ಕುಮಟಾ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದ ಸುಮಾರು 82 ಕೋಟಿಗೂ ಅಧಿಕ ಬೆಳೆವಿಮೆ ಹಣ ಮಂಜೂರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿ ತಾಲೂಕುಗಳ ಸಹಕಾರ ಸಂಘಗಳು ಹಾಗೂ ರೈತ ಬಾಂಧವರಿoದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಕುಮಟಾ ಪಟ್ಟಣದ ಹವ್ಯಕ ಸಭಾ ಭವನದಲ್ಲಿ ನಡೆಯಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸೇರಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಡಿಕೆ ಸಿಂಗಾರವನ್ನು ಸಂಸದರು ಬಿಡಿಸಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಬೆನ್ನೆಲುಬಾಗಿ ನಿಂತಿರುವುದು ಕ್ಯಾಂಪ್ಕೋ ಸಂಸ್ಥೆ. ಈ ಹಿಂದಿನಿoದಲೂ ಅಡಿಕೆ ಬೆಳಗಾರರ ಬೆಂಬಲಕ್ಕೆ ನಿಂತಿರುವ ಕ್ಯಾಂಪ್ಕೋ ಸಂಸ್ಥೆಗೆ ಸದಾ ಋಣಿಯಾಗಿರಬೇಕು. ಅಡಿಕೆ ಕ್ಯಾನ್ಸರ್ ಗೆ ಕಾರಣವಲ್ಲ ಎಂದು ಸಾಬೀತುಪಡಿಸುವಲ್ಲಿ 10 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ತಜ್ಞರ ಸಮಿತಿ ರಚಿಸಿ ವರದಿ ಪಡೆಯುವಲ್ಲಿ ನಾವೆಲ್ಲಾ ಪ್ರಯತ್ನಿಸಿದ್ದೇವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದು ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ಹಣ ಜಮಾಮಾಡಿದ ಮೋದಿಜಿ ರವರು ಮತ್ತು ಬೀಜ ಖರೀದಿಗೆ ನಾಲ್ಕು ಸಾವಿರ ರೂ ಕೊಡುವ ಯಡಿಯೂರಪ್ಪನವರು ಮಾಡಿದ ಯೋಜನೆಗಳು ರೈತರಿಗೆ ತೀರಾ ಅನುಕೂಲವಾಗಿತ್ತು. ಆದರೆ ರಾಜ್ಯ ಸರ್ಕಾರ ರೈತರಿಗೆ ಈ ಕೆಲ ಹಿಂದಿನ ಯೋಜನೆ ಮುಂದುವರೆಸಿಲ್ಲಾ ಎಂದರು. ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ ಮಾತನಾಡಿ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಮಂಜೂರಿಗೆ ಸಹಕರಿಸಿದ ಸಂಸದರಾದ ಕಾಗೇರಿ ಅವರನ್ನು ಮತ್ತು ಶಾಸಕರಾದ ದಿನಕರ ಶೆಟ್ಟಿಯವರನ್ನು ಅಭನಂದಿಸಿದರು. ರೈತರ ಇತರ ಸಮಸ್ಯೆಗಳ ಬಗ್ಗೆ ಮಾತನಾಡಿ, ಗಮನಸೆಳೆದರು.
ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕ ಮಾತನಾಡಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯ ಬೆಳೆಗಾರರ ಬೆಳೆ ವಿಮಾ 2023-24ರ ಹಣ ಬಿಡುಗಡೆಗೆ ಸಂಬAಧಿಸಿದAತೆ ನಮ್ಮ ಜಿಲ್ಲೆಗೆ ಸುಮಾರು 82 ಕೋಟಿ ಹಣವನ್ನು ಮಂಜೂರಿ ಮಾಡಿಸಿಕೊಟ್ಟಿದ್ದಾರೆ. ಅವರನ್ನು ಅಭಿನಂದಿಸುವುದು ಉತ್ತಮ ಕಾರ್ಯವಾಗಿದೆ ಎಂದರು.
ವೇದಿಕೆಯಲ್ಲಿ ವಿಶ್ವನಾಥ ಹೆಗಡೆ ಕೂಜಳ್ಳಿ, ವಿ. ಎನ್. ಭಟ್ಟ, ಅಳ್ಳಂಕಿ, ಕಿಶೋರ ಕುಮಾರ ಕೊಡ್ಡಿ , ಆರ್. ಪಿ. ನಾಯ್ಕ, ವಿವೇಕ. ಎಮ್. ಜಾಲಿಸತ್ಗಿ, ಬರಗದ್ದೆ ಸೊಸೈಟಿಯ ನಿರ್ದೇಶಕರಾದ ಗಣಪತಿ ಹೆಗಡೆ, ಕುಮಟಾ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ, ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ನಾಯ್ಕ, ಕುಮಟಾ ತಾಲೂಕಾಧ್ಯಕ್ಷ ಜಿ.ಐ.ಹೆಗಡೆ ಸೇರಿದಂತೆ ಬಿಜೆಪಿ ಮುಖಂಡರು, ಕರಾವಳಿ ಭಾಗದ ಸಹಕಾರಿ ಸಂಘಗಳ ನಿರ್ದೇಶಕರುಗಳು, ರೈತ ಬಾಂಧವರು ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…