ಭಟ್ಕಳ: ಊರಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಾಗ ಒಮ್ಮೆ ಅಲ್ಲಿ ಹೋಗಿ ನೋಡಿಕೊಂಡು ಬರುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಇದು ನಮ್ಮ ನಡುವೆ ಸಾಮರಸ್ಯದ ಭಾವನೆಯನ್ನುಬೆಳೆಯಲು ಸಹಕರಿಸುತ್ತದೆ ಎಂದು ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೆಷನ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.
ತಾಲೂಕಿನ ಜಾಲಿಯಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಭಾಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೇಶನ್ ವತಿಯಿಂತ ರವಿವಾರ ನಡೆದ ಕೃಷ್ಣಲೀಲಾ ಧಾರ್ಮಿಕ ಸ್ಪರ್ಧಾ ಚಟುವಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ಹಬ್ಬಗಳು ಮನೆಯಲ್ಲಿ ಮಾತ್ರ ಆಚರಿಸಲ್ಪಡುತ್ತಿದ್ದು ಧಾರ್ಮಿಕ ಸ್ಪರ್ಧಾ ಚಟುವಟಿಕೆಯ ಕಾರಣಕ್ಕೆ ಎಲ್ಲರೂ ಒಂದು ಕಡೆ ಸೇರಿ ಸಂತಸದಿoದ ಕಳೆಯಲು ಸಂದರ್ಭ ದೊರೆತಂತಾಗಿದೆ.
ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ : ಗಮನಸೆಳೆದ ಬೃಹತ್ ಮೆರವಣಿಗೆ
ಮಕ್ಕಳ ಕಾರ್ಯಕ್ರಮದ ಜತೆ ಮಹಿಳೆಯರಿಗೂ ರಂoಗೋಲಿ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸದಾಕಾಲ ಮನೆಯಲ್ಲಿ ಕಾಲಕಳೆಯುವ ಮಹಿಳೆಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದಂತಾಗಿದೆ. ಸ್ವಾಮಿ ವಿವೇಕಾನಂದ ಪೌಂಡೆಷನ್ ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಶಿಕ್ಷಕ ಡಿಬಿ ನಾಯ್ಕ ಮಾತನಾಡಿ ಜಾಲಿಯಲ್ಲಿ ಇತ್ತಿಚೆಗೆ ಇಂತಹ ಅಪರೂಪದ ಕಾರ್ಯಕ್ರಮಗಳು ನಡೆಯುತ್ತಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು ಸೋತ ಸ್ಪರ್ಧಿಗಳು ಬೆಸರಿಸಿಕೊಳ್ಳದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ ಮುದ್ದು ರಾಧೆ, ಚೆಲ್ವ ಕೃಷ್ಣ ಚೆಲ್ವೆ ರಾಧೆ, ಭಗವತ್ ಗೀತಾ ಶ್ಲೋಕ ಸಾರ, ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು. ಮಕ್ಕಳು ಕೃಷ್ಣ ರಾಧೆಯ ವೇಷ ತೊಟ್ಟ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.
ಭಗವತ್ ಗೀತಾ ಶ್ಲೋಕ ಸಾರ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ತೊದಲು ನುಡಿಯಲ್ಲಿ ಭಗವತ್ವಗೀತೆಯ ಶ್ಲೋಕವನ್ನು ಪಠಿಸಿ, ಅದರ ಅರ್ಥ ವಿವರಿಸಿದ್ದು ವಿಶೇಷವಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಯುವತಿಯರು, ಮಹಿಳೆಯರು ಭಾಗವಹಿಸಿ ಆಕರ್ಷಕ ರಂಗೋಲಿಯನ್ನು ಬಿಡಿಸಿ ಗಮನಸೆಳೆದರು. ಸ್ಪರ್ಧೆಯಲ್ಲಿ ಗೆದ್ದ ಅಬ್ಯರ್ಥಿಗಳಿಗೆ ಸಂಘಟಕರ ಕಡೆಯಿಂದ ಬಹುಮಾನವನ್ನು ವಿತರಿಸಲಾಯಿತು.
ವಿಸ್ಮಯ ನ್ಯೂಸ್ ಈಶ್ವರ ನಾಯ್ಕ ಭಟ್ಕಳ