uttara kannada news update
Important

ದಾಂಡೇಲಿಯಲ್ಲಿ ಐವರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: ಹಳಿಯಾಳದಲ್ಲಿ ಮೂವರ ಮೇಲೆ ಬೀದಿನಾಯಿ ದಾಳಿ

Share

ದಾಂಡೇಲಿ, ಆಗಸ್ಟ್ 29: ಬೈಕ್ ಕಳ್ಳತನಕ್ಕೆ ಸಂಬoಧಿಸಿದoತೆ ಪ್ರಕರಣದ ಜಾಡನ್ನು ಬೆನ್ನಟ್ಟಿದ್ದ ದಾಂಡೇಲಿ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ ಘಟನೆ ನಡೆದಿದೆ. ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾ ನಿವಾಸಿ ಹುಸೇನ್ ಸಾಬ ಅವರು ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು.

6 ದ್ವಿಚಕ್ರ ವಾಹನ ವಶಕ್ಕೆ

ಈ ಹಿನ್ನಲೆಯಲ್ಲಿ, ನಗರ ಠಾಣೆಯ ಪೊಲೀಸರು ಪ್ರಕರಣದ ಜಾಡನ್ನು ಬೆನ್ನಟ್ಟಿ ಐವರು ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರೆಲ್ಲರೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನಿವಾಸಿಗಳಾಗಿದ್ದಾರೆ. ಇವರಿಂದ ಒಟ್ಟು ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬoಧಪಟ್ಟoತೆ, ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಂಗನಮಕ್ಕಿ ಭರ್ತಿಗೆ ಒಂದು ಅಡಿ ಮಾತ್ರ ಬಾಕಿ : ಶರಾವತಿ ಕಣಿವೆಯಲ್ಲಿ ಭಾರೀ ಮಳೆ: ಪ್ರವಾಹದ ಅಪಾಯ ಹೆಚ್ಚಳ

ಹಳಿಯಾಳದಲ್ಲಿ ಬೀದಿನಾಯಿ ಆತಂಕ

ಹಳಿಯಾಳ: ರಸ್ತೆಯ ವಿನಾಯಕ ನಗರದಲ್ಲಿ ಬೀದಿ ನಾಯಿಗಳ ದಾಳಿಗೊಳಗಾಗಿ ಓರ್ವ ಬಾಲಕ ಸೇರಿದಂತೆ ಮೂವರಿಗೆ ಗಾಯವಾದ ಘಟನೆ ನಡೆದಿದೆ. ಸ್ಥಳೀಯ ನಿವಾಸಿ 11 ವರ್ಷದ ಬಾಲಕ ರೋಷನ್ ಜಮೀರ್, 19 ವರ್ಷದ ವಯಸ್ಸಿನ ಯುವತಿ ಆಶಿಕಾ ಮತ್ತು 70 ವರ್ಷ ವಯಸ್ಸಿನ ವೃದ್ಧ ಹುಸೇನ್ ಸಾಬ್ ಎಂಬವರು ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ.

ಗಾಯಗೊಂಡ ಈ ಮೂವರನ್ನು ಚಿಕಿತ್ಸೆಗಾಗಿ ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹಳಿಯಾಳ ರಸ್ತೆಯ ವಿನಾಯಕ ನಗರ ಸೇರಿದಂತೆ ನಗರದಲ್ಲೇಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ ಅರೆಗದ್ದೆ ನೆನಪಾಗುತ್ತಾರೆ. ಅದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮ, ಆಯ್ಸಪ್ಲಾಂಟ್. ಸಹನಾ ಪ್ಯಾಲೇಸ್ ಲಾಡ್ಜ್,...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಬಡಿದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಪಟ್ಟಣದ ಅರಣ್ಯ ಇಲಾಖೆ ಕಛೇರಿ ಹತ್ತಿರ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಡ, ಮಧ್ಯಮವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

ಉಡುಪಿ: ರಾಜ್ಯದಲ್ಲೇ ಪ್ರಸಿದ್ಧ ಪಡೆದ ಉಡುಪಿ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ , ಬಡ, ಮಧ್ಯಮವರ್ಗ...

ಶತರುದ್ರ ಮತ್ತು ಶತಚಂಡಿಕಾ ಯಾಗಕ್ಕೆ ಆತ್ಮೀಯ ಸ್ವಾಗತ

ಕಾರವಾರ: ದಿವಂಗತ ಕೃಷ್ಣ ಸೈಲ್ ಹಾಗೂ ಗಿರಿಜಾ ಕೃಷ್ಣ ಸೈಲ್ ರವರ ಆರ್ಶೀವಾದದೊಂದಿಗೆ ಈ ಕ್ಷೇತ್ರದ...

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ...

ಶಾಲಾ ಮಕ್ಕಳ ಬಸ್ ಪಲ್ಟಿ: ವಿದ್ಯಾರ್ಥಿ ಸಾವು

ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ...

ಆಯಕಟ್ಟಿನ ಪ್ರದೇಶದಲ್ಲಿರುವ 8 ಗುಂಟೆ ಜಾಗ ಮಾರಾಟಕ್ಕಿದೆ

ಅಂಕೋಲಾ: ತಾಲೂಕಿನ ಬಳಲೆಯಲ್ಲಿ ಅತ್ಯುತ್ತಮ ಸೌಕರ್ಯ ಹೊಂದಿರುವ, ಆಯಕಟ್ಟಿನ ಪ್ರದೇಶದಲ್ಲಿರುವ NA ಆದ ಜಾಗ ಮಾರಾಟಕ್ಕಿದೆ....

ಕುಮಟಾದ ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಖ್ಯಾತ ಕಲಾವಿದರಿಂದ ಲೈವ್ ಮ್ಯೂಜಿಕ್ ನೋಡುತ್ತಾ ರುಚಿ-ಶುಚಿಯಾದ ಆಹಾರ ಸವಿಯುವ ಅವಕಾಶ

ಕುಮಟಾ: ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಕುಮಟಾ, ಇದು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಫ್ಯಾಮಿಲಿ...