ಶಿರಸಿ: 6 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹೆಚ್ಚುವರಿ ಸಹಾಯಕ ಸರ್ಕಾರಿ ಅಭಿಯೋಜಕನನ್ನು ಬಂಧಿಸಿದ್ದಾರೆ. ಶಿರಸಿ ನ್ಯಾಯಾಲಯದ ಪ್ರಕಾಶ ಪಿ ಬಂಧಿತ ಸರ್ಕಾರಿ ಅಭಿಯೋಜಕರಾಗಿದ್ದಾರೆ. ಪ್ರಕರಣವೊಂದಲ್ಲಿ ಮಾಲನ್ನು ಬಿಡಿಸಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪವನಕುಮಾರ ಎಂಬುವವರು ಕಾರವಾರದ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಿದ್ದರು.
ಅದರಂತೆ ಪ್ರಕಾಶ ಪಿ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಅವರನ್ನು ವಶಕ್ಕೆ ಪಡೆದಿದೆ. ಲೋಕಾಯುಕ್ತ ಇನ್ಸೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ ಎಂದು ಲೋಕಾಯುಕ್ತ ಎಸ್.ಪಿ ಕುಮಾರಚಂದ ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್, ಶಿರಸಿ