Focus News

ಚುನಾವಣೆ ನಂತರ ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ : ಅಮದಳ್ಳಿ ಗ್ರಾಮ ದೇವರ ಗ್ರಾಮ ಎಂದ ಶಾಸಕ ಸೈಲ್

Share

ಕಾರವಾರ: ಗ್ರಾಮೀಣ ಆಡಳಿತ ವ್ಯವಸ್ಥೆಗೆ ಬಲ ತುಂಬುವ ಹೆಜ್ಜೆಯಾಗಿ ಅಮದಳ್ಳಿ ಗ್ರಾಮ ಪಂಚಾಯತ್‌ನ ನೂತನ ಸಭಾಭವನವನ್ನು ಶಾಸಕ ಸತೀಶ ಕೃಷ್ಣ ಸೈಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮದಳ್ಳಿ ಗ್ರಾಮಕ್ಕೆ ಇದುವರೆಗೆ ಸುಮಾರು 12ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು, ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಸೌಕರ್ಯ, ಸಮುದಾಯ ಕಟ್ಟಡಗಳು ಮತ್ತು ಜನೋಪಯೋಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಳಿದರು.

“ರಾಜಕೀಯ ಕೇವಲ ಚುನಾವಣೆಯವರೆಗೆ ಮಾತ್ರ ಸೀಮಿತವಾಗಬೇಕು. ಚುನಾವಣೆ ಮುಗಿದ ಬಳಿಕ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು. ಬಲಿಷ್ಠ ಪಂಚಾಯತ್ ವ್ಯವಸ್ಥೆಯೇ ಶಾಶ್ವತ ಅಭಿವೃದ್ಧಿಗೆ ಅಡಿಪಾಯ ಎಂದು ಅವರು ಸಂದೇಶ ನೀಡಿದರು.

ಅಮದಳ್ಳಿ ಗ್ರಾಮ ದೇವರ ಗ್ರಾಮವಾಗಿದ್ದು, ಇಲ್ಲಿನ ಪುರಾತನ ಕೆರೆ ಮತ್ತಿತರ ಅಭಿವೃದ್ಧಿಯೂ ನಮ್ಮ ಆದ್ಯ ಕರ್ತವ್ಯವಾಗಿದೆ. ನನ್ನ ಪ್ರೀತಿಯ ಗ್ರಾಪಂ ಗಳಲ್ಲಿ ಒಂದಾಗಿರುವ ಅಮದಳ್ಳಿ ಗ್ರಾಮ ಮತ್ತಷ್ಟು ಅಭಿವೃದ್ಧಿಯ ದಾರಿಯಲ್ಲಿ ಸಾಗಬೇಕು ಎಂಬುದು ತಮ್ಮ ನಿರಂತರ ಆಶಯ. ಇಲ್ಲಿನ ಹಿರಿಯರು ಎಲ್ಲ ಜನಪ್ರತಿನಿಧಿಗಳು,ನಾಗರಿಕರು ಸಹ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಕೈಜೋಡಿಸುವ ಮನೋಭಾವನೆ ಹೊಂದಿದ್ದಾರೆ ಎಂದರು.

ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಯತೆ ವಹಿಸಿ ಮಾತನಾಡಿ,ಶಾಸಕರ ಜನಪದ ಕಾಳಜಿ,ತಮ್ಮ ಗ್ರಾಮ ಪಂಚಾಯಿತಿಗೆ ನೀಡಿದ ಬಹುಕೋಟಿ ಅನುದಾನ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿ,ತಮ್ಮ ಗ್ರಾಮ ಪಂಚಾಯತ ಜನರ ಹಾಗೂ ಮುಂಬರುವ ಜನಪ್ರತಿನಿಧಿಗಳ ಸಭೆ ಮತ್ತಿತರ ಕಾರ್ಯಗಳಿಗೆ ಅನುಕೂಲ ವಾಗುವಂತೆ ಸಭಾಭವನ ನಿರ್ಮಿಸಲಾಗಿದೆ ಎಂದರು . ಪಿಡಿಒ ತೃಪ್ತಿ ನಾಯ್ಕ, ಪಂಚಾಯತ್ ಸದಸ್ಯರು–ಸಿಬ್ಬಂದಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್, ಊರಿನ ಹಿರಿಯರು ಮತ್ತು ಗ್ರಾಮಸ್ಥರಿದ್ದರು.

ಕೆಲಸದ ಸೇರು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ,ತಮ್ಮ ಕಾಲಾವಧಿಯಲ್ಲಿ ವಾರ್ಡಿನಲ್ಲಿ ಆದ ಅಭಿವೃದ್ಧಿ,ಶಾಸಕರ ಸ್ಪಂದನೆ ಕುರಿತು ಅಭಿನಂದನೆಯ ಮಾತನಾಡಿದರು.ಪಂಚಾಯತ ಕಚೇರಿ ಒಳಾಂಗಣ ವಿನ್ಯಾಸದ ಕುರಿತು ಶಾಸಕರು ,ಮೆಚ್ಚುಗೆ ಸೂಚಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿ ಖರೀದಿ ಮೇಲೆ ಭರ್ಜರಿ ಆಫರ್‌ಗಳು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಅಂಕೋಲಾದ ಪ್ರಸಿದ್ಧ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್...

ಅಂಕೋಲಾದಲ್ಲಿ ಇಂದು ಪಂಚದೇವರ ದೊಡ್ಡ ಕಾರ್ತಿಕೋತ್ಸವ : ಶಿರ ಕುಳಿ ಕಾನದೇವಿ ದೇವಸ್ಥಾನದ ಹತ್ತಿರ ವನಭೋಜನಕ್ಕೆ ನಡೆಯುತ್ತಿದೆ ಸಿದ್ದತೆ

ಅಂಕೋಲಾ: ತಾಲೂಕಿನ ಸಂಸ್ಕೃತಿಯ ಆರಾಧನಾ ಪದ್ಧತಿಯಾಗಿ ಹಲವು ತಲೆಮಾರುಗಳಿಂದ ಆಚರಿಸಲ್ಪಡುತ್ತಬಂದಿರುವ ಪಂಚ ದೇವರುಗಳ ದೊಡ್ಡ ಕಾರ್ತಿಕೋತ್ಸವ...

ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಹೋರಾಟ ನಿರಂತರ : ಬಹಿರಂಗ ಸಭೆ ತಾತ್ಕಾಲಿಕವಾಗಿ ಮುಂದೂಡಿಕೆ : ಸಂಘಟಕ ಪ್ರಮುಖರು ಪ್ರಕಟಣೆಯಲ್ಲಿ ಹೇಳಿದ್ದೇನು ?

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ಸಾಮೂಹಿಕ ನಾಯಕತ್ವದಡಿ, ಅಂಕೋಲಾ...

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ...

ಆಧುನಿಕ ಜಗತ್ತನ್ನಾಳಲಿರುವ AI ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ...

ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ ವಿಶೇಷ ಅಭಿಯಾನ

ಅಂಕೋಲಾ : ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗೆ...

ಅಂಕೋಲಾ ಕಲ್ಲೇಶ್ವರದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಅಂಕೋಲಾ : ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ಸಂಗಮ...

ಹೊನ್ನಾವರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನೆ: ಅದ್ಧೂರಿ ಮೆರವಣಿಗೆ

ಹೊನ್ನಾವರ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚವತಿಯ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ವಿಜೃಂಭಣೆಯಿoದ ಆಚರಿಸಿ 7...