ಮುಂಡಗೋಡ : ರಾಜ್ಯದ ಕೆಲವೆಡೆ ಹಕ್ಕಿ ಜ್ವರ ಕಂಡುಬoದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಅತ್ತಿವೇರಿ ಪಕ್ಷಿಧಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಕ್ಕಿಜ್ವರವು ಕೆಲವೆಡೆ ಕಂಡುಬoದಿರುವುದರಿoದ ಮುಂಜಾಗ್ರತಾ ಕ್ರಮವಾಗಿ ಪಕ್ಷಿಧಾಮದ ಸುತ್ತಲೂ ವೀಕ್ಷಣೆ ಮಾಡಲಾಗಿದೆ.
ಯಾವುದೇ ಹಕ್ಕಿಗಳು ಮೃತಪಟ್ಟಿಲ್ಲ. ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಅತ್ತಿವೇರಿ ಪಕ್ಷಿಧಾಮದಲ್ಲಿ ಇರುವುದರಿಂದ ಅವುಗಳ ಚಲನವಲನ ಮೇಲೆ ನಿಗಾ ಇಡುವುದು ಕಷ್ಟ. ಆದರೆ, ಹಕ್ಕಿಗಳು ಮೃತಪಟ್ಟರೆ ಅವುಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಬೇಕಾಗುತ್ತದೆ ಎಂದು ಎಸಿಎಫ್ ರವಿ ಹುಲಕೋಟಿ ಹೇಳಿದರು. ಸ್ಥಳೀಯ ಅಥವಾ ವಲಸೆ ಹಕ್ಕಿಗಳು ಸತ್ತಿರುವಂತ ಘಟನೆಗಳು ಕಂಡುಬoದರೆ, ಪಕ್ಷಿಧಾಮಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗುವುದು. ಸದಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದರು.
ವಿಸ್ಮಯ ನ್ಯೂಸ್, ಮುಂಡಗೋಡು