇರಿದಂತೆ ಹಲವಾರು ಸೇವೆಗಳನ್ನು ಸಲ್ಲಿಸಿ ಕೃಥಾರ್ತರದರು.
ಈ ಸಂದರ್ಭದಲ್ಲಿ ಮಂಗಳೂರಿನಿAದ ಆಗಮಿಸಿದ ಭಕ್ತರಾದ ಶಿವಶಂಕರ ರಾಮ್ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ ಕಡ್ಲೆಯ ಕಾರಹಿತ್ತಲದ ನಾಗದೇವರನ್ನು 2007 ರಲ್ಲಿ ಪ್ರತಿಷ್ಠೆ ಮಾಡಲಾಗಿದೆ. ಅದಕ್ಕಿಂತಲೂ ಹಿಂದೆ ನಮ್ಮ ಪೂರ್ವಿಕರಾದ ತಿಮ್ಮಪ್ಪ ಶೆಟ್ಟಿಯವರು ಈ ಸ್ಥಳದಲ್ಲಿ ನಾಗರ ಆರಾಧನೆ ಮಾಡಿಕೊಂಡು ಬಂದಿದ್ದರು.
ಅವರ ನಿಧನದ ನಂತರ 2007 ರಲ್ಲಿ ನಾವುಗಳು ಈ ಸ್ಥಳಕ್ಕೆ ಬಂದು ಶ್ರೀದೇವರ ಪರಿವಾರದ ಸಮೇತ ದೇವತೆಗಳನ್ನು ಪ್ರತಿಷ್ಠೆ ಮಾಡಿ ಆರಾಧಿಸಿಕೊಂಡು ಬರುತ್ತಿದ್ದೇವೆ. ಅನಾದಿಕಾಲದಿಂದಲೂ ಈ ಸ್ಥಳದಲ್ಲಿ ನಾಗದೇವತೆ, ಜಟಗ, ಸೇರಿದಂತೆ ಇನ್ನುಳಿದ ಪರಿವಾರ ದೇವತೆಗಳನ್ನು ಪೂಜಿಸಿಕೊಂಡು ಬರಲಾಗಿದೆ. ನಾಗರಪಂಚಮಿ ಸೇರಿದಂತೆ ಇನ್ನಿತರ ದಿನಗಳಲ್ಲಿಯೂ ಸಹ ನಾಗಬನಕ್ಕೆ ಹೆಚ್ಚಿ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್, ದೀಪೇಶ ನಾಯ್ಕ ಕುಮಟಾ.