Important

ಬ್ರಹ್ಮಾನಂದ ಸರಸ್ವತಿ ಶ್ರೀಗಳಿಗೆ ಗುರುನಮನ: ಶ್ರೀಗಳಿಗೆ ಅದ್ಧೂರಿಯಾಗಿ ಸ್ವಾಗತ

Share

ಕುಮಟಾ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಭಾರತದ ಸುಮಾರು ೧೫ ಸಾವಿರ ನಾಗಾಸಾಧುಗಳು ಕೂಡಿ ಸನ್ಯಾಸಿ ಪರಂಪರೆಯಲ್ಲಿಯೇ ಮೊಟ್ಟಮೊದಲಬಾರಿಗೆ ಕರ್ನಾಟಕದ ಮದಲ ಮಂಡಲಾಧೀಶ್ವರರನ್ನಾಗಿ ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾದೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಪಟ್ಟಾಭಿಷೇಕವನ್ನು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆಯೊಂದಿಗೆ ಗುರುನಮನ ಕಾರ್ಯಕ್ರಮವನ್ನು ಕುಮಟಾ ತಾಲೂಕಿನ ನಾಮಧಾರಿ ಸಭಾಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಗುರುಗಳಿಗೆ ನಾಮಧಾರಿ ಸಮಾಜದ ಪ್ರಮುಖರು ತುಳಸಿಮಾಲೆ ಹೂಹಾರವನ್ನು ಸಮರ್ಪಿಸಿ ಗೌರವದಿಂದ ಬರಮಾಡಿಕೊಂಡರು. ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ ದಂಪತಿಗಳು ಗುರುಗಳ ಪಾದಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಕುಮಟಾ ಇದರ ಸಂಚಾಲಕರಾದ ಆರ್.ಜಿ.ನಾಯ್ಕ ಅವರು ಮಾತನಾಡಿ ಕೇವಲ ಹದಿನೈದು ವರ್ಷಗಳಲ್ಲಿ ಶ್ರೀಗಳು ಉತ್ತರ ಪ್ರದೇಶದಲ್ಲಿ ಮಠ ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಭಾರತದ ಸ್ವಾಮೀಜಿಯೊಬ್ಬರು ಉತ್ತರ ಭಾರತದ ಕಡೆ ಹಲವಾರು ಮಠಗಳನ್ನು ಸ್ಥಾಪಿಸಿರವುದು ಸಣ್ಣ ವಿಚಾರವಲ್ಲ. ಶ್ರೀಗಳು ಶೈಕ್ಷಣಿಕ, ಆಧ್ಯಾತ್ಮಿಕ ಆಲೋಚನೆ ಮೇರೆಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 25 ಲಕ್ಷ ನಾಗಾಸಾಧುಗಳಲ್ಲಿ ಶ್ರೀಗಳು ಮಹಾಮಂಡಲೇಶ್ವರ 1008 ಪರಮೋಚ್ಚ ಹುದ್ದೆಯನ್ನು ಪಡೆದ ದೈವಿಕ ಶಕ್ತಿ ನಮ್ಮ ಶ್ರೀಗಳಾಗಿದ್ದಾರೆ.

ಆದ ಕಾರಣದಿಂದ ಕುಮಟಾ ಹಾಗೂ ಹೊನ್ನಾವರದ ಜನತೆಯ ಸಹಕಾರವನ್ನು ಪಡೆದುಕೊಂಡು ಮೊಟ್ಟಮೊದಲ ಚಾತುರ್ಮಾಸವನ್ನು ಕುಮಟಾದ ಕೋನಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕುಮಟಾದಲ್ಲಿ ನಡೆಯುತ್ತಿರುವ ಶ್ರೀ ಗುರುಗಳ ಮೊಟ್ಟ ಮೊದಲ ಚಾತುರ್ಮಾಸವಾಗಿದ್ದರಿಂದ ಇದು ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೊಂದು ವಿನಂತಿಸಿಕೊoಡರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತರಾಗಿರುವ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿರುವ ಕಾಗಾಲದ ನಾಗರಾಜ ನಾಯ್ಕ ದಂಪತಿಗಳನ್ನು ಶ್ರೀಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆರ್ಶೀವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಧ್ಯಾತ್ಮದಿಂದ ಆನಂದವನ್ನು ಪಡೆಯುವವರೇ ನಿಜವಾದ ಸನ್ಯಾಸಿಗಳು. 2 ತಿಂಗಳಿನಿoದ ಸರಿಯಾಗಿ ನಿದ್ದೆ ಮಾಡದೇ ನಿರಂತರ ಧ್ಯಾನ ತಪಸ್ಸುಗಳ ಮೂಲಕ ಸಾಧನೆ ಮಾಡಲಾಗಿದೆ. ಚಾತುರ್ಮಾಸ ಎಂದರೆ ಸಾಕ್ಷಾತ್ ಭಗವಂತನೇ ಭೂಮಿಗೆ ಬರುವ ಒಂದು ಸನ್ನಿವೇಶವಾಗಿದೆ. ಹಿಂದೆ ಮಹಾಭಾರತದ ಕಾಲದಿಂದಲೂ ಈ ಚಾತುರ್ಮಾಸ ವೃತಾಚರಣೆ ನಡೆದುಕೊಂಡು ಬಂದಿರುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ಶಾಸಕರಾದ ದಿನಕರ ಶೆಟ್ಟಿಯವರು ಆಗಮಿಸಿ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡರು. ಉದ್ಯಮಿಗಳಾದ ಮುರಳೀಧರ ಪ್ರಭು, ನಾಮಧಾರಿ ಸಂಘದ ಪ್ರಮುಖರಾದ ಎಚ್.ಆರ್.ನಾಯ್ಕ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ, ರತ್ನಾಕರ ನಾಯ್ಕ, ಸತೀಶ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಕಾರ್ಯದರ್ಶಿಗಳಾದ ರಾಘವೇಂದ್ರ ನಾಯ್ಕ, ಸಂತೋಷ ನಾಯ್ಕ, ವೈಭವ ನಾಯ್ಕ, ಸಂಘದ ನಿರ್ದೆಶಕರಾದ ಕಮಲಾಕರ ನಾಯ್ಕ, ಗಜಾನನ ನಾಯ್ಕ, ಸುರೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ

Share

Don't Miss

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

ಭಟ್ಕಳದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ: 80ಕ್ಕೂ ಹೆಚ್ಚು ಜನರಿಂದ ರಕ್ತದಾನ

ಭಟ್ಕಳ: ಪುನಿತ್ ರಾಜಕುಮಾರು ಬದುಕಿದ ರೀತಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ಅದರಲ್ಲೂ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ಗೊತ್ತಾಗದಂತೆ ಅದನ್ನು ನಿಭಾಯಿಸಿದ ರೀತಿ ನಿಜಕ್ಕೂ ಅನನ್ಯ. ಇಂತಹ...

ಸಿಐಡಿ ಡಿವೈಎಸ್ಪಿಯಾಗಿ ಎಚ್ ಜಯರಾಜಗೆ ಪದೋನ್ನತಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಜನರ ನಡುವೆ ಬೆರೆಯುವ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡು ಸಮಾಜಘಾತುಕ...

ವಿಶ್ವಜಲ ದಿನ ಆಚರಣೆ: ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ

ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ...

ಜನಸಾಮಾನ್ಯರ ಆರ್ಥಿಕ ಮಟ್ಟ ಏರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ: ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್

ಭಟ್ಕಳ: ಕಾಂಗ್ರೇಸ್ ಪಕ್ಷ ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಹೊರತರಲಿಲ್ಲ. ಬದಲಾಗಿ ಜನಸಾಮಾನ್ಯರ ಆರ್ಥಿಕ ಮಟ್ಟವನ್ನು ಏರಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಕೊಳ್ಳುವಿಕೆಯ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಚೈತನ್ಯಕ್ಕೆ...

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

Related Articles

ಸಿಐಡಿ ಡಿವೈಎಸ್ಪಿಯಾಗಿ ಎಚ್ ಜಯರಾಜಗೆ ಪದೋನ್ನತಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ...

ಜನಸಾಮಾನ್ಯರ ಆರ್ಥಿಕ ಮಟ್ಟ ಏರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ: ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್

ಭಟ್ಕಳ: ಕಾಂಗ್ರೇಸ್ ಪಕ್ಷ ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಹೊರತರಲಿಲ್ಲ. ಬದಲಾಗಿ ಜನಸಾಮಾನ್ಯರ...

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ...

ಭಟ್ಕಳದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ: 80ಕ್ಕೂ ಹೆಚ್ಚು ಜನರಿಂದ ರಕ್ತದಾನ

ಭಟ್ಕಳ: ಪುನಿತ್ ರಾಜಕುಮಾರು ಬದುಕಿದ ರೀತಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು...