ಭಟ್ಕಳ: ಪುನಿತ್ ರಾಜಕುಮಾರು ಬದುಕಿದ ರೀತಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ಅದರಲ್ಲೂ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ಗೊತ್ತಾಗದಂತೆ ಅದನ್ನು ನಿಭಾಯಿಸಿದ ರೀತಿ ನಿಜಕ್ಕೂ ಅನನ್ಯ. ಇಂತಹ ಮಾಣಿಕ್ಯವೊಂದು ಮರೆಯಾದರು ಮರೆಯುವುದು ಹೇಗೆ. ಹೌದು ಪುನಿತ್ ರಾಜಕುಮಾರ್ ಜನ್ಮದಿನವನ್ನು ನಾಡಿನಾದ್ಯಂತ ವಿವಿಧ ಸಂಘಸoಸ್ಥೆಗಳು ತನ್ನದೆ ರೀತಿಯಲ್ಲಿ ಆಚರಿಸಿ ಆ ಮಹಾತ್ಮನಿಗೆ ಗೌರವ ಸಲ್ಲಿಸಿದೆ ಈ ನಿಟ್ಟಿನಲ್ಲಿ ನಮ್ಮ ಭಟ್ಕಳ ದಲ್ಲಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಇವರ 50 ನೇ ವರ್ಷದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದೆ.
ಪಟ್ಟಣದ ಬಸ್ ಸ್ಟ್ಯಾಂಡ್ ಎದುರುಗಡೆಯಿರುವ ಟ್ಯಾಕ್ಸಿ ನಿಲ್ದಾಣದ ಹತ್ತಿರ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಅನ್ನದಾನವನ್ನು ನೆರವೇರಿಸಿದೆ. ಕಾರ್ಯಕ್ರಮದಲ್ಲಿ ಒಟ್ಟು 80 ಜನ ರಕ್ತದಾನ ಮಾಡಿದ್ದು, ಮಧ್ಯಾಹ್ನದ ಹೊತ್ತಿಗೆ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ, ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು. ಆ ನಂತರ ನೆರೆದ ನೂರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ, ಜೈಮಾರುತಿ ರಕ್ತದಾನ ಬಳಗದ ಗಣೇಶ ಸಮಸ್ತ ಅಪ್ಪು ಅಭಿಮಾನಿ ಬಳಗದವರು ಭಾಗವಹಿಸಿದರು.
ವಿಸ್ಮಯ ನ್ಯೂಸ್ ಈಶ್ವರ್ ನಾಯ್ಕ ಭಟ್ಕಳ