Important

Cyber Crime ವಿರುದ್ಧ ಹೋರಾಡಿದ ಶಿರೂರು ಶ್ವಾನ: ಐದು ಕೀಲೋಮೀಟರ್ ಓಡಿ ಪದಕ ಬೇಟೆ

Share

ಅಂಕೋಲಾ: ಕಳೆದ ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನ ಗುಡ್ಡ ಕುಸಿತ ಸಂಭವಿಸಿದ್ದು ಆ ದುರಂತದಲ್ಲಿ ಒಟ್ಟೂ 11 ಮಂದಿ ಮೃತಪಟ್ಟು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದು ಈಗ ಇತಿಹಾಸ. ಇದೇ ವೇಳೆ ಹೆದ್ದಾರಿ ಅಂಚಿಗೆ ಸಣ್ಣ ಟೀ ಸ್ಟಾಲ್ ಮಾದರಿ ಹೊಟೇಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ , ತಾವು ವಾಸವಾಗಿದ್ದ ಕಟ್ಟಡ ಸಮೇತ ಜಲ ಸಮಾಧಿಯಾಗಿದ್ದರು.

ಆದರೆ ಅವರ ಮನೆ ಮತ್ತು ಹೊಟೇಲ್ ಬಳಿ ಉಳಿಯುತ್ತಿತ್ತು ಎನ್ನಲಾದ ಕೆಲ ನಾಯಿಗಳ ಪೈಕಿ , ಒಂದು ನಾಯಿ ಮಾತ್ರ ಗುಡ್ಡ ಕುಸಿತ ದುರಂತದ ವೇಳೆ ಅದೇಗೋ ಬದುಕುಳಿದು , ದಿನಾಲು ತನಗೆ ಅನ್ನ ಹಾಕುತ್ತಿದ್ದವರನ್ನು ಕಳೆದುಕೊಂಡು ರೋಧಿಸುತ್ತಿತ್ತು. ಅನಾಥ ವಾಗಿದ್ದ ಈ ಮೂಕ ಪ್ರಾಣಿಯ ರೋದನ ಕಂಡು ಮರುಗಿದ್ದ ಎಸ್ಪಿ ಎಂ ನಾರಾಯಣ , ಬಳಿಕ ಅದನ್ನು ದತ್ತು ಸ್ಟೀಕರಿಸಿದವರಂತೆ ತಮ್ಮ ಮನೆಗೆ ಕರೆದೊಯ್ದು , ಪ್ರಥ್ವಿ ಎಂಬ ಮರು ನಾಮಕರಣದೊಂದಿಗೆ ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದ್ದರು.ಅಷ್ಟೇ ಅಲ್ಲದೇ ಆ ನಾಯಿಗೆ ವಿಶೇಷ ತರಬೇತಿ,ಆಹಾರ ,ಮತ್ತಿತರ ಪೂರಕ ವ್ಯವಸ್ಥೆಗಳು ಸಿಗುವಂತೆ ಏರ್ಪಾಟು ಮಾಡಿದ್ದರು.

ಇದೀಗ ಅದೇ ನಾಯಿ , ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಪೊಲೀಸ್ ಓಟ 2025 ರ 5K ಮ್ಯಾರಥಾನ್ ನಲ್ಲಿ ಪಾಲ್ಗೊಂಡು ನಿಗದಿತ ಗುರಿ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದೆ. ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ,ಶಾಸಕ ಸತೀಶ್ ಸೈಲ್ ,ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ,ರಾಜ್ಯ ಹೊರ ರಾಜ್ಯದಿಂದ ಬಂದಿದ್ದ ಕೆಲ ತಾರೆ ಗಳು ಮತ್ತಿತರ ಸೆಲೆಬ್ರಿಟಿಗಳು ಮತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮತ್ತಿತರ ಒಟಗಾರರೊಂದಿಗೆ ಹೆಜ್ಜೆ ಹಾಕಿ ದೂರದ ಒಟ ಪೂರೈಸಿದ ಈ ಶ್ವಾನಕ್ಕೆ ಬೆಳ್ಳಿ ಪದಕ ಹಾಕಿ ಶಾಸಕರು ಗೌರವಿಸುವ ಮೂಲಕ ಈ ನಾಯಿ ಒಟ್ಟಾರೆ ಕಾರ್ಯಕ್ರಮದಲ್ಲಿ ಸಖತ್ ವೈರಲ್ ಆಗುವಂತಾಗಿತ್ತು.

ಎಲ್ಲೋ ಹೆದ್ದಾರಿ ಬದಿ ದಿನಾಲೂ ಕೂಳು ಹಾಕುತ್ತಿದ್ದ ಮೂಲ ಮಾಲಕರಿಲ್ಲದೇ ಅತಂತ್ರ ಜೀವನ ಸಾಗಿಸ ಬೇಕಿದ್ದ ನಾಯಿ , ಎಸ್ಪಿ ಎಂ ನಾರಾಯಣ ಅವರ ಪ್ರಾಣಿ ದಯೆಯ ಮೂಲಕ ಇಂದು ದೇಶ ವಿದೇಶಗಳಲ್ಲೂ ಹೆಸರಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿರುವುದು , ಒಂದರ್ಥದಲ್ಲಿ ನಾಯಿಗೆ ಶಿರೂರು ಗುಡ್ಡ ಕುಸಿತದಲ್ಲಿ ಮಾಲಕರನ್ನು ಕಳೆದು ಕೊಂಡ ದುರದೃಷ್ಟ ಎಂದೆನಿಸಿದರೂ, ಇನ್ನೊಂದರ್ಥದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರನ್ನೇ ಮಾಲಕರನ್ನಾಗಿಸಿಕೊಂಡ ಸೌಭಾಗ್ಯ ಒದಗಿ ಬಂದoತಿದೆ.

ಈ ಮೂಲಕ ತನ್ನ ಜನಪರ ಮತ್ತು ಉತ್ತಮ ಆಡಳಿತದ ಮೂಲಕ ಹೆಸರಾಗಿರುವ ಎಸ್ಪಿ ಎಂ ನಾರಾಯಣ , ತಮ್ಮ ಪ್ರಾಣಿದಯೆ ಮತ್ತು ಪ್ರೀತಿಯ ಮೂಲಕವೂ ಮತ್ತೊಮ್ಮೆ ಹಲವರ ಮನಗೆದ್ದಿದ್ದಾರೆ. ಪುರಾಣ ಕಥೆಗಳಲ್ಲಿಯೂ ನಾರಾಯಣ ಹಾಗೂ ನಾಯಿ ಸಂಬAಧದ ಬಗ್ಗೆ ಉಲ್ಲೇಖವಿದ್ದು , ನೀವು ಸಹ ಪ್ರಾಣಿ ದಯೆ ಉಳ್ಳವರಾಗಿದ್ದರೆ ಮತ್ತು ಎಸ್ಪಿ ಅವರ ಪ್ರಾಣಿ ದಯೆ ಬಗ್ಗೆ ಸಂತಸ ಗೊಂಡಿದ್ದರೆ ತಪ್ಪದೇ ಒಂದು ಮೆಚ್ಚುಗೆ ಸೂಚಿಸಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

Don't Miss

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ನೋಡಿ?

ಕಾರವಾರ: ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಶೇ. 106 ರಷ್ಟು ಮಳೆಯಾಗಲಿದ್ದು, 87...

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಿತು. ಕಾರಣಾಂತರಗಳಿoದ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ ರಸ್ತೆಯ ಕಡವೆ ಕ್ರಾಸ್ ಬಳಿ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಜಾಗ ನೀಡುವ ವೇಳೆ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

Related Articles

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ...