ಹೊನ್ನಾವರ, ಆಗಸ್ಟ್ 28: ಹೊಸಾಕುಳಿ ಗ್ರಾಮದ ಮೂಲದವರಾದ ಹಾಗೂ ಜಲವಳ್ಳಿಯ ಮರಬಳ್ಳಿ ಜಮೀನಿನಲ್ಲಿ ವಾಸವಾಗಿದ್ದ ಶ್ರೀಮತಿ ಭಾಗೀರಥಿ ರಾಮ ಹೆಗಡೆ (69) ಅವರು ಆಗಸ್ಟ್ 26ರಂದು ರಾತ್ರಿ 9.20ಕ್ಕೆ ಅನಾರೋಗ್ಯದಿಂದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.
ಸರಳ, ಸೌಮ್ಯ ಸ್ವಭಾವದ ಇವರು ಎಲ್ಲರಿಗೂ ಹತ್ತಿರವಾಗಿದ್ದವರು. ಕುಟುಂಬದ ಪ್ರೀತಿಪಾತ್ರ ತಾಯಿಯಾಗಿದ್ದ ಇವರು ತಮ್ಮ ಮಾತು, ನಡತೆ, ಮಮತೆಗಳಿಂದ ಸುತ್ತಮುತ್ತಲಿನವರ ಹೃದಯ ಗೆದ್ದಿದ್ದರು.
ಮೃತರು ಪುತ್ರ ಬಿಜೆಪಿ ಯುವ ಮುಖಂಡ ಎಚ್. ಆರ್. ಗಣೇಶ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗಣ್ಯರ ಸಂತಾಪ
ಇವರ ಅಗಲಿಕೆಯಿಂದ ಊರಿನಲ್ಲಿ ದುಃಖದ ವಾತಾವರಣ ಆವರಿಸಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಸುನೀಲ ನಾಯ್ಕ, ಸೂರಜ ನಾಯ್ಕ ಸೋನಿ, ಶಾಸಕರಾದ ಶಿವರಾಮ ಹೆಬ್ಬಾರ್, ವಿ. ಎನ್. ಭಟ್ಟ ಅಳ್ಳಂಕಿ, ಹೈಕೋರ್ಟ್ ನ್ಯಾಯವಾದಿಗಳಾದ ವಿನಾಯಕ ಭಟ್ಟ, ಆರ್. ಡಿ. ಹೆಗಡೆ ಜಾನ್ಮನೆ, ಅಜಿತ್ ನಾಯ್ಕ ಹಳದೀಪುರ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.
ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ