ಚಂದ್ರಗ್ರಹಣ 2025 ಸಮಯ ಮತ್ತು ಸೂತಕ ಕಾಲ ವಿವರ
Important

ಐತಿಹಾಸಿಕ ಚಂದ್ರಗ್ರಹಣ: ಆರಂಭ-ಮುಕ್ತಾಯ: ಚಂದ್ರಗ್ರಹಣ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

Share

ವಿಸ್ಮಯ ಟಿ.ವಿ ನ್ಯೂಸ್ ಡೆಸ್ಕ್: ಭಾರತ ಸೇರಿದಂತೆ ವಿಶ್ವದಾದ್ಯಂತ 2025ರ ಎರಡನೇ ಮತ್ತು ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದು, ಹೀಗಾಗಿ “ಬ್ಲಡ್ ಮೂನ್” ಎಂದು ಕರೆಯಲಾಗುತ್ತದೆ.

ಗ್ರಹಣ ಅಂದ ತಕ್ಷಣ ಕೆಲ ಗೊಂದಲಗಳು ಸಾಮಾನ್ಯ. ಗ್ರಹಣದ ವೇಳೆ ಏನು ಮಾಡಬೇಕು? ಏನು ಮಾಡಬಾರದು. ಆರಂಭ-ಮುಕ್ತಾಯ ಯಾವಾಗ? ಬರಿಗಣ್ಣಿನಲ್ಲಿ ನೋಡಬಹುದಾ? ಚಂದ್ರಗ್ರಹಣ ಕುರಿತ ಇಂತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ. ಗ್ರಹಣದ ಸಮಯ, ಸೂತಕ, ವೀಕ್ಷಣೆ, ಜ್ಯೋತಿಷ್ಯ ಪ್ರಭಾವ ಸೇರಿದಂತೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಭಾರತದಲ್ಲಿ ಚಂದ್ರಗ್ರಹಣದ ಸಮಯ

ಆರಂಭ: ಸೆಪ್ಟೆಂಬರ್ 7ರ ರಾತ್ರಿ 09:57 ನಿಮಿಷ
ಮುಕ್ತಾಯದ ಸಮಯ: ಸೆಪ್ಟೆಂಬರ್ 8ರ ಬೆಳಿಗ್ಗೆ 01:26 ನಿಮಿಷ
ಉತ್ತುಂಗದ ಸಮಯ: ರಾತ್ರಿ 11:00 ರಿಂದ 12:22 ನಿಮಿಷದ ವರೆಗೆ
ಒಟ್ಟು ಸಮಯ: 3 ಗಂಟೆ 29 ನಿಮಿಷ

ಸೂತಕ ಕಾಲ ಯಾವಾಗ ಪ್ರಾರಂಭ

ಭಾರತೀಯ ಪರಂಪರೆ ಮತ್ತು ಹಿಂದು ಧಾರ್ಮಿಕ ನಂಬಿಕೆ ಪ್ರಕಾರ, ಚಂದ್ರಗ್ರಹಣ ಆರಂಭಕ್ಕೂ 9 ಗಂಟೆಗಳ ಮೊದಲು ಸೂತಕ ಕಾಲ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 7ರ ಮಧ್ಯಾಹ್ನ 12:57ಕ್ಕೆ ಸೂತಕ ಕಾಲ ಪ್ರಾರಂಭವಾಗಲಿದ್ದು, ಗ್ರಹಣ ಮುಗಿದ ತಕ್ಷಣ ಸೂತಕ ಕಾಲವೂ ಮುಕ್ತಾಯವಾಗಲಿದೆ. ಸಾಮಾನ್ಯವಾಗಿ ಸೂತಕ ಕಾಲದಲ್ಲಿ ದೇವಾಲಯಗಳು ಮುಚ್ಚಲ್ಪಟ್ಟು, ಗ್ರಹಣದ ನಂತರ ಶುದ್ಧೀಕರಣ ವಿಧಿಗಳೊಂದಿಗೆ ತೆರೆಯಲಾಗುತ್ತದೆ. ಇದು ಅವರವರ ನಂಬಿಕೆಯ ಪ್ರಶ್ನೆ. ನಂಬಿಕೆಯಿದ್ದವರು ಅನುಸರಿಸಬಹುದು.

ಈ ಗ್ರಹಣ ಭಾರತದಲ್ಲಿ ಎಲ್ಲಿ ಗೋಚರಿಸುತ್ತದೆ?

ದೇಶವ್ಯಾಪಿಯಾಗಿ ಪೂರ್ಣವಾಗಿ ಕಾಣಸಿಗುತ್ತದೆ. ಆದರೆ ಹವಾಮಾನ ಸಹಕಾರ ಅವಶ್ಯಕ. ಮೋಡೆ ಅಥವಾ ಮಳೆಯ ವಾತಾವರಣ ಇದ್ದಲ್ಲಿ ಕಷ್ಟಸಾಧ್ಯವಾಗಬಹುದು. ಸಾಮಾನ್ಯವಾಗಿ ಚಂದ್ರಗ್ರಹಣವು ಕೆಲವು ಪ್ರದೇಶಗಳಲ್ಲಿ ಮಾತ್ರ ಗೋಚರಿಸುತ್ತದೆ. ಆದರೆ, ಈ ಬಾರಿಯ ಗ್ರಹಣ ಏಷ್ಯಾ, ಆಫ್ರಿಕಾ, ಯುರೋಪ್, ಅಮೆರಿಕಾ ಸೇರಿಂದತೆ ಹೆಚ್ಚಿನ ಭಾಗಗಳಿಂದ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.

Blood Moon 2025: ಬರಿಗಣ್ಣಿನಿಂದ ವೀಕ್ಷಿಸಬಹುದಾ?

ಹೌದು. ಹೌದು, ಈ ರಕ್ತ ಚಂದ್ರಗ್ರಹಣವನ್ನು ಬೈನಾಕ್ಯುಲರ್, ಟೆಲಿಸ್ಕೋಪ್ ಅಥವಾ ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದಾಗಿದೆ. ಈ ಚಂದ್ರ ಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಕನ್ನಡಕ ಅಗತ್ಯವಿಲ್ಲ. ಸೂರ್ಯ ಗ್ರಹಣದಂತೆ ಚಂದ್ರ ಗ್ರಹಣವು ಕಣ್ಣಿಗೆ ಅಪಾಯವಲ್ಲ. ಚಂದ್ರ ಗ್ರಹಣ ಸುರಕ್ಷಿತ. ಬರಿಗಣ್ಣಿನಿಂದ ನೋಡಬಹುದು.

ಜ್ಯೋತಿಷ್ಯದ ಪ್ರಕಾರ ರಾಶಿ ಫಲ

ಶುಭಫಲ: ಕನ್ಯಾ, ಧನು, ಮೇಷ, ವೃಷಭ
ಅಶುಭಫಲ: ಮೀನು, ಕರ್ಕ, ವೃಶ್ಚಿಕ, ಕುಂಭ
ಮಿಶ್ರಫಲ: ಸಿಂಹ, ಮಕರ, ಮಿಥುನ, ತುಲಾ

ಯಾವ ಸಮಯದಲ್ಲಿ ಚಂದ್ರನು ಕೆಂಪಾಗಿರುತ್ತಾನೆ?

ರಾತ್ರಿ 11:00-12:23ರ ಅವಧಿಯಲ್ಲಿ ಚಂದ್ರ ಕೆಂಪಾಗುತ್ತಾನೆ.

ಮುಂದಿನ ಸಂಪೂರ್ಣ ಚಂದ್ರಗ್ರಹಣ ಯಾವಾಗ?

ಜಗತ್ತಿನ ಬೇರೆ ಭಾಗಗಳಿಗೆ ಮಾರ್ಚ್ 2-3, 2026 ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.

ಈ ಚಂದ್ರಗ್ರಹಣದ ಲೈವ್ ವೀಕ್ಷಿಸುವುದು ಹೇಗೆ?

ಹವಾಮಾನ ಅಥವಾ ಸ್ಥಳೀಯ ಕಾರಣಗಳಿಂದ ನೋಡಲು ಸಾಧ್ಯವಾಗದಿದ್ದರೂ, ಆನ್‌ಲೈನ್‌ನಲ್ಲಿ ಲೈವ್ ವೀಕ್ಷಿಸಬಹುದು.

ಗ್ರಹಣ ಹೇಗೆ ಸಂಭವಿಸುತ್ತದೆ

ಸೂರ್ಯ, ಭೂಮಿ ಹಾಗು ಚಂದ್ರರು ಒಂದೇ ರೇಖೆಯಲ್ಲಿ ಬಂದಾಗ, ಭೂಮಿಯು ಸೂರ್ಯನ ಬೆಳಕನ್ನು ಚಂದ್ರನನ್ನು ತಲುಪುವುದನ್ನು ತಡೆ ಹಿಡಿಯುತ್ತದೆ. ಈ ವೇಳೆ ಚಂದ್ರನು ಗೋಚರಿಸುವುದಿಲ್ಲ. ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...