ಅಂಕೋಲಾ : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಒರ್ವ ಆಕಸ್ಮಿಕವಾಗಿ ಬೋಟಿನಿಂದ ಜಾರಿ ಸಮುದ್ರ ನೀರಿನಲ್ಲಿ ಬಿದ್ದು ಕಣ್ಮರೆಯಾದ ಘಟನೆ ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ರವಿವಾರ ಸಂಭವಿಸಿದೆ. ಭಾವಿಕೇರಿ ಹರಿಕಂತ್ರವಾಡಾ ನಿವಾಸಿ ಸತೀಶ ತಮ್ಮಣ್ಣಿ ಹರಿಕಂತ್ರ (40) ಕಣ್ಮರೆಯಾದ ಮೀನುಗಾರ.
ಸಿನೆಮಾ ಶೈಲಿಯಲ್ಲಿ ಹಣ ಸುಲಿಗೆ ಯತ್ನ : ಖಾಕಿ ಬಲೆಗೆ ಬಿದ್ದ ಆರೋಪಿಗಳು
ಈತ ಬೆಲೆಕೇರಿ ಮೀನುಗಾರಿಕಾ ಬಂದರಿನಿಂದ ಬೋಟ ಮೂಲಕ ಇತರೆ ಕಾರ್ಮಿಕರೊಂದಿಗೆ ತೆರಳಿ , ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದಾಗ ರವಿವಾರ ಬೆಳಿಗ್ಗೆ ಆಕಸ್ಮಿಕವಾಗಿ ಈ ಜಲ ಅವಘಡ ಸಂಭವಿಸಿದೆ, ಕಣ್ಮರೆಯಾದವನ ಪತ್ತೆ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ಮತ್ತಿತರರು ಬಹು ಹೊತ್ತು ಶೋಧ ನಡೆಸಿದ್ದು,ಕತ್ತಲಾವರಿಸಿದ್ದರಿಂದ ಶೋಧಕಾರ್ಯ ಮೊಟಕು ಗೊಳಿಸಿ ವಾಪಸ್ ಆಗಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಮುಂದುವರೆದಿದ್ದು,ಘಟನೆ ಕುರಿತಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ಕರಾವಳಿ ಕಾವಲು ಪಡೆಯ ಸ್ಪಂದನೆ ಬಗ್ಗೆ ಪ್ರಶ್ನೆ
ಜಲ ಅವಘಡ ಮತ್ತಿತರ ತುರ್ತು ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯವರು ಮೀನುಗಾರರ ರಕ್ಷಣೆ ಮತ್ತಿತರ ಕರ್ತವ್ಯ ನಿರ್ವಹಿಸಬೇಕೆಂದಿದ್ದರೂ, ಅದೇಕೋ ಏನೋ ಬೆಲೆಕೇರಿ ಕರಾವಳಿ ಕಾವಲು ಪಡೆಯ ಒರ್ವ ಪಿ ಎಸ್ ಐ , ಸಮಸ್ಯೆಗೆ ಸ್ಪಂದಿಸುವುದು ಹಾಗಿರಲಿ,ಫೋನ್ ಕರೆ ಮಾಡಿದವರಿಗೂ ಉಡಾಫೆ ರೀತಿಯಲ್ಲಿ ಬೇಜವಾಬ್ದಾರಿಯಿಂದ ಉತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಿರಿಯ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ತಿಳಿಸುವಂತಾಗಿದೆ.
ಇದೇ ಠಾಣೆಯ ಸ್ಥಳೀಯ ಅಧಿಕಾರಿ ಎಸ ಐ ಟಿ ಕರ್ತವ್ಯದಲ್ಲಿ ರುವುದರಿಂದ,ಸಂಬಂಧಿತ ಉಡುಪಿ ವಿಭಾಗದ ಹಿರಿಯ ಅಧಿಕಾರಿ (ಡಿವೈಎಸ್ಪಿ) ಅವರಿಗೆ ಕರೆ ಮಾಡಿ ವಿಷಯ ತಿಳಿಸುವಂತಾಗಿದ್ದು,ಹಿರಿಯ ಅಧಿಕಾರಿಗಳಾದ ಅವರು ಕೇವಲ ಎರಡೇ ಮೊಬೈಲ್ ರಿಂಗಣಕ್ಕೆ ಕರೆ ಸ್ವೀಕರಿಸಿ,ಸಾರ್ವಜನಿಕ ದೂರು ರೀತಿಯ ಫೋನ್ ಕರೆ ಆಲಿಸಿರುವ ರೀತಿ ಮತ್ತು ಸ್ವಂದನೆ ನಿಜಕ್ಕೂ ಅಭಿನಂದನೀಯ ಎಂಬ ಮಾತುಗಳು ಕೇಳಿಬರುವಂತಾಗಿದೆ.
ಸುಮಾರು 13 ವರ್ಷಗಳಿಂದ ಬೆಲೇಕೇರಿಯಲ್ಲಿ ಸಮುದ್ರ ಬೇಹುಗಾರಿಕೆ, ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬ ಬೇಕಿದ್ದ ಇಲ್ಲಿನ ಕರಾವಳಿ ಕಾವಲು ಪಡೆಯಲ್ಲಿ ಈ ಹಿಂದಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಕಮಟ್ಟಿಗೆ ಉತ್ತಮ ಕರ್ತವ್ಯ ನಿಭಾಯಿಸಿರಬಹುದಾದರೂ ಸಹ,ಈವರೆಗೂ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಮಟ್ಟದ ಸಾಧನೆ, ಕಾರ್ಯಾಚರಣೆ ಮಾಡಿಲ್ಲ ಎನ್ನಬಹುದಾಗಿದೆ. ಈಗಿರುವ ಓರ್ವ ಅಧಿಕಾರಿಯಂತೂ ಫೋನ್ ಕರೆ ಸ್ವೀಕರಿಸುವಾಗಲೇ ನನ್ನ ನಂಬರ್ ನಿಮಗೆ ಕೊಟ್ಟಿದ್ಯಾರು ಎಂದು ಕೇಳುವ ರೀತಿ,ಅವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದೇ ಭಾವಿಸಬೇಕಾಗುತ್ತದೆ.
ಇಂತಹ ಅಧಿಕಾರಿಗಳಿಂದಲೇ ಇಲಾಖೆಗೂ ಕೆಟ್ಟ ಹೆಸರು ?
ಹೀಗಾಗಿ ಈ ಅಧಿಕಾರಿ ತನ್ನ ಗುಣ ಸ್ವಭಾವವನ್ನು ಬದಲಿಸಿ ಕೊಂಡು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಲಿ, ಇಲ್ಲವೇ ಇಂಥವರಿಗೆ ಹಿರಿಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕೆಂಬ ಕನಿಷ್ಠ ಜ್ಞಾನವನ್ನು ಹೇಳಿಕೊಡಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇಲ್ಲದಿದ್ದರೆ ಇಂತಹ ಅಧಿಕಾರಿಗಳಿಂದಲೇ ಇಲಾಖೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಹೆಚ್ಚಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ