- ತರಕಾರಿ ವ್ಯಾಪಾರಿಗೆ 20 ಲಕ್ಷಕ್ಕೆ ಬೇಡಿಕೆ
- ಬ್ಲಾಕ್ ಮೇಲ್ ಮಾಡಿದ್ದು ಯಾಕೆ?
- ಮೂವರು ಯುವಕರ ಬಂಧನ
ಭಟ್ಕಳ, ಆಗಸ್ಟ್ 24: ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆ ಮಾತಿದೆ. ಆ ಮಾತಿಗೆ ಅನ್ವರ್ಥಕವಾಗಿ ಭಟ್ಕಳ ತಾಲೂಕಿ ಪ್ರಸಿದ್ಧ ತರಕಾರಿ ವ್ಯಾಪಾರಿಯೊಬ್ಬರಿಗೆ ಮಗಳ ಖಾ-ಸಗಿ ವಿಡಿಯೋ ಇದೆ ಎಂದು ಬೆದರಿಸಿ ಇಡೀ ಕುಟುಂಬವನ್ನು ಸತತ ಎಂಟು ದಿನಗಳವರೆಗೆ ಕಾಡಿದ ಚೋರರ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಲು ಶಹರಾ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ. ಹೌದು, ನಿವಿಲ್ಲಿ ನೋಡ್ತಾ ಮೋಹಮ್ಮದ್ ಫಾರಿಶ್, ಮೊಹಮ್ಮದ್ ಅರ್ಶದ್, ಅಮನ್ ಮಸೂದ್ ಎಂಬ ಖದೀಮರನ್ನ.
ಪ್ರಕರಣದ ವಿವರ
ಆಗಸ್ಟ್ 16, 2025 ರಂದು, ಅನ್ವರ್ ಭಾಷಾ ಎಂಬ ಪ್ರಸಿದ್ಧ ತರಕಾರಿ ವ್ಯಾಪಾರಿಗೆ, ಮೂವರು ಆರೋಪಿಗಳು ಫೋನ್ ಮಾಡಿ – “ನಿನ್ನ ಮಗಳ ಖಾ-ಸಗಿ ಫೋಟೋ ಮತ್ತು ವಿಡಿಯೋ ನಮ್ಮ ಹತ್ತಿರ ಇದೆ. 20 ಲಕ್ಷ ರೂ. ಕೊಡದಿದ್ದರೆ ಎಲ್ಲರಿಗೂ ಹಂಚುತ್ತೇವೆ” ಎಂದು ಬೆದರಿಕೆ ಹಾಕಿದರು. ಇದಾದ ಎರಡು ದಿನಗಳ ನಂತರ (ಆಗಸ್ಟ್ 18), ಅದೇ ಗ್ಯಾಂಗ್ ವ್ಯಾಪಾರಿಯ ಪತ್ನಿಗೆ ಕರೆ ಮಾಡಿ 15 ಲಕ್ಷ ರೂ. ಬೇಡಿಕೆ ಇಟ್ಟಿತು. ಕುಟುಂಬ ಭಯಗೊಂಡು ತಕ್ಷಣವೇ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು.
ಪೊಲೀಸರ ಕಾರ್ಯಚರಣೆ
ಪ್ರಕರಣ ಗಂಭೀರವೆಂದು ಪರಿಗಣಿಸಿದ ಪೊಲೀಸರು, ವೃತ್ತ ನಿರೀಕ್ಷಕ ದಿವಾಕರ ಪಿ.ಎಮ್. ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನವೀನ್ ಎಸ್ ನಾಯ್ಕ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಆರೋಪಿ ಗ್ಯಾಂಗ್ ಸಿನಿಮಿಯ ಮಾದರಿಯಲ್ಲಿ ತಪ್ಪಿಸಿಕೊಂಡರೂ, ದ್ವಿತೀಯ ಹಂತದಲ್ಲಿ ಪೊಲೀಸರು ಅವರನ್ನು ಬಲೆಗೆ ಬೀಸಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಖಾಕಿ ಬಲೆಗೆ ಬಿದ್ದ ಭಟ್ಕಳದ ಸುಲಿಗೆಕೋರರ ಗ್ಯಾಂಗ್
ಮೊದಲ ಹಂತದ ಕಾರ್ಯಾಚರಣೆಯಲ್ಲಿ ಆರೋಪಿ ಗ್ಯಾಂಗ್ ಸಿನಿಮಿಯ ಮಾದರಿಯಲ್ಲಿ ತಪ್ಪಿಸಿಕೊಂಡರೂ, ದ್ವಿತೀಯ ಹಂತದಲ್ಲಿ ಪೊಲೀಸರು ಅವರನ್ನು ಬಲೆಗೆ ಬೀಸಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕೆಲಸ ಕಾರ್ಯ ಮಾಡಿಕೊಳ್ಳದೆ ಊರೂರು ಸುತ್ತುತ್ತಿದ್ದ 20 ವರ್ಷ ಪ್ರಾಯದ ಅಬ್ಬುಹುರೇರಾ ಕಾಲೊನಿ ನಿವಾಸಿ ಮೊಹಮ್ಮದ ಫಾರಿಸ್ ತಂದೆ ಅಬ್ದುಲ್ ಮುತಲ್ಲಬ್, ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಮೂಸಾನಗರ ನಿವಾಸಿ 22 ವರ್ಷ ಪ್ರಾಯದ ಮೊಹಮ್ಮದ ಅರ್ಶದ ತಂದೆ ಮೊಹಮ್ಮದ ಜುಬೇರ್ ಬ್ಯಾರಿ, ಇಂಜಿನಿಯರಿಂಗ್ ವಿದ್ಯಾರ್ಥಿ ಹಾಲಾಡಿ ಜನತಾ ಕಾಲೊನಿಯ 20 ವರ್ಷದ ಅಮನ್ ತಂದೆ ಮಸೂದ ಖಾನ್ ನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳು ಮತ್ತು ಹಣವಂತರ ವಿರುದ್ಧ ಸುಲಿಗೆ ಪ್ರಯತ್ನಗಳು ಹೆಚ್ಚಾಗುತ್ತಿವೆ. ಜನರು ಇಂತಹ ಕರೆಗಳು ಬಂದಾಗ ತಕ್ಷಣ ಪೊಲೀಸರ ನೆರವು ಪಡೆಯುವುದು ಅತಿ ಅಗತ್ಯ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ