ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ ರಸ್ತೆಯ ಕಡವೆ ಕ್ರಾಸ್ ಬಳಿ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಜಾಗ ನೀಡುವ ವೇಳೆ ಚಾಲಕ ಬಸ್ಸನ್ನು ಡಾಂಬರ್ ರಸ್ತೆಯಿಂದ ಕೆಳಗಿಸಿದ್ದು, ರಸ್ತೆಯ ಪಕ್ಕದಲ್ಲಿ ಹಾಕಿರುವ ಮಣ್ಣು-ಮಳೆ ನೀರಿನಿಂದ ಕೆಸರು ಉಂಟಾಗಿ, ನಿಯಂತ್ರಣ ತಪ್ಪಿ ಗಟಾರಕ್ಕಿಳಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ