ಸಿದ್ದಾಪುರ: ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ್ ಸಮೀಪ ಇರುವ ಬುರುಡೆ ಜಲಪಾತಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಒತ್ತಾಯ ಮಾಡಿದ್ದಾರೆ. ಈ ಪ್ರವಾಸಿ ತಾಣಕ್ಕೆ ದಿನನಿತ್ಯ ನೂರಾರು ಜನ ಪ್ರವಾಸಿಗರು ಆಗಮಿಸುತ್ತಾರೆ . ವಯಸ್ಸಾದವರು ಅಂಗವಿಕಲರು ಬಂದರೆ ಕೆಳಗೆ ಇಳಿಯಲು ಆಗದೆ ಇರುವುದರಿಂದ ಇಲ್ಲಿಯೆ ನಿಂತು ಜಲಪಾತವನ್ನು ವೀಕ್ಷಿಸಲು ಬಯಸುತ್ತಾರೆ.
ಆದರೆ ಮರದ ಟೊಂಗೆ ಗಳು ಅಡ್ಡ ಇರುವುದರಿಂದ ಜಲಪಾತ ಧುಮುಕುವುದು ಕಾಣಿಸುವುದಿಲ್ಲ . ಹಾಗೆ ಬೇಸರದಿಂದ ಹೋಗುವಂತಹ ವಾತಾವರಣ ನಿರ್ಮಾಣವಾಗಿದೆ . ಅಲ್ಲದೆ ಹೊಳೆಯವರೆಗೂ ಮೆಟ್ಟಿಲುಗಳು ಇಲ್ಲದೆ ಇರುವುದರಿಂದ ಕೆಲವು ಅಪಘಾತಗಳು ಕೂಡ ಇಲ್ಲಿ ಸಂಭವಿಸುತ್ತವೆ ಸಂಬoಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಇಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ