Big News

ವೃದ್ಧರು, ಅಸಹಾಯಕರಿಗೆ ಹೊಸ ಬಟ್ಟೆ ನೀಡಿ ಪುತ್ರಶೋಕ ಮರೆಯಲೆತ್ನಿಸಿದ ಮಿರಾಶಿ ಕುಟುಂಬ

Share

ಅಂಕೋಲಾ: KEBಯ ನಿವೃತ್ತ ಎಕ್ಸಿಕ್ಕೂಟಿವ್ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರಾಮಚಂದ್ರ ತಿಮ್ಮಣ್ಣ ಮಿರಾಶಿ ಅವರು ತಾಲೂಕಿನ ಅಗ್ರಗೋಣ ಮೂಲದವರಾಗಿದ್ದು , ಕಳೆದ ಅನೇಕ ದಶಕಗಳಿಂದ ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಾ ಬಂದಿದ್ದರು. ಹೀಗಿರುತ್ತಾ 1994 ರ ಜೂನ್ 16 ರಂದು ಆ ಕುಟುಂಬದ ಪಾಲಿಗೆ ಅತೀವ ದುಃಖ ಹಾಗೂ ನೋವಿನ ದಿನವಾಗಿದ್ದು ,ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮನೆ ಮಗ ಮಂಜುನಾಥ ಮಿರಾಶಿ ಬದುಕುಳಿಯಲಾರದೇ ದೈವ ಪಾದ ಸೇರಿದ್ದ.

ಈ ನಡುವೆ ಮಗನ ನೆನಪು ಚಿರಸ್ಥಾಯಿ ಆಗಿಸಲು ಈ ಕುಟುಂಬ, ಮೃತನ ಸ್ಮರಣಾರ್ಥ ಬೇರೆ ಬೇರೆ ಪ್ರದೇಶ ಹಾಗೂ ಸಂದರ್ಭಗಳಲ್ಲಿ ನೂರಾರು ಕಾರ್ಯಗಳಿಗೆ ತಮ್ಮ ಕೈಲಾದ ಸೇವೆ – ಸಹಕಾರ – ಪ್ರಾಯೋಜಕತ್ವ ವಹಿಸುತ್ತಾ ಬಂದಿತ್ತು. ಅದರ ಹೊರತಾಗಿ ಅಜ್ಜಿ ಕಟ್ಟಾದ ಕ್ರಿಸ್ತಮಿತ್ರ ಸೇವಾಶ್ರಮದಲ್ಲಿರುವ ವೃದ್ಧರು , ಅಸಹಾಯಕರಿಗೆ ಈ ಹಿಂದೆ ಬ್ಲ್ಯಾಂಕೆಟ್ ನೀಡಿದ್ದ ಮಿರಾಶಿ ಕುಟುಂಬ, ಮಳೆಗಾಲದ ಇಂದಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಅತ್ಯಗತ್ಯವಾಗಿದ್ದ ಹೊಸ ಬಟ್ಟೆಗಳನ್ನು ನೀಡಿ, ಅವರ ಸಂತಸದಲ್ಲಿ ತಮ್ಮ ಮಗನ ಅಗಲುವಿಕೆ ನೋವು ಮರೆಯಲು ಯತ್ನಿಸಿತು.

ಮಳೆಗಾಲ ಎದುರಿಸಲು ಅಗತ್ಯವಾಗಿದ್ದ ಬಟ್ಟೆ ಸಿಕ್ಕ ಸಂತಸದಲ್ಲಿ ಧನ್ಯತೆ ಸೂಚಿಸಿದ ಆಶ್ರಮ ನಿವಾಸಿಗಳು

ಬೆಳಗ್ಗೆ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆರ್ ಟಿ ಮಿರಾಶಿ ಅವರ ಹಿರಿಯ ಮಗಳು ಸಂಧ್ಯಾ ರಮೇಶ ನಾಯಕ ಮಾತನಾಡಿ, ನನ್ನ ಸಹೋದರನನ್ನು ಕಳೆದುಕೊಂಡ ದುಃಖ ಮರೆಯಲು ನಮ್ಮ ಕುಟುಂಬಕ್ಕೆ ಇದೊಂದು ಸುದೈವಾವಕಾಶವಾಗಿದೆ. ಅನಿವಾರ್ಯ ಕಾರಣಗಳಿಂದ ಕುಟುಂಬ ಬಿಟ್ಟು ಇಲ್ಲಿ ಬಂದು ಬಾಳಬೇಕಾದ ನಿಮ್ಮನ್ನೆಲ್ಲ ನೋಡಿದರೆ ಮನಸ್ಸಿಗೆ ಒಂದೆಡೆ ಬೇಸರ ಮತ್ತು ನೋವೆನಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಸೇವೆ ನೀಡುವ ಭಾಗ್ಯ – ಶಕ್ತಿ ನಮ್ಮ ಕುಟುಂಬಕ್ಕೆ ಹೆಚ್ಚಲಿ ಎಂದರು. ಕಳೆದ ಮೂರು ದಶಕಗಳ ಹಿಂದೆ ತಮ್ಮ ಮಗನನ್ನು ಕಳೆದುಕೊಂಡ ಘಟನೆ ಕುರಿತು ಮಾತನಾಡಿದ ಆರ್ ಟಿ ಮಿರಾಶಿ, ತನ್ನ ಏಕೈಕ ಸುಪುತ್ರನ ಸಾವಿನ ನೋವು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಆದರೆ ನಾನು ಮತ್ತು ನನ್ನ ಹೆಂಡತಿ – ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಮುಂದೆಯೂ ನಿಮ್ಮೆಲ್ಲರಿಗೂ ನಮ್ಮ ಕೈಲಾದ ಸೇವೆ ಸಹಕಾರ ನೀಡುವುದಾಗಿ ಹೇಳುತ್ತಾ ಕ್ಷಣಕಾಲ ಭಾವುಕರಾದರು. ಮಳೆಗಾಲದ ಈ ದಿನಗಳಲ್ಲಿ ತಮಗೆ ಅಗತ್ಯವಾಗಿದ್ದ ಹೊಸ ಬಟ್ಟೆ ನೀಡಿದ್ದಕ್ಕೆ ಸಂತಸಗೊoಡ ಅಶ್ರಮದ ಕೆಲ ನಿವಾಸಿಗಳು, ಮಿರಾಶಿ ಕುಟುಂಬಕ್ಕೆ ಧನ್ಯತೆ ಸಮರ್ಪಿಸಿದರೆ ಅವರ ಸಂತಸ ಕಂಡ ಮಿರಾಶಿ ಕುಟುಂಬದವರು ಮಗನ ಅಗಲುವಿಕೆ ದುಃಖ ಮರೆಯಲೆತ್ನಿಸಿ ತಮ್ಮ ಸೇವೆ ಸಾರ್ಥಕವಾಗುತ್ತಿದೆ ಎಂದು ಸಮಾಧಾನ ಪಟ್ಟರಲ್ಲದೇ ಮಗನ ಪುಣ್ಯ ಸ್ಮರಣೆ ನಿಮಿತ್ತ ಜೂನ್ 16 ರಂದು ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಶಾಲಾ ಮಕ್ಕಳ ಬಸ್ ಪಲ್ಟಿ: ವಿದ್ಯಾರ್ಥಿ ಸಾವು

ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ ನಡೆದಿದೆ. ಮೈಸೂರಿನ ಟಿ.ಕೆ ಲೇಔಟ್ ತರಳಬಾಳು ಫ್ರೌಡಶಾಲಾ ವಿದ್ಯಾರ್ಥಿಗಳು ಜೋಗ್ ಫಾಲ್ಸ್ ಪ್ರವಾಸ ಮುಗಿಸಿ...

ತಗ್ಗು ಪ್ರದೇಶದಲ್ಲಿ ಪಲ್ಟಿಯಾದ ಸಾರಿಗೆ ಸಂಸ್ಥೆ ಬಸ್ : ಚಾಲಕ, ನಿರ್ವಾಹಕ , ಪುಟಾಣಿ ಮಗು ಸೇರಿ 26 ಕ್ಕೂ ಹೆಚ್ಚು ಜನರಿಗೆ ಗಾಯ – ನೋವು

ಅಂಕೋಲಾ: ಸಾರಿಗೆ ಸಂಸ್ಥೆಯ ಬಸ್ ಒಂದು ಪಲ್ಟಿಯಾಗಿ ಚಾಲಕ , ನಿರ್ವಾಹಕ, ಪುಟ್ಟ ಮಗು ಹಾಗೂ ಇತರೆ ಪ್ರಯಾಣಿಕರೂ ಸೇರಿ ಸುಮಾರು 26ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಸುಂಕಸಾಳ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಅಂಕೋಲಾದಲ್ಲಿ ಕರಾಳ ದಿನಾಚರಣೆ ಮತ್ತು ಬಂದ್ ಗೆ ಕರೆ

ಅಂಕೋಲಾ: ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನವೆಂಬರ್ 15ರಂದು ಒಂದು ವರ್ಷವಾಗಲಿದ್ದು...

ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ:ಪಿ. ಆರ್. ನಾಯ್ಕ

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು...

ವರ್ಷಾಂತ್ಯಕ್ಕೆ 12 ಲಕ್ಷ ಲಾಭ ಗಳಿಸಿದ ಸೀತಾರಾಮ ಸಹಕಾರಿ ಸಂಘ

ಭಟ್ಕಳ: ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12 ಲಕ್ಷ ಲಾಭ ಗಳಿಸಿದೆ ಎಂದು ಶ್ರೀ ಸೀತಾರಾಮ ಸೌಹಾರ್ಧ...

ಬೈಕಿಗೆ ಡಿಕ್ಕಿ ಹೊಡದ ಲಾರಿ: ಸ್ಥಳದಲ್ಲಿಯೇ ಬೈಕ್ ಸವಾರ ದುರ್ಮರಣ: ಹಿಟ್ & ರನ್ ಕೇಸ್ ದಾಖಲು

ಯಲ್ಲಾಪುರ: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ...

ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ : ಆರೋಪಿ ಬಂಧನ

ಅಂಕೋಲಾ: ಪಟ್ಟಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿತನನ್ನು ಅಂಕೋಲಾ ಪೊಲೀಸರು ವಾಹನ ಸಮೇತ...

ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ಒಟ್ಟೂ 167 ಪ್ರಕರಣಗಳು ರಾಜೀ ಸಂಧಾನದಲ್ಲಿ ಇತ್ಯರ್ಥ

ಅಂಕೋಲಾ: ತಾಲೂಕಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಸೆ 13 ರ ಶನಿವಾರ...

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ: ಶಿಕ್ಷಕ ರಾಷ್ಟ್ರ ರಕ್ಷಕ ಕಾರ್ಯಕ್ರಮ

ಕುಮಟಾ: ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕ ಆ ಮಗುವಿಗೆ ಜ್ಞಾನ ನೀಡಿ ಕಣ್ತೆರೆಯಿಸಿ ಒಳ್ಳೆಯ...