Important

24 ಗಂಟೆಗಳಿoದ ನಿರಂತರವಾಗಿ ಮಳೆ: ಕೆಲವೆಡೆ ಪ್ರವಾಹ ಪರಿಸ್ಥಿತಿ: ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ

Share

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಗಳಿoದ ನಿರಂತರವಾಗಿ ಮಳೆಯಾಗುತ್ತಿದ್ದು, ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕುಮಟಾ ತಾಲೂಕಿನ ಕೆಲವೆಡೆ ಕೃತಕ ಪ್ರವಾಹ ಉಂಟಾಗಿದ್ದು, ಕೆಳಗಿನಕೇರಿ ಮಜರೆಯ 17 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ. ಕುಮಟಾ ತಹಶೀಲ್ದಾರರಾದ ಕೃಷ್ಣ ಕಾಮ್ಕರ ಅವರು ಸ್ಥಳಕ್ಕೆ ತೆರಳಿ ಪರಿಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಧ್ಯ ತಾಲೂಕಿನಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನಿಡಿದ್ದಾರೆ.

ಇದೇ ವೇಳೆ, ತಾಲೂಕಿನ ಗುಡ್ನಕಟ್ಟು ಭಾಗದಲ್ಲಿ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂದಿದೆ. ತಡರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಗೋಕರ್ಣ ತೊರ್ಕೆ ಗ್ರಾಮದ ಸಾವಿತ್ರಿ ರಾಮಕೃಷ್ಣ ನಾಯಕ ಅವರ ಹಳೆಯ ಮನೆಯು ಕುಸಿದು ಬಿದ್ದು ಹಾನಿಯಾಗಿದೆ. ಆ ಮನೆಯಲ್ಲಿ ಯಾರೂ ವಾಸ್ತವ್ಯ ಇಲ್ಲದ ಕಾರಣ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಲಿoಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆಯ ಕುರಿತು ಎರಡನೇಯ ಮುನ್ನೆಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ನೀರನ್ನು ಹಂತ ಹಂತವಾಗಿ ಹೊರಬಿಡುವುದಾಗಿ ತಿಳಿಸಲಾಗಿದೆ. ಹೀಗಾಗಿ ಜಲಾಶಯದ ಕೆಳಭಾಗz ಸಾರ್ವಜನಿಕರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದುಬಾರಿ ಬೆಟ್ಟದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಕುಮಟಾ ಮುಖ್ಯ ರಸ್ತೆಯ ಬೇಡ್ಕಣಿ ಸಮೀಪದ ದುಬಾರಿ ಘಟ್ಟದಲ್ಲಿ ಭೂಕುಸಿತ ಉಂಟಾಗಿದ್ದು ವಾಹನ ಸವಾರರು ಜಾಗೃತಿಯಿಂದ ಓಡಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಬೆಂಕಿ ಅವಘಡದಲ್ಲಿ ಅಪಾರಹಾನಿ: ಆದರೆ, ಮಾರಿಕಾಂಬೆಯ ಫೋಟೋ ಮಾತ್ರ ಸೇಫ್

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರುವ ಘಟನೆ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳು ವೈದ್ಯರು ಕಲೆ ಮತ್ತು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...

ಬಡ, ಮಧ್ಯಮವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

ಉಡುಪಿ: ರಾಜ್ಯದಲ್ಲೇ ಪ್ರಸಿದ್ಧ ಪಡೆದ ಉಡುಪಿ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ , ಬಡ, ಮಧ್ಯಮವರ್ಗ...

ಶತರುದ್ರ ಮತ್ತು ಶತಚಂಡಿಕಾ ಯಾಗಕ್ಕೆ ಆತ್ಮೀಯ ಸ್ವಾಗತ

ಕಾರವಾರ: ದಿವಂಗತ ಕೃಷ್ಣ ಸೈಲ್ ಹಾಗೂ ಗಿರಿಜಾ ಕೃಷ್ಣ ಸೈಲ್ ರವರ ಆರ್ಶೀವಾದದೊಂದಿಗೆ ಈ ಕ್ಷೇತ್ರದ...

ಸಹಕಾರದ ಬೆಳಕಿನಲ್ಲಿ ಮಹತ್ವದ ಹೆಜ್ಜೆಯಿಟ್ಟ ‘ಸೂರ್ಯ’: ಹೊಸ ಶಾಖೆಗಳತ್ತ ನಾಗರಾಜ ನಾಯಕರ ದೃಷ್ಟಿ”

ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ...

ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಡಿಕ್ಕಿ : ಮಹಿಳೆಗೆ ಗಾಯ

ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ...

ಶಾಲಾ ಮಕ್ಕಳ ಬಸ್ ಪಲ್ಟಿ: ವಿದ್ಯಾರ್ಥಿ ಸಾವು

ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ...