Big News

ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ: ಸಾಧಕರಿಗೆ ಸಂದಿತು ಸನ್ಮಾನ

Share

ಹೊನ್ನಾವರ: ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆಯಿತು.

“ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಪಿಎಸ್‌ಐ ಮಮತಾ ನಾಯ್ಕ ಅವರು ಉದ್ಘಾಟಿಸಿ ಮಾತನಾಡಿದರು. ಮನುಸ್ಮೃತಿಯಲ್ಲಿ ಹೆಣ್ಣನ್ನು ನಾಲ್ಕು ಗೋಡೆಯೊಳಗೆ ಸಿಮೀತವಾಗಿಡುವಂತೆ ಬರೆಯಲಾಗಿದೆ. ಆದರೆ ಇಂದು ಎಲ್ಲಾ ರಂಗದಲ್ಲಿಯೂ ಮಹಿಳೆ ಸಮರ್ಥಳು ಎಂದು ತೋರಿಸಿದ್ದು, ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ್ದಾಳೆ. ವಿವಾಹದ ಬಳಿಕ ಹೆಣ್ಣು ಇಂದು ತಮ್ಮ ವೃತಿಯಿಂದ ದೂರವಾಗುತ್ತಿದ್ದಾಳೆ. ಸ್ವಾವಲಂಭಿ ಜೀವನ ನಡೆಸಲು ವಿವಾಹದ ನಂತರವು ಶಿಕ್ಷಣ ಹಾಗೂ ಉದ್ಯೋಗ ಮುಂದುವರೆಸಬೇಕು. ಸರ್ಕಾರವು ಹಲವು ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.

ಹೊನ್ನಾವರ ಜೆ.ಎಂ.ಎಫ್.ಸಿ ನ್ಯಾಯಲಯದ ಸಹಾಯಕ ಸರಕಾರಿ ಅಭಿಯೋಜಕರಾದ ಸಂಪದಾ ಗುನಗಾ ಕಾನೂನು ಸಾಕ್ಷರತೆ ಮತ್ತು ಮಹಿಳೆಯರ ಸಬಲಿಕರಣದ ಕುರಿತು ಉಪನ್ಯಾಸ ನೀಡಿ,ಮಹಿಳೆ ಎಂದರೆ ಅಬಲೆಯಲ್ಲ,ಸಬಲೆ.ಇಂದು ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳಿದ್ದರು ಅನೇಕ ವಲಯಗಳಲ್ಲಿ ತೊಂದರೆ ಅನುಭವಿಸುವುದು ಮುಂದುವರೆದಿದೆ.ಕೆಲಸದ ಒತ್ತಡದಿಂದ ಕುಟುಂಬದೊoದಿಗೆ ಸುಖಮಯ ಜೀವನ ಕಳೆಯುವುದು ಕಡಿಮೆಯಾಗುತ್ತಿದೆ. ಮಹಿಳೆಯರಿಗಾಗಿ ಇರುವ ಕಾನೂನುಗಳ ಅರಿವು ಹೊಂದಬೇಕು.ದೌರ್ಜನ್ಯ ಮೀತಿ ಮೀರಿದಾಗ ಮಾತ್ರ ಕಾನೂನು ಮೊರೆ ಹೋಗಬೇಕೆ ವಿನಃ,ಸಣ್ಣಪುಟ್ಟ ವಿಚಾರಗಳಿಗು ಕಾನೂನು ಎನ್ನುವ ಬದಲು ಸಮಸ್ಯೆ ನಿಮ್ಮಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪ್ರವೀಣ ಕರಾಂಡೆ ಮಾತನಾಡಿ, ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣಕ್ಕೆ ಎಲ್ಲ ಅವಕಾಶಗಳು ಲಭ್ಯವಿದೆ. ಮಹಿಳೆಯರು ಇಂದು ಉನ್ನತ ಸ್ಥಾನವನ್ನು ಅಲಂಕರಿಸುವ ಮೂಲಕ ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿಕೊಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಇಂದು ಶೇ. 70 ರಿಂದ 80 ರಷ್ಟು ಮಹಿಳೆಯರು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ಸ್ಥಾನಮಾನವಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರನ್ನು, ಸನ್ಮಾನಿಸಲಾಯಿತು. ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...

ಭಟ್ಕಳದಲ್ಲಿ 14 ಜಾನುವಾರಗಳ ರಕ್ಷಣೆ : ಇಬ್ಬರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರ ವಿರುದ್ಧ ಭಟ್ಕಳ ಪಟ್ಟಣ ಪೊಲೀಸ್...

ಮಹಾಶಿವರಾತ್ರಿ ಪುಣ್ಯಕಾಲದಲ್ಲಿ ಕಣಕಣೇಶ್ವರ ದೇವರ ನೂತನ ಭವ್ಯ ದೇವಸ್ಥಾನ ಲೋಕಾರ್ಪಣೆ :ಶಿಖರ ಕಲಶ ಪ್ರತಿಷ್ಠೆ – ಅಷ್ಟಬಂಧ ಸಮೇತ ನೂತನ ಶಿವಲಿಂಗ ಪ್ರತಿಷ್ಠಾ ಮಹೋತ್ಸವ

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಕಣಕಣೇಶ್ವರ ದೇವಾಲಯವು ಮಹಾಶಿವರಾತ್ರಿ ಪುಣ್ಯಸಂದರ್ಭದಲ್ಲಿ ನೂತನ...

ಬೆಂಕಿ ಅವಘಡದಲ್ಲಿ ಅಪಾರಹಾನಿ: ಆದರೆ, ಮಾರಿಕಾಂಬೆಯ ಫೋಟೋ ಮಾತ್ರ ಸೇಫ್

ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ–ಕುಂಬಾರಕೇರಿ ಪ್ರದೇಶದಲ್ಲಿರುವ ಶ್ರೀ ಮಹಾಲಸಾ ವೆಲ್ಡಿಂಗ್ ಶಾಪ್ನಲ್ಲಿ ಫೆಬ್ರವರಿ 9ರ ಸೋಮವಾರ...

ಅಂಕೋಲಾದಲ್ಲಿ ಕರಾಳ ದಿನಾಚರಣೆ ಮತ್ತು ಬಂದ್ ಗೆ ಕರೆ

ಅಂಕೋಲಾ: ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನವೆಂಬರ್ 15ರಂದು ಒಂದು ವರ್ಷವಾಗಲಿದ್ದು...

ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ:ಪಿ. ಆರ್. ನಾಯ್ಕ

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು...