ಸಿದ್ದಾಪುರ: ತಾಲೂಕಿನ ಇಟಗಿಯ ಶ್ರೀ ರಾಮೇಶ್ವರ ದೇವರ ಮಹಾರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು. ದೇವಾಲಯದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರು ದೇವರಿಗೆ ಹಣ್ಣುಕಾಯಿ ಸೇವೆ ಕುಂಕುಮಾರ್ಚನೆ, ಮಂಗಳಾರತಿ ಮುಂತಾದ ಸೇವೆ ಸಲ್ಲಿಸಿದರು. ಅಡಿಕೆಕೊನೆ, ಬಾಳೆ ಗೊನೆ ಮುಂತಾದ ಫಲಗಳನ್ನು ಅರ್ಪಿಸಿದರು.
ದೇವಾಲಯದಲ್ಲಿ ಸರತಿ ಸಾಲಿನಲ್ಲಿ ಬಂದ ಭಕ್ತರು ಶ್ರೀ ರಾಮೇಶ್ವರ ಹಾಗೂ ಅಮ್ಮನವರು ಮತ್ತು ಪರಿವಾರ ದೇವರುಗಳ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಮಹಾಪೂಜೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ