ಸಿದ್ದಾಪುರ: ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊಡಗಿನ ಕೆ ಎಚ್ ಬಿ-11 ತಳಿಯನ್ನ ತಾಲೂಕಿಗೆ ಪರಿಚಯಿಸಿ , ಭತ್ತದ ಸಸಿ ನಾಟಿ ಮಾಡಿ ಕೃಷಿ ಅಧ್ಯಯನ ಪ್ರಾರಂಭಿಸಿದ ದೃಶ್ಯ ರವಿವಾರ ಕಂಡುಬoದಿತು. ಶಾಲೆಯ ಪಕ್ಕದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡರ 4 ಗುಂಟೆ ಗದ್ದೆಯಲ್ಲಿ ಶಾಲೆಯ ಆಸಕ್ತ 11 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ನಿರತರಾಗಿದ್ದರು.
ಎಮ್ಮೆ ಹತ್ಯೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ವಾಣಿ ನಿತ್ಯಾನಂದ ಗೌಡ ದೀಪ ಬೆಳಗಿಸಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಹಾಗೂ ಗಂಗೆ ಮಾಬ್ಲ ಗೌಡ ಇವರು ಸಸಿ ನೆಡುವ ರೀತಿ ಹಾಗೂ ಸಸಿಯ ಅಂತರವನ್ನು ತಿಳಿಸಿಕೊಟ್ಟರು. ಸ್ಥಳದಲ್ಲಿ ಸ್ಥಳೀಯರಾದ ಲೋಕೇಶ ಪದ್ಮನಾಭ ಗೌಡ, ಜಗದೀಶ ಪದ್ಮನಾಭ ಗೌಡ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ