Linganamakki dam water release – Sharavathi river flood alert
ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ ದೃಶ್ಯ
Important

ಲಿಂಗನಮಕ್ಕಿ ಭರ್ತಿಗೆ ಒಂದು ಅಡಿ ಮಾತ್ರ ಬಾಕಿ : ಶರಾವತಿ ಕಣಿವೆಯಲ್ಲಿ ಭಾರೀ ಮಳೆ: ಪ್ರವಾಹದ ಅಪಾಯ ಹೆಚ್ಚಳ

Share

ಶಿವಮೊಗ್ಗ/ಹೊನ್ನಾವರ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ ತುಂಬಿಕೊಂಡಿದೆ. ಜಲಾಶಯದ 11 ಗೇಟ್‌ಗಳನ್ನು ತೆರೆಯಲಾಗಿದ್ದು, 36 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ಇದರ ಜೊತೆಗೆ, ಗೇರುಸೊಪ್ಪ ಜಲಾಶಯದಿಂದ 52,706 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶರಾವತಿ ನದಿಗೆ ಹೆಚ್ಚುವರಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಉತ್ತರ ಕನ್ನಡದಲ್ಲಿ ಭಾರೀ ಮಳೆ : ಮೂರು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಸೂಚನೆ ಹೊರಡಿಸಿದೆ.

ಇತ್ತೀಚಿನ ಮಳೆ ಪರಿಣಾಮವಾಗಿ ಹೊನ್ನಾವರದಲ್ಲಿ ಮಾತ್ರ ಸರಾಸರಿ 140 ರಿಂದ 150 ಮಿ.ಮೀ ಮಳೆಯಾಗಿದೆ. ಬಿಡುಗಡೆಯಾದ ನೀರನ್ನು ಮೊದಲು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದ್ದು, ಬಳಿಕ ಅದು ಅರಬ್ಬಿ ಸಮುದ್ರ ಸೇರುತ್ತದೆ.

ಶರಾವತಿ ಕಣಿವೆಯಲ್ಲಿ ಭಾರೀ ಮಳೆ, ಪ್ರವಾಹದ ಅಪಾಯ ಹೆಚ್ಚಳ

ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಶರಾವತಿ ಕಣಿವೆಯ ಜಲಾಶಯಗಳು ವೇಗವಾಗಿ ತುಂಬುತ್ತಿವೆ. ಲಿಂಗನಮಕ್ಕಿ ಅಣೆಕಟ್ಟಿಗೆ ಕೇವಲ ಒಂದು ಅಡಿ ನೀರು ಬಾಕಿ ಉಳಿದಿದ್ದು, ಟೇಲರೀಸ್ ಜಲಾಶಯಕ್ಕೆ ಇನ್ನೂ 5 ಮೀಟರ್ ನೀರು ತುಂಬಬೇಕಾಗಿದೆ.

ಶರಾವತಿ ನದಿ ಕೊಳ್ಳದುದ್ದಕ್ಕೂ, ಲಿಂಗನಮಕ್ಕಿಯಿಂದ ಹೊನ್ನಾವರವರೆಗೂ ಭಾರೀ ಮಳೆಯಾಗುತ್ತಿದೆ. ಸಹ್ಯಾದ್ರಿ ಪರ್ವತದಿಂದ ಹರಿದುಬರುವ ಹತ್ತಾರು ಹಳ್ಳಗಳು ನೇರವಾಗಿ ಶರಾವತಿಗೆ ಸೇರುತ್ತಿದ್ದು, ಆಣೆಕಟ್ಟಿನಿಂದ ಬರುವ ನೀರಿನ ಜೊತೆಗೆ ನದಿಯ ಸ್ವಾಭಾವಿಕ ಹರಿವೂ ಹೆಚ್ಚಳಗೊಂಡಿದೆ.

ಅಂದಾಜು ತಪ್ಪುವಷ್ಟು ನೀರಿನ ಪ್ರಮಾಣ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ವಿದ್ಯುತ್ ಉತ್ಪಾದನಾ ನಿಗಮ (KPC) ಗರಿಷ್ಠ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದರೂ ಅಪಾಯದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಗಸ್ಟ್ 28ರ ಸಂಜೆ 7 ಗಂಟೆಯಿoದ ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ...

ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಓಡಾಟ : ಗ್ರಾಮಸ್ಥರಲ್ಲಿ ಆತಂಕ

ಸಿದ್ದಾಪುರ: ಚಿರತೆಯೊಂದು ರಾತ್ರಿಯ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ ಮನೆ ಮಂದಿಯವರೆಲ್ಲ ಆತಂಕಗೊoಡ ಘಟನೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಕುಂಬ್ರಿಗದ್ದೆಯಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ ನಾಯ್ಕ್ ಅವರ ಮನೆಯಲ್ಲಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ. ಬಿಣಗಾ ಮಾಳಸವಾಡದ ನಿವಾಸಿ ಅಮಿತ್ ಮಾಳಸೇರ್ ಮೃತ ದುರ್ದೈವಿ ಯುವಕನಾಗಿದ್ದಾನೆ. ವೃತ್ತಿಯಲ್ಲಿ ಕಾರು...

ನಾಕುತಂತಿ ಬದುಕಿನ ಸಮನ್ವಯತೆಯ ಸಾರ ಹೊಂದಿದೆ: ಸಾಹಿತಿ ಪುಟ್ಟ ಕುಲಕರ್ಣಿ

ಕುಮಟಾ: ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಗ ಮಾತ್ರ ಬಾಳು ಸುಂದರವಾಗುತ್ತದೆ . ಬದುಕು ಭಾವ , ಬೂತಿ ,ಅನುಭೂತಿ ಇವುಗಳ ಸಮನ್ವಯತೆಯ ಸಾರ ವನ್ನು ನಾಕುತಂತಿ ಹೊಂದಿದೆ...

ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ

ಅಂಕೋಲಾ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ವಿಜಯವನ್ನು ಸಂಭ್ರಮಿಸುವಂತೆ,ಮೂಡಿ ಬಂದ ಗಣಪನ ಮಾದರಿ ದೃಶ್ಯ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ . IPL...

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಗಸ್ಟ್ 28ರ ಸಂಜೆ 7 ಗಂಟೆಯಿoದ ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Monday , 1 September 2025
Related Articles

ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ...

ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ

ಅಂಕೋಲಾ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ವಿಜಯವನ್ನು ಸಂಭ್ರಮಿಸುವಂತೆ,ಮೂಡಿ ಬಂದ ಗಣಪನ...

ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಭಟ್ಕಳ: ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು...

ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿದೆ ಸಂತಾನ ಗಣಪತಿ

ಗೋಕರ್ಣ, ಆಗಸ್ಟ್ 30: ಶ್ರೀ ಕ್ಷೇತ್ರ ಗೋಕರ್ಣ ಮಾದನಗೇರಿ ಶಿವನಾಥ ಮಂದಿರದಲ್ಲಿ ಮಹಾಲೆ ಮನೆತನದ ಗಣಪತಿ...