ಕುಮಟಾ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ವೊಂದು ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿದ ಘಟನೆ ತಾಲೂಕಿನ ಇಂಡಸ್ಟ್ರಿಯಲ್ ಏರಿಯಾ ಸಮೀಪ ನಡೆದಿದೆ.
ಹೆಗಡೆಯಿಂದ ಕುಮಟಾಕ್ಕೆ ಪ್ರಯಾಣಿಕರನ್ನು ತುಂಬಿಕೊoಡು ಹೊರಟಿದ್ದ ಬಸ್ ಇಂಡಸ್ಟ್ರಿಯಲ್ ಏರಿಯಾ ಸಮೀಪ ಚಾಲಕನ ನಿಯಂತ್ರಣ ತಪ್ಪಿದೆ. ನೋಡ ನೋಡುತ್ತಿದ್ದಂತೆಯೇ ಬಸ್ ರಸ್ತೆ ಪಕ್ಕದ ಅಂಗಡಿಗೆ ನುಗ್ಗಿದ್ದು, ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದೊಡ್ಡ ಅಪಾಯ ತಪ್ಪಿತು
ಈ ಘಟನೆಯಲ್ಲಿ ಅಂಗಡಿ ಸಂಪೂರ್ಣವಾಗಿ ಜಖಂಗೊoಡಿದೆ. ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಈ ಚಹಾ ಅಂಗಡಿ ಬಂದ್ ಆಗಿತ್ತು. ಇದರಿಂದಾಗಿ ಸಂಭಾವ್ಯ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ವಿಷಯ ತಿಳಿದ ಬಳಿಕ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ದುರ್ಘಟನೆ ನಡೆದ ಸ್ಥಳಕ್ಕೆ ನೀಡಿದರು.
ಮನೆಯ ಹತ್ತಿರ ಹೆಬ್ಬಾವು ಪತ್ತೆ : ಅರಣ್ಯ ಇಲಾಖೆಯ ತುರ್ತು ಕಾರ್ಯಾಚರಣೆ
ವಿಸ್ಮಯ ನ್ಯೂಸ್, ಕುಮಟಾ