ಅಂಕೋಲಾದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಮಾತನಾಡುತ್ತಿರುವ ದೃಶ್ಯ"
Important

ಗುರು ಶಿಷ್ಯರ ಸಂಬಂಧ ಚಿರಸ್ಥಾಯಿ: ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ

Share

ಅಂಕೋಲಾ : ಶಿಕ್ಷಕರು ವೃತ್ತಿಯಿಂದ ನಿವೃತ್ತರಾದರೂ ಜನಮಾನಸದಿಂದ ಎಂದಿಗೂ ನಿವೃತ್ತರಾಗುವುದಿಲ್ಲ. ಗುರು ಶಿಷ್ಯರ ಸಂಬಂಧ ಎಂದಿಗೂ ಚಿರಸ್ಥಾಯಿಯಾಗಿರುತ್ತದೆ ಎಂದು ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸೆ 5 ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ನಿವೃತ್ತ ಮತ್ತು ಉತ್ತಮ ಶಿಕ್ಷಕರಿಗೆ ಗೌರವ

ಜಿಲ್ಲಾ ಪಂ . ಉ.ಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಹಾಗೂ ದಿ ಅಂಕೋಲಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂಕೋಲಾದಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು.

ತಹಶೀಲ್ದಾರ ಡಾ ಚಿಕ್ಕಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರ ಕಾರ್ಯ ತುಂಬಾ ಮಹತ್ವಪೂರ್ಣವಾದದ್ದು, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಏಳಿಗೆಯನ್ನು ಸಂಭ್ರಮಿಸುತ್ತಾರೆ‌. ನಾನೊಬ್ಬ ಅನರಕ್ಷಸ್ಥ ಕುಟುಂಬದಲ್ಲಿ ಹುಟ್ಟಿದ್ದು ಇಂದು ಎಂ ಬಿ ಬಿ ಎಸ್ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಸೀಲ್ದಾರ್ ಆಗಿ ನಿಂತಿದ್ದೇನೆ ಅಂದರೆ ನನ್ನ ತಂದೆ ತಾಯಿಯರ ಪರಿಶ್ರಮದಂತೆ ನನ್ನನ್ನು ತಿದ್ದಿ ತೀಡಿದ ಗುರುಗಳು ಮುಖ್ಯ ಕಾರಣ ಎಂದರು.

ಸಮಾಜದಲ್ಲಿ ಶಿಕ್ಷಕರ ಮಹತ್ವದ ಕುರಿತು ಉಪನ್ಯಾಸ

ಗ್ಯಾರಂಟಿ ಪ್ರಾಧಿಕಾರದ ತಾಲೂಕ ಅಧ್ಯಕ್ಷ ಪಾಂಡುರಂಗ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಸಮಾಜದಲ್ಲಿ ಶಿಕ್ಷಕರ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ನ್ಯಾಯವಾದಿ ನಾಗಾನಂದ‌ಬಂಟ ಮಾತನಾಡಿ ಶಿಕ್ಷಕರಿಗೆ ಶುಭಾಶಯ ಕೋರಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ರಾಯ್ಕರ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ಹೆಚ್ಚುವರಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ರಾಮು ಗುನಗಿ ಸ್ವಾಗತಿಸಿದರು. ಬಿ ಆರ್ ಸಿ ಮಂಜುನಾಥ ನಾಯ್ಕ ವಂದಿಸಿದರು.

ವೇದಿಕೆಯಲ್ಲಿ ಡಿ ವಾಯ್ ಪಿ ಸಿ ಭಾಸ್ಕರ ಗಾಂವಕರ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ದೇವರಾಯ ನಾಯಕ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ಎಂ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ, ಮಾದ್ಯಮಿಕ ಶಾಲಾ ಶಿಕ್ಷಕರ‌ ಸಂಘದ ಅಧ್ಯಕ್ಷ ಗಣಪತಿ ನಾಯಕ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ನಾಯಕ, ಮಂಜುನಾಥ ನಾಯಕ, ರಾಜೇಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಕ, ಶಿಕ್ಷಕಿಯರನ್ನು, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಗಲಿದ ಶಿಕ್ಷಕರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ‌ ನಾಯಕ ಹೊಸ್ಕೇರಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಶಿಸ್ತಿನ ಸಂಘಟನೆಗೆ ಸಾಕ್ಷಿಯಾಯಿತು.

ಅಗ್ರಗೋಣ ಸ.ಹಿ ಪ್ರಾ ಶಾಲೆಯ ಶಿಕ್ಷಕ ರಾಜೇಶ ನಾಯಕ ಸೂರ್ವೆ ಹಾಗೂ ಕೇಣಿ ಸ.ಮಾ.ಹಿ. ಪ್ರಾ. ಶಾಲೆಯ ಶಿಕ್ಷಕಿ ರಶೀದಾ ಎಸ್. ಶೇಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಮೇಘನಾ ಗೋವಿಂದ ಗೌಡ ಯಕ್ಷನೃತ್ಯವನ್ನು ಮತ್ತು ಶ್ರುತಿ ಮಡಿವಾಳ ಭರತ ನಾಟ್ಯವನ್ನು ಪ್ರದರ್ಶಿಸಿದರು. ಶಿಕ್ಷಕ ರಾಮನಾಥ ಸಂಗಡಿಗರು ಪ್ರಾರ್ಥಿಸಿ ನಾಡಗೀತೆಯನ್ನು ಪ್ರಸ್ತುತಪಡಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ ಅರೆಗದ್ದೆ ನೆನಪಾಗುತ್ತಾರೆ. ಅದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮ, ಆಯ್ಸಪ್ಲಾಂಟ್. ಸಹನಾ ಪ್ಯಾಲೇಸ್ ಲಾಡ್ಜ್,...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಬಡಿದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಪಟ್ಟಣದ ಅರಣ್ಯ ಇಲಾಖೆ ಕಛೇರಿ ಹತ್ತಿರ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಡ, ಮಧ್ಯಮವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

ಉಡುಪಿ: ರಾಜ್ಯದಲ್ಲೇ ಪ್ರಸಿದ್ಧ ಪಡೆದ ಉಡುಪಿ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ , ಬಡ, ಮಧ್ಯಮವರ್ಗ...

ಶತರುದ್ರ ಮತ್ತು ಶತಚಂಡಿಕಾ ಯಾಗಕ್ಕೆ ಆತ್ಮೀಯ ಸ್ವಾಗತ

ಕಾರವಾರ: ದಿವಂಗತ ಕೃಷ್ಣ ಸೈಲ್ ಹಾಗೂ ಗಿರಿಜಾ ಕೃಷ್ಣ ಸೈಲ್ ರವರ ಆರ್ಶೀವಾದದೊಂದಿಗೆ ಈ ಕ್ಷೇತ್ರದ...

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ...

ಶಾಲಾ ಮಕ್ಕಳ ಬಸ್ ಪಲ್ಟಿ: ವಿದ್ಯಾರ್ಥಿ ಸಾವು

ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ...

ಆಯಕಟ್ಟಿನ ಪ್ರದೇಶದಲ್ಲಿರುವ 8 ಗುಂಟೆ ಜಾಗ ಮಾರಾಟಕ್ಕಿದೆ

ಅಂಕೋಲಾ: ತಾಲೂಕಿನ ಬಳಲೆಯಲ್ಲಿ ಅತ್ಯುತ್ತಮ ಸೌಕರ್ಯ ಹೊಂದಿರುವ, ಆಯಕಟ್ಟಿನ ಪ್ರದೇಶದಲ್ಲಿರುವ NA ಆದ ಜಾಗ ಮಾರಾಟಕ್ಕಿದೆ....

ಕುಮಟಾದ ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಖ್ಯಾತ ಕಲಾವಿದರಿಂದ ಲೈವ್ ಮ್ಯೂಜಿಕ್ ನೋಡುತ್ತಾ ರುಚಿ-ಶುಚಿಯಾದ ಆಹಾರ ಸವಿಯುವ ಅವಕಾಶ

ಕುಮಟಾ: ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಕುಮಟಾ, ಇದು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಫ್ಯಾಮಿಲಿ...